ಉತ್ತಮ ಸಮಾಜಕ್ಕಾಗಿ

ಡಾ.ಎ.ಜೆ.ಧುಮಾಳೆ ಅವರಿಗೆ ಡಾ. ಅಬ್ದುಲ್ ಕಲಾಂ ಎಕ್ಸೆಲೇನ್ಸ್ ಪ್ರಶಸ್ತಿ ಪ್ರದಾನ

0

ಡಾ.ಎ.ಜೆ.ಧುಮಾಳೆ ಅವರಿಗೆ ಡಾ. ಅಬ್ದುಲ್ ಕಲಾಂ ಎಕ್ಸೆಲೇನ್ಸ್ ಪ್ರಶಸ್ತಿ ಪ್ರದಾನ

ಬೆಳಗಾವಿ : ಜಿಲ್ಲಾ ಪಂಚಾಯತ ಬೆಳಗಾವಿಯ ನರೇಗಾ ಓಂಬುಡ್ಸಮನ್ ಹಾಗೂ ನಿವೃತ ಕೆ.ಎ.ಎಸ್. ಅಧಿಕಾರಿ ಡಾ. ಎ.ಜೆ.ಧುಮಾಳೆ, ಇವರಿಗೆ ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವರಾದ ಎಮ್.ವ್ಹಿ.ರಾಜಶೇಖರನ್ ಅವರು “ಭಾರತ ರತ್ನ ಡಾ.ಅಬ್ದುಲ್ ಕಲಾಂ ಎಕ್ಸೆಲೇನ್ಸ್ ಅವಾರ್ಡ ೨೦೧೮” ಪ್ರಶಸ್ತಿ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಲೋಕಸಭಾ ಸದಸ್ಯೆ ಶ್ರೀಮತಿ. ಬಿಂಬಾ ರಾಯಕರ ಹಾಗೂ ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ನಿರ್ದೇಶಕರಾದ ಮಹೇಶ ಜೋಶಿ ಹಾಜರಿದ್ದರು.

ಡಾ.ಎ.ಜೆ. ಧುಮಾಳೆ ಅವರ ಸಾಧನೆ :

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಉದ್ಯೊÃಗ ಖಾತರಿ ಯೋಜನೆಯ ಬಂದ ದೂರುಗಳ ಕುರಿತು ಧುಮಾಳೆಯವರ ಅನೇಕ ಉಲ್ಲೆಖನೀಯ ಕಾರ್ಯನಿರ್ವಹಿಸಿದ್ದಾರೆ.

ಹೊಸದಾಗಿ ಬಂದ ೨೮೫ ನರೇಗಾ ಪ್ರಕರಣಗಳಲ್ಲಿ ೨೭೯ ಪ್ರಕರಣಗಳನ್ನು ನಿಖಾಲೆ ಮಾಡಿ ೪೩ ಪ್ರಕರಣಗಳಲ್ಲಿ ೨,೭೭,೮೭,೯೬೬/-ರೂ. ಹಣವನ್ನು ತಪ್ಪಿತಸ್ಥರಿಂದ ವಸೂಲಿ ಮಾಡಲು,

೨೮ ಪ್ರಕರಣಗಳಲ್ಲಿ ರೂ.೨೭,೦೩,೭೪೧/-ಗಳನ್ನು ನಿರುದ್ಯೊಗ ಭತ್ತೆ ನೀಡುವಂತೆ ಹಾಗೂ ೩ ಪ್ರಕರಣಗಳಲ್ಲಿ ೧,೯೮,೭೧೨/- ರೂ. ಗಳನ್ನು ಬಾಕಿ ಕೂಲಿ ಹಣ ಪಾವತಿಸುವಂತೆ ಹಾಗೂ ೨,೬೩,೧೯೩/- ರೂ. ಗಳನ್ನು ಬಾಕಿ ಮಟೇರಿಯಲ್ ಹಣ ಪಾವತಿಸಲು ಆದೇಶ ಮಾಡಿದ್ದಾರೆ. ಅದಲ್ಲದೇ ತಪ್ಪಿತಸ್ಥ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮೇಲೆ ಕ್ರಮ ಶಿಫಾರಸ್ಸು ಮಾಡಿದ್ದಾರೆ.

