ಉತ್ತಮ ಸಮಾಜಕ್ಕಾಗಿ

ದಕ್ಷಿಣಾಭಿವೃದ್ಧಿಯ ಕನಸುಗಾರ, ನಿಷ್ಕಳಂಕ-ನಿಸ್ವಾರ್ಥಿ ಶಂಕರಾಚಾರ್ಯ

0

ಬೆಳಗಾವಿ (Tarun Kranti): ಬೆಳಗಾವಿ ದಕ್ಷಿಣ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸುಶಿಕ್ಷಿತ, ನಿಶ್ಚಳ ಕನಸುಗಾರ ಎನ್. ಎಸ್. ಶಂಕರಾಚಾರ್ಯ ಸ್ಪರ್ಧಿಸಿದ್ದು ಸುಮ್ಮನೆ ಅಭ್ಯರ್ಥಿಯಾಗದೇ ಅಭಿವೃದ್ಧಿಯ ಕನಸು ಹೊತ್ತಿದ್ದಾರೆ. ಪುರಾತನ ಬೆಳಗಾವಿ ಪ್ರದೇಶ ಹೊಂದಿರುವ ಬೆಳಗಾವಿ ದಕ್ಷಿಣ ಕ್ಷೇತ್ರ ಎಲ್ಲ ಜಾತಿ ವರ್ಗ ಒಳಗೊಂಡಿರುವ ಬಡವರು & ಮಧ್ಯಮ ವರ್ಗದ ಜನರ ಪ್ರದೇಶವಾಗಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತ ಅಭಿವೃದ್ಧಿ ಹೀನ ಕ್ಷೇತ್ರವಾಗಿಯೇ ಉಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಆಡಳಿತ ಮನಸ್ಸು ಮಾಡಿದರೂ ಟೊಂಕ ಕಟ್ಟಿ ದುಡಿಯುವ ಜನಪ್ರತಿನಿಧಿಯ ಕೊರತೆಯೇ ಇದಕ್ಕೆ ಕಾರಣ.

ಬಿಜೆಪಿ ಅಧಿಕಾರದ ಅವಧಿಯಲ್ಲಿ ಕೆರೆ ಕಟ್ಟೆ ಕಟ್ಟಿಸಿ, ರಸ್ತೆ ಬೀದಿ ದೀಪ ಮಾಡಿಸುವ ಯತ್ನ ನಡೆಯಿತಾದರೂ ಆ ಕೆಲಸ ಯಾತಕ್ಕೂ ಸಾಲದು ಎಂಬಂತಾಯಿತು. ಆ ನಂತರ ಎಂಇಎಸ್ ಅಧಿಕಾರದ ಅವಧಿಯಲ್ಲಿಯೂ ರಾಜಕೀಯ ಕಾರಣಗಳಿಗೆ ಕುಂಠಿತಗೊಂಡ ದಕ್ಷಿಣದ ಅಭಿವೃದ್ಧಿಗೆ ಈಗ ಹಲವರು ಹತ್ತಾರು ಕನಸು ಹೊತ್ತಿದ್ದು, ಈಗ ಸ್ವತಂತ್ರ ಅಭ್ಯರ್ಥಿ ಎನ್. ಎಸ್. ಶಂಕರಾಚಾರ್ಯ ಮುಂಚೂಣಿ ಪ್ರಯತ್ನ ನಡೆಸಿದ್ದಾರೆ. ಕ್ಷೇತ್ರದ ಸಮಸ್ಯೆಗಳ ಪಟ್ಟಿ & ಪರಿಹಾರ ಕ್ರಮಗಳು, ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಜನಜೀವನಮಟ್ಟ ಹೆಚ್ಚಿಸುವುದು, ನಿರುದ್ಯೋಗ ಸಮಸ್ಯೆ ನಿವಾರಣೆ, ಶಾಂತಿ ಸೌಹಾರ್ಧತೆಯ ವಾತಾವರಣ ನಿರ್ಮಿಸಲು ಶಂಕರಾಚಾರ್ಯ ಕನಸು ಹೊತ್ತಿದ್ದಾರೆ.

