ಉತ್ತಮ ಸಮಾಜಕ್ಕಾಗಿ

ಧಾರವಾಡ : ಅಂತರ್ ಮಾಹಾವಿದ್ಯಾಲಯ ಯುವಜನೋತ್ಸವ

0

ಅಂತರ್ ಮಾಹಾವಿದ್ಯಾಲಯ ಯುವಜನೋತ್ಸವ

ಧಾರವಾಡ : ಧಾರವಾಡ ಕೃಷಿ ವಿಶ್ವವಿದ್ಯಾಲಯ, ಸಮುದಾಯ ವಿಜ್ಞಾನ ಮಹಾವಿದ್ಯಾಲಯವು ೨೦೧೮-೧೯ರ ೨೯ನೇ ಅಂತರ್ ಮಾಹಾವಿದ್ಯಾಲಯ ಯುವಜನೋತ್ಸವವನ್ನು ಸೆಪ್ಟೆಂಬರ್ ೧೮ ರಂದು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭವು ಸಮುದಾಯ ವಿದ್ಯಾಲಯದ ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮದಿಂದ ಆರಂಭವಾಯಿತು.

ಬೆಂಗಳೂರು ದೂರದರ್ಶನದ ಅಡಿಷನಲ್ ಡೈರೆಕ್ಟರ್ ಜನರಲ್‌ರವರಾದ ಡಾ.ಮಹೇಶ ಜೋಶಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು ಕೃಷಿ ವಿಶ್ವವಿದ್ಯಾಲಯದ ಎಲ್ಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಮಣ್ಣಿನ ಮಕ್ಕಳೆಂದು ಕರೆದರು.

ಸ್ವಾಮಿ ವಿವೇಕಾನಂದರ ಜೀವನದಲ್ಲಿ ಸಂಭವಿಸಿದ ಘಟನೆಗಳನ್ನು ಉಲ್ಲೇಖಿಸಿ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು. ದಿವಂಗತ ಅಬ್ದುಲ್ ಕಲಾಂ ಜಿ ಅವರ ಉದಾಹರಣೆಯನ್ನು ತೆಗೆದುಕೊಂಡು ಸಮಾಜಕ್ಕೆ ಸ್ನೇಹಿತರಿಗೆ ಕೊಡುಗೆ ನೀಡುವಂತೆ ಮತ್ತು ಜೀವನವನ್ನು ಒಂದು ಅವಕಾಶವಾಗಿ ತೆಗೆದುಕೊಂಡು ಜನರಿಗೆ ಸಹಾಯ ಮಾಡಲು ಪ್ರೇರೇಪಿಸಿದರು.

ಡಾ. ಬೇಂದ್ರೆಯವರ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೊಡುಗೆಯನ್ನು ನೆನೆಸಿಕೊಂಡರು. ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ವ್ಯಕ್ತ ಪಡಿಸುತ್ತಾ ಪ್ರತಿಯೊಬ್ಬರು ತಮ್ಮ ಗುರಿಯನ್ನು ತಾವೇ ನಿರ್ಧರಿಸುವುದು ಸೂಕ್ತ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರತಿಯೊಬ್ಬರಲ್ಲೂ ಇರುವ ಪ್ರತಿಭೆಯನ್ನು ಹೊರಹಾಕಬೇಕೆಂದು ತಿಳಿಸಿದರು.News Belgaum-ಧಾರವಾಡ : ಅಂತರ್ ಮಾಹಾವಿದ್ಯಾಲಯ ಯುವಜನೋತ್ಸವ 1

ನವೆಂಬರ್ ೧೮, ೨೦೧೮ರಂದು ಶಿಶುನಾಳ ಶರೀಫ್ ಮತ್ತು ಗುರು ಗೋವಿಂದ ಅವರ ೨ನೇ ಜನ್ಮ ಶತಾಬ್ದಿಯನ್ನು ಆಚರಿಸಲು ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಆಯೋಜಿಸಲಾಗುವುದೆಂದು ಬೆಂಗಳೂರು ದೂರದರ್ಶನದ ಅಡಿಷನಲ್ ಡೈರೆಕ್ಟರ್ ಜನರಲ್‌ರವರಾದ ಡಾ.ಮಹೇಶ ಜೋಶಿ ಘೋಷಿಸಿದರು.

ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ.ಡಿ.ಪಿ. ಬಿರಾದಾರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನವನ್ನು ಮಾತೃ ಪೂರ್ಣ ಯೋಜನೆ ಅಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಒದಗಿಸಲು ಮುಂದಾಗಿರುವುದನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳನ್ನುದ್ದೇಶಿಸಿ ಯುವಜನೋತ್ಸವದಲ್ಲಿ ಭಾಗವಹಿಸುವುದು ಮುಖ್ಯವೆಂದರು. ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಉತ್ಸಾಹದಿಂದ ವ್ಯಕ್ತಪಡಿಸಿ ಪಾಲ್ಗೊಳ್ಳಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಬಿ. ಕಸ್ತೂರಿಬಾ, ವಿಸ್ತರಣೆ ಮತ್ತು ಸಂವಹನ ನಿರ್ವಹಣೆ ವಿಭಾಗದ ಸಹಾಯಕ ಪ್ರಾದ್ಯಪಕರಾದ ಡಾ. ಸುರೇಖಾ ಸಂಕನಗೌಡರ ಭಾಗವಹಿಸಿದ್ದರು.

ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾಧಿಕಾರಿಯಾದ ಡಾ. ಪುಷ್ಪಾ ಖಾದಿಯವರು ಎಲ್ಲ ಗಣ್ಯರನ್ನು ಪುಷ್ಪ ಗುಚ್ಛಗಳಿಂದ ಸ್ವಾಗತಿಸಿದರು. ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕರಾದ ಡಾ. ಪುಷ್ಪಾ ಭಾರತಿ ವಂದಿಸಿದರು. ////

The post ಧಾರವಾಡ : ಅಂತರ್ ಮಾಹಾವಿದ್ಯಾಲಯ ಯುವಜನೋತ್ಸವ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.