೧೯೮೧ ರಲ್ಲಿ ಕಾರವಾರ ಜಿಲ್ಲೆಯ ಮುಂಡಗೋಡ ತಹಶೀಲ್ದಾರರಾಗಿ ಸೇವೆ ಪ್ರಾರಂಭಿಸಿದ ಇವರು ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ವೃದ್ಧಾಪ್ಯವೇತನ ಮಂಜೂರಿಯಲ್ಲಿ ವಿವಿಧ ಕಚೇರಿಗಳಿಂದ ಹಾಗೂ ಮಧ್ಯವರ್ತಿಗಳಿಂದ ಸಾರ್ವಜನಿಕರಿಗಾಗುವ ತೊಂದರೆ ತಪ್ಪಿಸಲು ಸ್ಥಳದಲ್ಲಿಯೇ ಮಂಜೂರಾತಿ ಶಿಬಿರ ಏರ್ಪಡಿಸಿದರು.

ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಸರಕಾರಿ ವೈದ್ಯರು ಇವರಿಂದ ಶಿಬಿರದಲ್ಲಿಯೇ ಎಲ್ಲ ದಾಖಲೆ ಪಡೆದು ನೂರಾರು ಅರ್ಹರಿಗೆ ಸ್ಥಳದಲ್ಲಿಯೇ ಮಾಶಾಸನ ಪತ್ರ ಮಂಜೂರಿ ಮಾಡಿ ಆಗಿನ ಸ್ಥಳೀಯ ಶಾಸಕ ಹಾಗೂ ಈಗಿನ ಕಂದಾಯ ಸಚಿವ ಆರ್.ವ್ಹಿ.ದೇಶಪಾಂಡೆ ಇವರಿಂದ ಹಂಚಿಸಿದರು.

೧೯೮೬-೮೭ ರಲ್ಲಿ ಬೆಳಗಾವಿ ಆಹಾರ ಪೂರೈಕೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಸುಮಾರು ೨೫೦೦ ಬೋಗಸ ರೇಶನಕಾರ್ಡಗಳನ್ನು ಶೋಧಿಸಿ ರದ್ದು ಪಡಿಸಿದರು ಹಾಗೂ ಸರಕಾರಕ್ಕೆ ಆಗ ಬಹುದಾಗ ಲಕ್ಷಾಂತರ ರೂಪಾಯಿಗಳ ಹಣ ಉಳಿಸಿದರು.

ಬೆಳಗಾವಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಕೆಲ ಜಮೀನುದಾರರು ಅನಧಿಕೃತವಾಗಿ ಹಾಗೂ ಕಾಯ್ದೆ ಉಲ್ಲಂಘಣೆ ಮಾಡಿ ಹೊಂದಿದ ಸಾವಿರಾರು ಎಕರೆ ಜಮೀನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿ ಸ್ವಾಧೀನ ಪಡಿಸಿಕೊಂಡರು.

ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಬೋಗಸ ದಾಖಲೆ ನಿರ್ಮಿಸಿ ಕಾಯ್ದೆ ಬಾಹೀರವಾಗಿ ಕೆಲ ಜನರ ಹೆಸರಿಗೆ ದಾಖಲು ಮಾಡಿದ ಪ್ರಕರಣವನ್ನು ಶೋಧಿಸಿ ಅದನ್ನು ರದ್ದುಗೊಳಿಸಿ ಜಮೀನನ್ನು ಸರ್ಕಾರ ಸ್ವಾಧೀನ ಪಡೆದು ತಪ್ಪಿತಸ್ಥ ಸಿಬ್ಬಂದಿಯನ್ನು ಅಮಾನತುಗೊಳಿಸಿ ಕಾನೂನು ಕ್ರಮ ವಹಿಸಿದರು.

ಹೀಗೆ ಸರ್ಕಾರಕ್ಕೆ ವಶಪಡಿಸಿಕೊಂಡ ಜಮೀನು ಸುಮಾರು ೪೨೦೦ ಎಕರೆ. ಧುಮಾಳೆಯವರ ಉಲ್ಲೆಖನೀಯ ಸೇವೆಗಾಗಿ ಮಾಜಿ ರಾಷ್ಟçಪತಿಗಳಾದ ದಿ.ಗ್ಯಾನಿ ಝೆಲಸಿಂಗ ಇವರಿಂದ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ “ಭಾರತ ಗೌರವ” ಪ್ರಶಸ್ತಿಯನ್ನು ಹಾಗೂ ಮಾಜಿ ಮುಖ್ಯ ಮಂತ್ರಿಗಳಾದ ಮಾನ್ಯ ಶ್ರಿ.ವೀರಪ್ಪ ಮೊಯ್ಲಿ ಇವರಿಂದ ಬಹುಮಾನ ಪಡೆದಿದ್ದಾರೆ.