ಕುಡಿಯುವ ನೀರು, ವಿದ್ಯುತ್, ಸಾವರ್ಜನಿಕ ಶೌಚಾಲಯಗಳ ನಿರ್ಮಾಣ, ನೈರ್ಮಲ್ಯ, ಬಡ ವಿಧ್ಯಾರ್ಥಿಗಳಿಗೆ ಸಹಾಯ ಸವಲತ್ತು, ಸ್ವಯಂ ಉದ್ಯೋಗಕ್ಕೆ ಬಂಡವಾಳ ಕ್ರೋಢಿಕರಣ, ಗೃಹ ಕೈಗಾರಿಕೆಗೆ ಉತ್ತೇಜನ & ಮಾರುಕಟ್ಟೆ ವ್ಯವಸ್ಥೆ, ಸರಕಾರದ ಅನುದಾನದ ಸಮರ್ಪಕ ಹಂಚಿಕೆ & ಬಳಕೆ, ನೇಕಾರಿಕೆ ಉದ್ಯೋಗಸ್ಥರಿಗೆ ಸರಕಾರಿ ಸೇವೆ ಸವಲತ್ತುಗಳ ಪೂರೈಕೆ ಮತ್ತು ಯಂತ್ರೋಪಕರಣಗಳ ಪೂರೈಕೆ, ಕೌಶಲ್ಯಾಭಿವೃದ್ದಿ ಕೇಂದ್ರ ಸ್ಥಾಪನೆ, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕೈಮಗ್ಗ ತರಬೇತಿ ಶಾಲೆ ಮತ್ತು ಮಾರುಕಟ್ಟೆ ಪ್ರಾಂಗಣ, ಕಾರ್ಮಿಕ ವರ್ಗಕ್ಕೆ ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಮಾಡಿಕೊಡುವ ಹಲವು ಕನಸುಗಳನ್ನು ಶಂಕರಾಚಾರ್ಯ ಬಿಚ್ಚಿಟ್ಟಿದ್ದಾರೆ.

ಬೆಳಗಾವಿ ದಕ್ಷಿಣ ಕ್ಷೇತ್ರ ಮೂಲತಃ ಗೃಹ ಕೈಗಾರಿಕೆಗೆ ಹೆಸರುವಾಸಿಯಾಗಿದೆ. ಬಡ ಜನರಿಗೆ ದಿನನಿತ್ಯದ ಕಷ್ಟದ ದುಡಿಮೆಯ ಸಂಜೆಯ ಊಟಕ್ಕೆ ಆಧಾರ. ಬಹುಪಾಲು ಜನತೆ ಇತ್ತಿತ್ತಲಾಗಿ ಶಿಕ್ಷಣ ಮತ್ತು ಇತರ ಉದ್ಯೋಗಗಳತ್ತ ವಾಲುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಕಷ್ಟ ನಷ್ಟದ ಅವರ ಜೀವನ ಸಂಹಿಷ್ಣುತೆ ಕಾರಣ. ಇದಕ್ಕೆಲ್ಲ ಸರಕಾರ ಮತ್ತು ಆಡಳಿತ ನೀತಿಯಲ್ಲಿ ದಿಟ್ಟ ನಿರ್ಧಾರಗಳು ಪ್ರಕಟವಾಗಬೇಕಿದೆ. ಅದಕ್ಕೊಬ್ಬ ನಿಸ್ವಾರ್ಥ ಮನಸ್ಸಿನ ನಿಷ್ಕಪಟ ಸಾರಥಿ ಬೇಕು ಎನ್ನುತ್ತಾರೆ ಶಂಕರಾಚಾರ್ಯ. ಜನತೆಗೆ ತಮ್ಮ ಉಜ್ವಲ ಭವಿಷ್ಯ ಮತ್ತು ತಮ್ಮ ವಾಸ ಪ್ರದೇಶ ವ್ಯಾಪ್ತಿಯಲ್ಲಿನ ನಾಗರಿಕ ಸವಲತ್ತುಗಳ ಹೆಚ್ಚಳಕ್ಕೆ ತಮ್ಮ ಬಳಿಯೇ ಅಧಿಕಾರ ದಂಡ ಇದೆ. ಅಧಿಕಾರ ಪ್ರಯೋಗಿಸಿ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವುದು ಅವರ ಹಕ್ಕು ಎಂದು ಈಗಾಗಲೇ ಮನೆಮನೆ ಪ್ರಚಾರದಲ್ಲಿ ತೊಡಗಿರುವ ಶಂಕರಾಚಾರ್ಯ ಅಮಿತ ಜನಬೆಂಬಲದ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿಯವರೆಗಿನ ಆಡಳಿತದಲ್ಲಿ ಕಂಡ ನ್ಯೂನ್ಯತೆಗಳ ಸರಿಪಡಿಸಿಕೊಳ್ಳಲು ಜನತೆಗೆ ಮತ್ತೆ ಅವಕಾಶ ಬಂದಿರುವುದು ನಮ್ಮ ಚುನಾವಣೆ ಜನಾನುಕೂಲದ ನೀತಿ ನಿಯಮ ಸೃಷ್ಟಿಸುವವನಿಗೆ ಬೇಕು ಜನತೆಯ ಮತ ಎಂಬ ಧ್ಯೇಯ ವಾಕ್ಯ ಹೊತ್ತು ಬಾಗಿಲು ತಟ್ಟುತ್ತಿದ್ದಾರೆ ಶಂಕರಾಚಾರ್ಯ…!

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.