ಉತ್ತಮ ಸಮಾಜಕ್ಕಾಗಿ

ದೋಸ್ತಿ ಶಾಶ್ವತವಲ್ಲ

0

ಹಾಸನ: ‘ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಶಾಶ್ವತವಲ್ಲ. ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಕಾಂಗ್ರೆಸ್‌ ಮುಖಂಡ ಎ.ಮಂಜು ಹೇಳಿದರು.

‘ನಾನು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ. ಕಾನೂನು ಪರ, ಮೋಸ ಹಾಗೂ ಅನ್ಯಾಯದ ವಿರುದ್ಧ ಎಂದು ಸ್ಪಷ್ಟ ಪಡಿಸಿದರು. ಆರೋಪದ ಹಿಂದೆ ಬಿಜೆಪಿ ಕೈವಾಡ ಇಲ್ಲ. ನಾನು ಮತ್ತೊಬ್ಬರ ಹೆಬ್ಬೆಟ್ಟು ಆಗುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಇದ್ದೇವೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡಬಹುದೇ’ ಎಂದು ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ಸಚಿವ ರೇವಣ್ಣಗೆ ಟಾಂಗ್ ನೀಡಿದರು.

‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, 37 ಸ್ಥಾನ ಪಡೆದ ಜೆಡಿಎಸ್‌ಗೆ ಸಿ.ಎಂ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಆದರೆ ಜಿಲ್ಲಾ ಪಂಚಾಯಿತಿಯಲ್ಲಿ ಒಂದು ಸ್ಥಾಯಿ ಸಮಿತಿ ಕೊಡಲು ಆಗುತ್ತಿರಲಿಲ್ಲವೇ? ಸಮ್ಮಿಶ್ರ ಎಂದರೆ ಅರ್ಥವೇನು’ ಎಂದು ಅಸಮಾಧಾನ ಹೊರ ಹಾಕಿದರು.

‘ಸಿ.ಎಂ ಕುಮಾರಸ್ವಾಮಿ ಅವರು ಇದನ್ನು ಸರಿಪಡಿಸಿದ್ದರೆ, ಹೀಗೇಕೆ ಆಗುತ್ತಿತ್ತು’ ಮಾರ್ಮಿಕವಾಗಿ ಪ್ರಶ್ನಿಸಿದ ಮಂಜು, ‘ಸಮಿತಿ ಹಂಚಿಕೆ ಬಗ್ಗೆ ಅವರು ಹೇಳಬಹುದಿತ್ತು ಅಲ್ಲವೇ?’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಇಲ್ಲವೇ ಹಾಸನವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಬೇಕು ಎಂಬುದು ನನ್ನ ಹೋರಾಟ. ಅದಕ್ಕೆ ನಾನು ಈಗಲೂ ಬದ್ಧ. ಮಂಡ್ಯ ನಮಗೆ ಕೊಟ್ಟು, ಹಾಸನದಲ್ಲಿ ಅವರು ನಿಂತರೆ ನಾವು ಜೆಡಿಎಸ್ ಪರ ಕೆಲಸ ಮಾಡಲ್ಲ. ಸಮ್ಮಿಶ್ರ ಸರ್ಕಾರದ ಪರ ಕೆಲಸ ಮಾಡುತ್ತೇವೆ’ ಎಂದು ಪ್ರಶ್ನೆಗೆ ಉತ್ತರಿಸಿದರು.[  category  hassan news]

The post ದೋಸ್ತಿ ಶಾಶ್ವತವಲ್ಲ appeared first on Prajaa News.

Source link

ದೋಸ್ತಿ ಶಾಶ್ವತವಲ್ಲ

Leave A Reply

 Click this button or press Ctrl+G to toggle between Kannada and English

Your email address will not be published.