ಉತ್ತಮ ಸಮಾಜಕ್ಕಾಗಿ

ದೋಸ್ತಿ ಸರ್ಕಾರದ ಆಯಸ್ಸು 1 ತಿಂಗಳು : ಮಾಲೀಕಯ್ಯ ಗುತ್ತೇದಾರ

0

ದೋಸ್ತಿ ಸರ್ಕಾರದ ಆಯಸ್ಸು 1 ತಿಂಗಳು : ಮಾಲೀಕಯ್ಯ ಗುತ್ತೇದಾರ

ಸಮ್ಮಿಶ್ರ ಸರ್ಕಾರದಿಂದ ಯಾವುದೇ ಕೆಲಸಗಳು ಆಗ್ತಾ ಇಲ್ಲ, ಇಂದು ಒಂದು ತಿಂಗಳಲ್ಲಿ ಬೀಳಲಿದೆ ಎಂದು ಮಾಜಿ ಸಚಿವ ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಭವಿಷ್ಯ ನುಡಿದಿದ್ದಾರೆ.

Dosti government’s life is only 1 month Says malikayya guttedar

ಯಾದಗಿರಿ  : ಇನ್ನು ಹಲವು ವಿಚಾರಗಳ ಬಗೆಗೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ, ಸಂಪೂರ್ಣ ಬಹುಮತ ಬಂದ್ರೂ   ಸಮ್ಮಿಶ್ರ ಸರ್ಕಾರ ಬಂದ್ರೂ.. ಇವರೇ ಮಂತ್ರಿ, ಮತ್ತೊಬ್ಬರಿಗೆ ಅವಕಾಶ ಕೊಟ್ಟಿಲ್ಲ, ನಿನ್ನೆ ಇವತ್ತು ಬಂದ ಮಗನನ್ನು ಮಂತ್ರಿ ಮಾಡಿದ್ದಾರೆ, ಆರೇಳು ಬಾರೀ ಗೆದ್ದ ಶಾಸಕರನ್ನ ಮೂಲೆಗುಂಪು ಮಾಡಿದ್ದಾರೆ ಎಂದರು.

ಧರ್ಮ ಸಿಂಗ್ ವಿಧಿವಶರಾದ ಮೇಲೆ ರಾಜಕೀಯ ಆಟ ಬದಲಾಗಿದೆ, ಅಜಯ್ ಸಿಂಗ್ ಮಲ್ಲಿಕಾರ್ಜುನ್ ಖರ್ಗೆಯವರನ್ನೆ ತಂದೆ ಸಮಾನ ಅಂದುಕೊಂಡಿದ್ದರು.. ಅದ್ರೇ ಅವರಿಗೆ ಮೋಸ ಮಾಡಿ ಮತ್ತೆ ಮಗನನ್ನೆ ಮಂತ್ರಿ ಮಾಡಿದ್ದಾರೆ..

ಕಾಂಗ್ರೆಸ್ ನಲ್ಲಿ ಹಳೆ ಸಂಪ್ರದಾಯ ಮುಂದುವರೆದಿದೆ, ಜಾರಕಿವಳಿ ಬ್ರದರ್ಸ್ ಬಿಜೆಪಿ ಸೇರುವ ವಿಷಯ ನಮ್ಮ ಹಿರಿಯ ಮುಖಂಡರಿಗೆ ಬಿಟ್ಟದ್ದು, ನಾವು ಯಾರಿಗೂ ಬಿಜೆಪಿಗೆ ಬರುವಂತೆ ಆಮಿಷ ವೊಡ್ಡಿಲ್ಲ, ಪಕ್ಷದ ಸಿದ್ದಾಂತ ಒಪ್ಪಿ ಬರುವವರಿಗೆ ಸ್ವಾಗತ ಎಂದರು.

ಇದನ್ನೂ ಓದಿ >>> ರಾಜ್ಯದ ಪ್ರತಿ ಹೋಬಳಿಯಲ್ಲಿ ಜನಸ್ಪಂದನಾ ಸಭೆ – ಹೆಚ್.ಡಿ.ಕುಮಾರಸ್ವಾಮಿ

ಬರುವ ಲೋಕಸಭಾ ಚುನಾವಣೆಗೆ ಸಿದ್ದತೆಯಲ್ಲಿ ನಮ್ಮ ಪಕ್ಷ ತಯಾರಿಯಲ್ಲಿದೆ, ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು, ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಪಕ್ಷ ಮೂಲೆಗುಂಪು ಮಾಡಿದೆ, ಅವರು ಸುಮ್ಮನೆ ಪಕ್ಷದಲ್ಲಿ ಇದ್ದಾರೆ, ಸಿದ್ದರಾಮಯ್ಯ ಅವರು ಪ್ರಧಾನಿ ಮಂತ್ರಿ ಅಭ್ಯರ್ಥಿ ಎಂಬುವುದು ಮಾಧ್ಯಮದವರ ಹೇಳಿಕೆ ಎಂದು ಯಾದಗಿರಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮತ್ತು ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮದ ವೇಳೆ  ಮಾಜಿ ಸಚಿವರು ಹೇಳಿಕೆ ನೀಡಿದರು. ////

WebTitle : ದೋಸ್ತಿ ಸರ್ಕಾರದ ಆಯಸ್ಸು 1 ತಿಂಗಳು : ಮಾಲೀಕಯ್ಯ ಗುತ್ತೇದಾರ – Dosti government’s life is only 1 month Says malikayya guttedar

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Kannada Politics News | Yadgir News Kannada | Karnataka Politics News

Kannada Politics News

The post ದೋಸ್ತಿ ಸರ್ಕಾರದ ಆಯಸ್ಸು 1 ತಿಂಗಳು : ಮಾಲೀಕಯ್ಯ ಗುತ್ತೇದಾರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.