ಉತ್ತಮ ಸಮಾಜಕ್ಕಾಗಿ

ದಸರ ಗೆ ಸಿದ್ಧ ತೆ

0

ಅರಕಲಗೂಡು: ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವವನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಉದ್ದೇಶದಿಂದ 10 ದಿನಗಳ ಕಾಲ ಆಚರಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ದಸರಾ ಕಾರ್ಯಕ್ರಮಗಳ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಅ. 10ರಂದು ಸಂಜೆ ಗ್ರಾಮದೇವತೆ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮಠಾಧೀಶರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಅ. 11ರಂದು ಯುವ ದಸರಾ ನಡೆಯಲಿದ್ದು, 17 ರಿಂದ 40 ವಯೋಮಿತಿಯ ಯುವಜನರಿಗೆ ರಾಮನಾಥಪುರ ದಿಂದ ಅರಕಲಗೂಡಿಗೆ 20 ಕಿ.ಮೀ, 17 ವರ್ಷದಿಂದ ಕೆಳಗಿನ ಮಕ್ಕಳು ಹಾಗೂ 40 ವರ್ಷ ಮೇಲ್ಪಟ್ಟ ಹಿರಿಯರಿಗೆ ಮೋಕಳಿ ಗ್ರಾಮದಿಂದ ಅರಕಲಗೂಡಿಗೆ 5 ಕಿ.ಮೀ ಮ್ಯಾರಾಥಾನ್ , ಸಂಜೆ ಚಿತ್ರ ಕಲಾ ಪ್ರದರ್ಶನ, ಗೀತಗಾಯನ, ಭರತನಾಟ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಡಿಸಲಾಗಿದೆ. ತಾಲ್ಲೂಕು ಪತ್ರಕರ್ತರ ಸಂಘ ಕಾರ್ಯಕ್ರಮವನ್ನು ಪ್ರಾಯೋಜಿಸಲಿದೆ. ಅ. 12ರಂದು ನಡೆಯುವ ನೌಕರರ ದಸರಾದಲ್ಲಿ ಸರ್ಕಾರಿ ನೌಕರರಿಗೆ ವಿವಿಧ ಕ್ರೀಡಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಉಸ್ತುವಾರಿ ವಹಿಸಲಿದೆ ಎಂದು ತಿಳಿಸಿದರು.

ಅ. 14ರಂದು ಏಕತಾರಿ ಸಾಂಸ್ಕೃತಿಕ ಸಂಘಟನೆಯ ಸಹಯೋಗದಲ್ಲಿ ನಡೆಯುವ ಸಾಂಸ್ಕೃತಿಕ ದಸರಾದಲ್ಲಿ ಹಲವು ಜಾನಪದ ಕಲಾ ಪ್ರದರ್ಶನ, ನೃತ್ಯ ರೂಪಕಗಳು ಪ್ರದರ್ಶನವಾಗಲಿದ್ದು, ಸಾಹಿತಿ ಚಂದ್ರು ಕಾಳೇನಹಳ್ಳಿ ಪಾಲ್ಗೊಳ್ಳುವರು. ಅ. 14ರಂದು ನಡೆಯುವ ಮಹಿಳಾ ದಸರಾದಲ್ಲಿ ರಂಗೋಲಿ, ಕಸೂತಿ ಹಾಗೂ ದೇಶಿ ಆಟಗಳ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅ. 15ರಂದು ರೈತ ದಸರಾದಲ್ಲಿ ಬೆಳಿಗ್ಗೆ ಬೇಸಾಯ ಸಂಬಂಧಿ ಇಲಾಖೆಗಳಿಂದ ವಸ್ತು ಪ್ರದರ್ಶನ, ಸಂಜೆ ಹಾಲು ಕರೆಯುವ ಹಾಗೂ ಗುಂಡು ಎತ್ತುವ ಸ್ಪರ್ಧೆ ಮುಂತಾದ ಗ್ರಾಮೀಣ ಕ್ರೀಡೆಗಳು, ಗ್ರಾಮೀಣ ಕಲಾಪ್ರದರ್ಶನ. ಅ. 16 ರಂದು ಅಂಗವಿಕಲರ ದಸರಾದಲ್ಲಿ ಕ್ರೀಡೆ, ಸಾಂಸ್ಕೃತಿಕ ಪ್ರದರ್ಶನ, ಅ. 17ರಂದು ಮಕ್ಕಳ ದಸರಾ ಅಂಗವಾಗಿ ಕ್ರೀಡೆ, ಅಜ್ಜಿ ಕಥೆ, ಅ. 18 ರಂದು ಪಟ್ಟಣ ಪಂಚಾಯಿತಿ ಆವರಣದಲ್ಲಿ ವಾಹನಗಳಿಗೆ ಸಾಮೂಹಿಕ ಆಯುಧ ಪೂಜೆ ನಡೆಯಲಿದೆ.

ಅ. 19ರಂದು ವಿಜಯ ದಶಮಿಯಂದು ಸಂಜೆ ದಸರಾ ಉತ್ಸವ ನಡೆಯಲಿದ್ದು ಶಾಲೆ, ಕಾಲೇಜುಗಳು, ಸಂಘ ಸಂಸ್ಥೆಗಳು ರೂಪಿಸಿರುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಬನ್ನಿ ಮಂಟಪಕ್ಕೆ ತೆರಳಲಿವೆ. ವಿವಿಧ ಕಲಾತಂಡಗಳು, ಜಾನಪದ ನೃತ್ಯಗಳು ಮೆರವಣಿಗೆಯಲ್ಲಿ ಸಾಗುವ ಮೂಲಕ ಮೆರುಗು ನೀಡಲಿದೆ. ಪ್ರೋತ್ಸಾಹದ ಉದ್ದೇಶದಿಂದ ಸ್ಥಳೀಯ ಕಲಾವಿದರು, ಕಲಾತಂಡಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ವಿವಿಧ ಕ್ಷೇತ್ರದ ಗಣ್ಯರು, ಚಲನಚಿತ್ರ ನಟರು ಪಾಲ್ಗೊಳ್ಳುವರು. ಸಾರ್ವಜನಿಕರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

The post ದಸರ ಗೆ ಸಿದ್ಧ ತೆ appeared first on Prajaa News.

Source link

ದಸರ ಗೆ ಸಿದ್ಧ ತೆ

Leave A Reply

 Click this button or press Ctrl+G to toggle between Kannada and English

Your email address will not be published.