ಉತ್ತಮ ಸಮಾಜಕ್ಕಾಗಿ

ಧಾರವಾಡ : ಪ್ರಮಾಣೀಕರಿಸಿದ ಬೀಜವನ್ನು ಖರೀದಿಸಿ – ಬಸವರಾಜ ಹೊರಟ್ಟಿ

0

ಧಾರವಾಡ : ಪ್ರಮಾಣೀಕರಿಸಿದ ಬೀಜವನ್ನು ಖರೀದಿಸಿ – ಬಸವರಾಜ ಹೊರಟ್ಟಿ

ಧಾರವಾಡ : ರೈತ ಬಾಂಧವರು ಬಿತ್ತನೆಗೆ ಪ್ರಮಾಣೀಕರಿಸಿದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬೇಕು. ಕೃಷಿ ವಿಶ್ವವಿದ್ಯಾಲಯ ಉತ್ತಮ ವಿವಿಧ ಬೀಜದ ತಳಿಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳ ಲಾಭ ಪಡೆಯಬೇಕೆಂದು ವಿಧಾನ ಸಭಾ ಅಧ್ಯಕ್ಷರಾದ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ಅವರು ಇಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳದಲ್ಲಿ ಬೀಜ ಮೇಳಗಳನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ರೈತರು ಬೆಳೆದ ಬೆಳೆಗಳಿಗೆ ಇಂದು ಬೆಳೆಗೆ ತಕ್ಕ ಬೆಂಬಲ ಬೆಲೆ ಸಿಗಬೇಕು. ಆ ನಿಟ್ಟಿನಲ್ಲಿ ರೈತ ಸಂಘ ಬೇಡಿಕೆ ಸಲ್ಲಿಸಿ, ಸಾಮಾನ್ಯ ರೈತನಿಗೂ ಬೆಂಬಲ ಸಿಗಲು ಸಹಕರಿಸಬೇಕೆಂದು ಅವರು ತಿಳಿಸಿದರು.

ಇಂದು ಪ್ರಕೃತಿ ವಿಕೋಪದಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಮಾನ್ಯ ರೈತ ಬೆಳೆದ ಬೆಲೆ ಸಿಗದೇ ತೊಂದರೆಯಲ್ಲಿದ್ದಾರೆ. ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಸಿಗುವಂತಾಗಬೇಕು. ವಿಮಾ ಕಂಪನಿಗಳು ಮಾರ್ಗಸೂಚಿಯಂತೆ ಸಾಮಾನ್ಯ ರೈತನಿಗೆ ಬೆಳೆ ವಿಮೆ ದೊರಕುತ್ತಿಲ್ಲ. ವಿಮಾ ಕಂಪನಿಗಳ ಮಾನದಂಡಗಳಂತೆ ವಿಮೆಯಿಂದ ವಂಚಿತರಾಗುತ್ತಾರೆ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯವು ಶಿಕ್ಷಣ ಕೊಡುವ ವಿದ್ಯಾರ್ಥಿಗಳು ಸ್ವಂತ ಕೃಷಿ ಚಟುವಟಿಕೆ ಮಾಡಬೇಕು. ಅಲ್ಲದೆ ಗ್ರಾಮದ ರೈತನಿಗೆ ನೆರವಾಗಬೇಕು. ಅಂತಹ ವ್ಯವಸ್ಥೆಗಳನ್ನು ಕೃಷಿ ವಿಶ್ವವಿದ್ಯಾಲಯ ತರಬೇಕೆಂದು ಬಸವರಾಜ ಹೊರಟ್ಟಿ ತಿಳಿಸಿದರು.

ರೈತರು ಹಗಲು ವಿದ್ಯುತ್ ಪಡೆದು ನೀರು ಹಾಯಿಸುವ ಕೆಲಸದ ನಿಮಿತ್ಯ ಹೆಸ್ಕಾಂದಿಂದ ಪ್ರಾಯೋಗಿಕವಾಗಿ ಕಬ್ಬು ಬೆಳೆಗಳ ೩ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ದಿನದ ೭ ತಾಸು ವಿದ್ಯುತ್ ಸರಬರಾಜು ಮಾಡಲು ಆದೇಶಿಸಲಾಗಿದೆ ಎಂದು ಸಭಾಪತಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಎಂ.ಬಿ. ಛಟ್ಟಿ, ನಿಕಟಪೂರ್ವ ಕುಲಪತಿಗಳಾದ ಡಾ.ಬಿ.ಪಿ. ಬಿರಾದಾರ, ಡಾ. ಬಸವರಾಜ ಹೆಚ್., ಕೃಷಿಕ ಸಮಾಜದ ಈಶ್ವರಚಂದ್ರ ಹೊಸಮನಿ, ಶ್ರೀಮತಿ ಸುಮಿತ್ರಾದೇವಿ, ಡಾ. ರಾಜೇಂದ್ರ ಸಣ್ಣಕ್ಕಿ, ಸುನೀಲ್‌ಕುಮಾರ್ ಬೆಳಗಲಿ, ಸುರೇಶ್ ಗೊಣಸಗಿ ಹಾಗೂ ಇತರರು ಭಾಗವಹಿಸದ್ದರು. ಕಾರ್ಯಕ್ರಮದ ನಂತರ ರೈತರಿಂದ, ರೈತರಿಗಾಗಿ ವಿಚಾರಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.////

The post ಧಾರವಾಡ : ಪ್ರಮಾಣೀಕರಿಸಿದ ಬೀಜವನ್ನು ಖರೀದಿಸಿ – ಬಸವರಾಜ ಹೊರಟ್ಟಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.