ಚಿಕ್ಕೊಡಿ ವಿಭಾಗದ ಅನೇಕ ಹಳ್ಳಿಗಳಲ್ಲಿ ನೂರಾರು ವರ್ಷಗಳಿಂದ ‘ಓಕಳಿ’ ಎಂಬ ಅನಾಗರೀಕ ಪದ್ಧತಿಯು ಜಾರಿಯಲ್ಲಿತ್ತು. ಹನುಮಂತ ದೇವರ ಮುಂದೆ ಒಂದು ಹೊಂಡ ನಿರ್ಮಿಸಿ ಅದರಲ್ಲಿ ರಾಡಿ ನೀರು ಮಾಡಲಾಗುತ್ತಿತ್ತು.

ಅದರಲ್ಲಿ ೮-೧೦ ಹದೆಹರೆಯದ ಹರಿಜನ ಮಹಿಳೆಯರನ್ನು ಅರೆಬೆತ್ತಲೆಯಾಗಿ ನಿಲ್ಲಿಸಿ ಸವರ್ಣಿಯರು ಅವರ ಮೇಲೆ ರಾಡಿ ನೀರು ಎರಚುವುದು ಹಾಗೂ ಈ ದೃಶ್ಯವನ್ನು ಗ್ರಾಮದ ಜನರು ನೋಡಿ ನಲಿಯುವದಾಗಿತ್ತು. ಸದರಿ ವಿಷಯದ ಬಗ್ಗೆ ತಿಳಿದ ಧುಮಾಳೆಯವರು ಆಗಿನ ಜಿಲ್ಲಾಧಿಕಾರಿಯಾಗಿದ್ದ ಶ್ರಿ.ಪ್ರದೀಪಸಿಂಗ ಖರೋಲಾ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಹಾಗೂ ಕಂದಾಯ ಸಿಬ್ಬಂದಿಯೊಂದಿಗೆ ಸದರಿ ಗ್ರಾಮಗಳಿಗೆ ಭೇಟಿ ನೀಡಿ ಹೇಯ ಅನಾಗರಿಕ ‘ಓಕಳಿ’ ಪದ್ಧತಿಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು.

ಅವರು ಇನ್ನೂ ಅನೇಕ ಸಾರ್ವಜನಿಕ ಹಿತದೃಷ್ಠಿ ಕಾರ್ಯಮಾಡಿರುತ್ತಾರೆ.

ಕಾರವಾರ ಅಸಿಸ್ಟಂಟ್ ಕಮೀಶನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಜೊಯಿಡಾ ತಾಲೂಕಿನ ಬಾಲವಾಡಿ ಮಕ್ಕಳಿಗೆ ಬಂದ ಅಕ್ಕಿಯನ್ನು ಅಕ್ರಮವಾಗಿ ರೈಸ್ ಮಿಲ್ಲಗಳಿಗೆ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ ಅಕ್ರಮದಲ್ಲಿ ಭಾಗಿಯಾಗಿದ್ದ ಇಬ್ಬರು ಸಿಬ್ಬಂದಿಯವರನ್ನು ಬಂಧಿಸಿ ಲಾರಿ ಜಪ್ತ ಮಾಡಿ ಪ್ರಕರಣ ದಾಖಲಿಸಿಕೊಂಡು ಕ್ರಮ ವಹಿಸಿದರು.

ಎ.ಜೆ.ಧುಮಾಳೆ ಮಾಡಿದ ಅನೇಕ ಜನಪರ ಕಾರ್ಯಗಳನ್ನು ಗುರುತಿಸಿ ಅವರಿಗೆ ಸದರಿ ಪ್ರಶಸ್ತಿಯನ್ನು ನೀಡಲಾಗಿದೆ. ಬೆಂಗಳೂರಿನ ಇಂಟರನ್ಯಾಶನಲ್ ಇಂಟೆಗ್ರಿಟಿ ಪೀಸ್ ಆ್ಯಂಡ ಫ್ರೆಡಶೀಪ್ ಸೋಸಾಯಿಟಿಯಲ್ಲಿ ಸದರಿ ಸಮಾರಂಭವನ್ನು ಏರ್ಪಡಿಸಿತು.////

The post ಡಾ.ಎ.ಜೆ.ಧುಮಾಳೆ ಅವರಿಗೆ ಡಾ. ಅಬ್ದುಲ್ ಕಲಾಂ ಎಕ್ಸೆಲೇನ್ಸ್ ಪ್ರಶಸ್ತಿ ಪ್ರದಾನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.