ಉತ್ತಮ ಸಮಾಜಕ್ಕಾಗಿ

ದೇಶವನ್ನು ಕಟ್ಟಲು ವಿವೇಕಾನಂದರ ಬದಕು ಮತ್ತು ಸಾಧನೆಯನ್ನು ಯುವಕರು ಮಾದರಿಯಾಗಿಟ್ಟುಕೊಳ್ಳಬೇಕು : ಶಾಂತಾ ಆಚಾರ್ಯ

0

ಬೆಳಗಾವಿ: ದಿನಾಂಕ 19-1-2017 ರಂದು ಗುರು ವಿವೇಕಾನಂದ ಸೇವಾ ಟ್ರಸ್ಟ 4232 ಕಛೇರಿ ರಸ್ತೆ ಬೆಳಗಾವಿ ಇದರ ವತಿಯಿಂದ ವಿವೇಕ ಸಂಭ್ರಮ-2017 ಅಂತರ್ ಕಾಲೇಜ್ ಸಾಂಸ್ಕøತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭವನ್ನು ನಗರದ ಭಡಕಲ್ ಗಲ್ಲಿಯಲ್ಲಿರುವ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ 35 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಫಲಕ ಹಾಗೂ ಭಾಗವಹಿಸಿದ ಎಂಟು ಮಹಾವಿದ್ಯಾಲಯಗಳಿಗೆ ನೆನಪಿನ ಕಾಣಿಕೆಯಾಗಿ ವಿವೇಕಾನಂದರ ಭಾವಚಿತ್ರವನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಮ್ಮ ಪ್ರಯತ್ನ ಸಂಘಟನೆಯ ಸಹ ಸ್ಥಾಪಕರಾದ ಶಾಂತಾ ಆಚಾರ್ಯ ಅವರು ಮಾತನಾಡುತ್ತ ಆರ್ಥಿಕವಾಗಿ ಸಹಾಯ ಮಾಡುವುದರ ಜೊತೆಗೆ ಆನಾಥ ಮಕ್ಕಳ, ದೀನದಲಿತರ, ವೃದ್ಧರ ಯೋಗಕ್ಷೇಮವನ್ನು ಆಲಿಸುವುದು. ಅವರಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ತುಂಬಬೇಕು. ಇದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಹಾಗಾದಾಗ ಮಾತ್ರ ಆರೋಗ್ಯವಂತ ಸಮಾಜವನ್ನು ನಾವು ಕಾಣಬಹುದು. ಯುವಕರು ದೇಶವನ್ನು ಕಟ್ಟಲು ವಿವೇಕಾನಂದರ ಬದಕು ಮತ್ತು ಸಾಧನೆಯನ್ನು ಮಾದರಿಯಾಗಿಟ್ಟುಕೊಳ್ಳಬೇಕು. ವಿವೇಕಾನಂದರ ಹೆಸರಲ್ಲಿರುವ ಈ ಸಂಸ್ಥೆಯು ಮಾಡುತ್ತಿರುವ ಸೇವೆ ಸಾರ್ಥಕವಾಯಿತೆಂದರು. ದಿವ್ಯ ಸಾನ್ನಿಧ್ಯವನ್ನು ವಹಿಸಿದ ಕಾರಂಜಿಮಠದ ಪರಮ ಪೂಜ್ಯ ಶ್ರೀ. ಗುರು ಸಿದ್ಧ ಮಹಾಸ್ವಾಮಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿವೇಕಾನಂದರು ಸಮೃದ್ಧ ಮತ್ತು ಸಶಕ್ತ ಭಾರತದ ಕನಸನ್ನು ಕಂಡಿದ್ದರು. ಇಂದಿನ ಯುವಜನತೆ ಅವರ ಆದರ್ಶಗಳನ್ನು ಪಾಲಿಸುತ್ತ ಅವರ ಕನಸನ್ನು ನನಸು ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಇಂತಹ ಮಹಾ ಪುರುಷರ ಜೀವನ ಚರಿತ್ರೆಯನ್ನು ಓದುವುದರಿಂದ ಸಂಸ್ಕಾರಯುತರಾಗಿ ಬೆಳೆಯುವುದರ ಜೊತೆಗೆ ಉತ್ತಮ ಸಮಾಜವನ್ನು ನಿರ್ಮಾಣಮಾಡಬಹುದು. ಸಾವಿರಾರು ಸಂಸ್ಥೆಗಳು ಪ್ರತಿ ವರ್ಷ ನೋದಣಿಯಾಗಿ ಹೊರಬರುತ್ತವೆ. ಆದರೆ ಇಂತಹ ಬೆರಳೆಣಿಕೆಯಷ್ಟೆ ಸಂಸ್ಥೆಗಳು ನಿಜವಾದ ಸಮಾಜದ ಬಗ್ಗೆ ಕಾಳಜಿಯನ್ನು ತೋರಿಸುತ್ತವೆ. ಈ ಸಂಸ್ಥೆ ಅತ್ಯತ್ತಮ ಕಾರ್ಯವನ್ನು ಮಾಡುತ್ತಿದೆ. ಹೀಗೆ ಮುಂದುವರಿಯಲಿ ಹಾಗೂ ಸಮಾಜದ ಬಗ್ಗೆ ಕಾಳಜಿಯಿರುವ ವ್ಯಕ್ತಿಗಳು ಸಂಸ್ಥೆಯ ಜೊತೆಗೆ ಸೇರಿ ಸಂಸ್ಥೆಯನ್ನು ಇನ್ನಷ್ಟು ಕಾರ್ಯೋನ್ಮುಖವಾಗುವಂತೆ ಮಾಡಬೇಕು. ಅಧ್ಯಕ್ಷರಾದ ನಾರಾಯಣ ನಾಯ್ಕ ಅಧ್ಯಕೀಯ ನುಡಿಗಳನ್ನಾಡುತ್ತ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಧರ್ಧಾತ್ಮಕ ಮನೋಭಾವ ಹಾಗೂ ಆತ್ಮ ಸ್ಥೈರ್ಯವನ್ನು ತುಂಬುತ್ತಿದೆಂದರು. ವೇದಿಕೆಯಲ್ಲಿ ಕಾರ್ಯದರ್ಶಿ ಸತೀಶ ಮನ್ನಿಕೇರಿ ಹಾಗೂ ಡಾ. ವೈ. ಬಿ ಘಸಾರಿ ಉಪಸ್ಥಿತರಿದ್ದರು. ಪ್ರಭಾ ಭೋಯಿ ಸ್ವಾಗತ ಗೀತೆ ಹಾಡಿದರು. ಮುನಿರಾಜ ಜೈನ್ ಪರಿಚಯಿಸಿದರು.. ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಆನಂದ ಪಿ. ರಾವ್, ಮಹಾವೀರ ಜೈನ್, ರಾಜೇಶ್ ಗೌಡ, ಭಾರತಿ ಶೆಟ್ಟಿಗಾರ್, ರಾಜೇಶ್ವರಿ ಚನ್ನಮಿಲ್ಲಾ, ಅಂಜನಕುಮಾರ ಗಂಡಗುದರಿ, ಸಿದ್ರಾಯ ನಾಯ್ಕ, ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಜಗದೀಶ ಹೆಗಡೆ ವಂದಿಸಿದರು, ಕಾರ್ಯಕ್ರಮವನ್ನು ಮಲ್ಲೇಶ ದೊಡ್ಡಲಕ್ಕಣ್ಣವರು ನಡೆಸಿಕೊಟ್ಟರು.

Leave A Reply

 Click this button or press Ctrl+G to toggle between Kannada and English

Your email address will not be published.