ಉತ್ತಮ ಸಮಾಜಕ್ಕಾಗಿ

ದೇಸೂರಲ್ಲಿ ಚಿರತೆ ಪ್ರತ್ಯಕ್ಷ, ಮರಳಿ ಕಾಡಿಗೆ

0

ದೇಸೂರಲ್ಲಿ ಚಿರತೆ ಪ್ರತ್ಯಕ್ಷ, ಮರಳಿ ಕಾಡಿಗೆ

ಬೆಳಗಾವಿ: ಬೆಳಗಾವಿ ಸಮೀಪದ ದೇಸೂರಲ್ಲಿ ಇಂದು ಬೆಳಂಬೆಳಿಗ್ಗೆ ಚಿರತೆ ಪ್ರತ್ಯಕ್ಷವಾಗಿದೆ.

ದೇಸೂರು ಹೊರವಲಯದ ಕಮಲ ನಗರದಲ್ಲಿ ಕಾಣಿಸಿಕೊಂಡ ಚಿರತೆಯ ಮಾಹಿತಿಯನ್ನು ಜನತೆ ಅರಣ್ಯ ಇಲಾಖೆಗೆ ನೀಡಿದ್ದಾರೆ. ಖಾನಾಪುರ ವಲಯ ಅರಣ್ಯ ಅಧಿಕಾರಿಗಳು ಧಾವಿಸಿ ಪರಿಶೀಲಿಸಿದ್ದು, ಚಿರತೆ ಹೆಜ್ಜೆ ಗುರುತುಗಳು(Pug mark) ಪತ್ತೆಯಾಗಿವೆ. ಈ ಭಾಗದಲ್ಲಿ ಚಿರತೆ ಚಲನವಲನ ಹಾಗೂ ಮತ್ತೆ ಅದು ಆಗಮಿಸಬಹುದಾದ ಗುಮಾನಿ ಹಿನ್ನೆಲೆ ಮಾಹಿತಿ ಪಡೆಯಲು ಕ್ಯಾಮೆರಾ(Traping Camera) ಅಳವಡಿಸಲಾಗುತ್ತಿದೆ ಎಂದು ಖಾನಾಪುರ RFO ಬಸವರಾಜ ವಾಳದ ತಿಳಿಸಿದ್ದಾರೆ. ಯಾರಿಗೂ ಯಾವುದೇ ಅಪಾಯದ ವರದಿ ಆಗಿಲ್ಲ.

The post ದೇಸೂರಲ್ಲಿ ಚಿರತೆ ಪ್ರತ್ಯಕ್ಷ, ಮರಳಿ ಕಾಡಿಗೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.