ಉತ್ತಮ ಸಮಾಜಕ್ಕಾಗಿ

ಧಾರವಾಡ : ಪೂರ್ವ ತಯಾರಿಯಿಲ್ಲದೇ ಶಿಕ್ಷಕರು ಬೋಧಿಸುವದು ಸಲ್ಲದು

0

ಧಾರವಾಡ : ಪೂರ್ವ ತಯಾರಿಯಿಲ್ಲದೇ ಶಿಕ್ಷಕರು ಬೋಧಿಸುವದು ಸಲ್ಲದು

ಧಾರವಾಡ : ವಿಜ್ಞಾನ ಎಂಬುದು ಪ್ರತಿದಿನ ಅಪಡೇಟ್ ಆಗುತ್ತಿರುವ ವಿಷಯವಾಗಿದ್ದು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗದೇ ಪ್ರತಿ ಕ್ಷಣದಲ್ಲೂ ವೈಜ್ಞಾನಿಕ ಅಧ್ಯಯನದ ಅವಶ್ಯಕತೆ ವಿಜ್ಞಾನ ಶಿಕ್ಷಕರಿಗೆ ಇದ್ದು, ಸಿದ್ಧತೆ ಇಲ್ಲದೇ ಪಾಠಬೋಧನೆ ಸಲ್ಲದು.

ಪ್ರಸ್ತುತ ಸಾಕಷ್ಟು ಶಾಲೆಗಳನ್ನು ಸಂದರ್ಶಿಸಿದಾಗ ಶೈಕ್ಷಣಿಕ ಗುಣಮಟ್ಟ ಹಿನ್ನಡೆಯಲ್ಲಿದ್ದು, ಇದನ್ನು ಸುಧಾರಿಸುವ ನಿಟ್ಟಿನಲ್ಲಿ ತಾವೆಲ್ಲರೂ ಕ್ರಿಯಾಶೀಲರಾಗಿರಬೇಕು ಇದಕ್ಕೆ ಪೂರಕವಾಗಿ ವಿವಿಧ ಆ್ಯಪ್‌ಗಳನ್ನು, ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು ಇಂದು ವಿಜ್ಞಾನ ಕಾರ್ಯಾಗಾರವನ್ನು ಸಂದರ್ಶಿಸಿ ಹೇಳಿದರು.

ಡಿಡಿಪಿಐ ಆರ್.ಎಸ್. ಮುಳ್ಳೂರ ಅವರು ಮಾತನಾಡಿ ಪ್ರಯೋಗಾಲಯ ಮತ್ತು ಕಡಿಮೆ ಖರ್ಚಿನ ಆದರೆ ಹೆಚ್ಚು ಪರಿಣಾಮಕಾರಿಯಾದ ಕಲಿಕೋಪಕರಣಗಳ ಬಳಕೆಯೊಂದಿಗೆ ಬೋಧನೆ ಇರಬೇಕು. ತಾಂತ್ರಿಕ ಮಾಧ್ಯಮಗಳ ಬಳಕೆ ಪೂರಕವಾಗಿರಲಿ ಎಂದು ತಿಳಿಸಿದರು.

ಎ.ಎ. ಖಾಜಿಯವರು ಮಾತನಾಡಿ ಈ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಲು ಸೂಕ್ತ ಕ್ರಿಯಾಯೋಜನೆ ರೂಪಿಸಿದ್ದು, ಅದರಂತೆ ನಾವೆಲ್ಲರೂ ಕಟಿಬದ್ದರಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

ವಿಜ್ಞಾನ ಶಿಕ್ಷಕರಿಗೆ ಒಂದು ದಿನದ ೧೦ನೇ ತರಗತಿಯ ವಿಜ್ಞಾನ ವಿಷಯದ ಕಾರ್ಯಾಗಾರವನ್ನು ಗದಗ ನಗರದ ವಿ ಡಿ ಎಸ್ ಟಿ ಸಿ ಗಂಡು ಮಕ್ಕಳ ಶಾಲೆಯ ವಿಜ್ಞಾನ ಶಿಕ್ಷಕರಾದ ರಾಮಚಂದ್ರ ಮೋನೆ ಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಇಂಗಾಲ ಹಾಗೂ ಅದರ ಸಂಯುಕ್ತಗಳು ಮತ್ತು ವಿದ್ಯುಚ್ಛಕ್ತಿ ಕುರಿತು ತರಬೇತಿ ನೀಡುತ್ತಾ, ವಿಷಯದಲ್ಲಿ ಬರುವ ಕ್ಲಿಷ್ಟಕರ ಅಂಶಗಳನ್ನು ಸರಳವಾಗಿ ಬೋಧಿಸಬೇಕಾದಲ್ಲಿ ಸ್ಥಳಿಯವಾಗಿ ದೂರೆಯುವ ವಸ್ತುಗಳನ್ನು ಬಳಸಿಕೊಳ್ಳಲು ಸಲಹೆ ನೀಡುವುದರೊಂದಿಗೆ ಪಠ್ಯಕ್ರಮದಲ್ಲಿ ಆಗಿರುವ ಬದಲಾವಣೆಗನುಗುಣವಾಗಿ ಆಳವಾದ ಅಧ್ಯಯನ ಉತ್ತಮ ತಂತ್ರಗಳಿಂದ ಬೊಧಿಸುವ ವಿಧಾನ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ೭೦ಕ್ಕೂ ಹಚ್ಚು ಶಿಕ್ಷಕ, ಶಿಕ್ಷಕಿಯರು ತರಬೇತಿಯ ಲಾಭ ಪಡೆದರು.///

The post ಧಾರವಾಡ : ಪೂರ್ವ ತಯಾರಿಯಿಲ್ಲದೇ ಶಿಕ್ಷಕರು ಬೋಧಿಸುವದು ಸಲ್ಲದು appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.