ಉತ್ತಮ ಸಮಾಜಕ್ಕಾಗಿ

ಧಾರವಾಡ – ತಹಶೀಲ್ದಾರ ಕಚೇರಿಗೆ ಡಿ.ಸಿ. ದಿಢೀರ್ ಭೇಟಿ ನೀಡಿ ಪರಿಶೀಲನೆ

0

ಧಾರವಾಡ – ತಹಶೀಲ್ದಾರ ಕಚೇರಿಗೆ ಡಿ.ಸಿ. ದಿಢೀರ್ ಭೇಟಿ ನೀಡಿ ಪರಿಶೀಲನೆ

ಧಾರವಾಡ : ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಇಂದು ಬೆಳಿಗ್ಗೆ ಕಚೇರಿ ಸಮಯದಲ್ಲಿ ಧಾರವಾಡ ತಹಶೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ ಕಚೇರಿ ಕೆಲಸಗಳನ್ನು ಪರಿಶೀಲಸಿದರು.

ಭೇಟಿಯ ಸಂದರ್ಭದಲ್ಲಿ ತಹಶೀಲ್ದಾರ ಕಚೇರಿಯ ಭೂಮಿ ವಿಭಾಗ, ಪಡಸಾಲೆ ಕೇಂದ್ರ, ಸಕಾಲ ಕೇಂದ್ರ, ಅಟಲ್‌ಜಿ ಕೇಂದ್ರ ಮತ್ತು ಆಹಾರ ಇಲಾಖೆಯ ಕಚೇರಿಗಳಿಗೆ ತೆರಳಿ ಅಲ್ಲಿ ಕಾರ್ಯನಿಮಿತ್ಯ ಬಂದಿರುವ ಸಾರ್ವಜನಿಕರನ್ನು ಮಾತನಾಡಿಸಿ, ಅವರ ಸಮಸ್ಯೆಗಳ ಬಗ್ಗೆ ಗಮನ ಹರಿಸಿದರು. ಕೆಲವು ಕೇಂದ್ರಗಳಲ್ಲಿ ಅರ್ಜಿದಾರರ ಅರ್ಜಿಗಳನ್ನು ಸ್ವತ: ಮುಂದೆ ನಿಂತು ದಾಖಲಿಸಿ ಸಿಬ್ಬಂದಿಗಳೊಂದಿಗೆ ಆಗುತ್ತಿರುವ ವಿಳಂಬಗಳ ಕುರಿತು ಮಾಹಿತಿ ಪಡೆದರು.

ಅಧಿಕಾರಿಗಳನ್ನು ಉದ್ದೇಶಿಸಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಮತ್ತು ಅವರೊಂದಿಗೆ ಉತ್ತಮ ರೀತಿಯಿಂದ ವರ್ತಿಸುವಂತೆ ಸೂಚಿಸಿದರು. ಪಹಣಿ ಪತ್ರ ಹಾಗೂ ವಿವಿಧ ರೀತಿಯ ಪ್ರಮಾಣ ಪತ್ರಗಳನ್ನು ವಿತರಿಸುವಲ್ಲಿ ಸರ್ವರ್ ಡೌನ್, ಸರಿಯಾಗಿ ನೆಟ್‌ವರ್ಕ್ ಸಿಗದಿರುವ ಕುರಿತು ಆಗುತ್ತಿರುವ ಸಮಸ್ಯೆಗಳನ್ನು ಹೆಚ್ಚುವರಿ ಉಪಕರಣ ಮತ್ತು ಸೌಲಭ್ಯಗಳನ್ನು ಪೂರೈಸುವ ಮೂಲಕ ತಕ್ಷಣ ಪರಿಹರಿಸುವಂತೆ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದರು.

ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹಮ್ಮದ್ ಝುಬೇರ್, ಪ್ರೊಬೇಷನರ್ ಎಸಿ ಶೇಖರ್ ಜಿ.ಡಿ., ಪ್ರಭಾರ ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗಣ್ಣವರ, ಭೂ ದಾಖಲೆ ಇಲಾಖೆಯ ಉಪನಿರ್ದೇಶಕ ಎಸ್. ನಿಸಾರ್ ಅಹ್ಮದ್, ಉಪತಹಶೀಲ್ದಾರರಾದ ಪ್ರದೀಪ್ ವ್ಹಿ. ಪಾಟೀಲ, ಎಂ.ಎಸ್. ಬೀರಾದಾರ, ಶಿರಸ್ತೆದಾರರಾದ ಹಣಮಂತ ಕೊಚ್ಚರಗಿ, ಶಿವಾನಂದ ಹೆಬ್ಬಳ್ಳಿ, ಸರ್ವೆ ಇಲಾಖೆಯ ಸುಪರ್‌ವೈಸರ್ ವ್ಹಿ.ಆರ್. ಅಗಸಗಿ, ಕಂದಾಯ ನಿರೀಕ್ಷಕ ಕೆ. ಶ್ರೀಧರ, ಆಹಾರ ನಿರೀಕ್ಷಕ ಎಸ್.ಜಿ. ಹಿರೇಮಠ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ///

The post ಧಾರವಾಡ – ತಹಶೀಲ್ದಾರ ಕಚೇರಿಗೆ ಡಿ.ಸಿ. ದಿಢೀರ್ ಭೇಟಿ ನೀಡಿ ಪರಿಶೀಲನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.