ಉತ್ತಮ ಸಮಾಜಕ್ಕಾಗಿ

ನಗರದಲ್ಲಿ ನಮ್ಮ ಅಸ್ಥಿತ್ವಕಕ್ಕಾಗಿ ಹೋರಾಟ ರೂಪಿಸಿ: ಎ.ನರಸಿಂಹಮೂರ್ತಿ

0

“ಸಂಘಟನಾ ದೃಷ್ಠಿಕೋನದಲ್ಲಿ ಬದಲಾವಣೆ- ಜವಾಬ್ದಾರಿ ಕುರಿತು ಕಾರ್ಯಗಾರ”

ನಗರದಲ್ಲಿ ನಮ್ಮ ಅಸ್ಥಿತ್ವಕಕ್ಕಾಗಿ ಹೋರಾಟ ರೂಪಿಸಿ: ಎ.ನರಸಿಂಹಮೂರ್ತಿ

ಬೆಳಗಾವಿ: ನಗರದ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಜನರ ಬದುಕು ಅತಂತ್ರವಾಗಿದೆ. ಮುಂಬರುವ ದಿನಗಳಲ್ಲಿ ಬಡವರಿಗೆನೆಲೆ ಇಲ್ಲದೇ ಗೂಳೆ ಹೋಗುವ ಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಕಾಣುತ್ತದೆ.

ಹಾಗಾಗಿ ನಮ್ಮ ಪ್ರದೇಶದ ಭೂಮಿಹಕ್ಕಿನ ಜೊತೆಗೆ ನಗರಗಳಲ್ಲಿ ನಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಹೋರಾಟ ರೂಪಿಸಬೇಕಾಗಿದೆ ಎಂದು `ಸ್ಲಂ’ ಜನಾಂದೋಲ ಕರ್ನಾಟಕದ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ ಕರೆ ನೀಡಿದರು.

ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ೨೧ ರಂದು ಸ್ಲಂ ಜನಾಂದೋಲ ಕರ್ನಾಟಕ ಹಾಗೂ ಬೆಳಗಾವಿ `ಸ್ಲಂ’ ವತಿಯಿಂದ ಆಯೋಜಿಸಲಾಗಿದ್ದ “ಸಂಘಟನಾ ದೃಷ್ಠಿಕೋನದಲ್ಲಿ ಬದಲಾವಣೆ ಮತ್ತು ಜವಾಬ್ದಾರಿ ಕುರಿತು” ಮಾತನಾಡುತ್ತಾ

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಜನ ವಿರೋಧಿ ನೀತಿಗಳಿಂದ ಇವತ್ತು ನಮ್ಮ `ಸ್ಲಂ’ ಜನರಿಗೆ ಸಿಗಬೇಕಾದ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಿಂದ ಬೆಳಗಾವಿ ನಗರದ ನೂರಾರು ಕುಟುಂಬಗಳು ತಮ್ಮ ಭೂಮಿಯನ್ನು ಕಳೆದುಕೊಂಡು ಬೀದಿ ಪಾಲಾಗುತ್ತಿರುವುದು ದುರಂತ ವಿಪರ್ಯಾಸ, ಇಂತಹ ಯೋಜನೆಗಳಿಂದ ಕೆಲವು ಶ್ರೀಮಂತರಿಗೆ ಹಾಗೂ ಕಾರ್ಪೋರೇಟ್ ಕಂಪನಿಗಳಿಗೆ ವ್ಯಾಪಾರಿಕರಣ ಕೇಂದ್ರಗಳಾಗಿವೆ.

ಸ್ಮಾರ್ಟ್ ಸಿಟಿಗಳು, ಸರ್ಕಾರಗಳು ಬಡವರಿಗೆ ನಗರ ವಂಚಿತ ಸಮುದಾಯಗಳಿಗೆ ಸಂವಿಧಾನ ಬದ್ಧ ಸವಲತ್ತುಗಳನ್ನು ನೀಡುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ.

ಆದ್ದರಿಂದ ನಮ್ಮ ನಗರವಂಚಿತ ಸಮುದಾಯಗಳು ಸ್ಲಂ ನಿವಾಸಿಗಳು, ವಸತಿರಹಿತರುಕಾರ್ಮಿಕರುನಗರದ ಶ್ರಮ ಜೀವಿಗಳು ಒಂದಾಗಿಇಂತಹ ದುರಾಡಳಿತದ ವಿರುದ್ಧಹೋರಾಟಗಳನ್ನು ನಡೆಸಿದಾಗ ಮಾತ್ರ ನಾವು ನಮ್ಮಅಸ್ಥಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಎಂದು ತಿಳಿಸಿದರು.

`ಕಾರ್ಯಾಗಾರದಲ್ಲಿ ಕೈಗೊಂಡಂತಹ ನಿರ್ಣಯಗಳು’

`ಸ್ಲಂ’ ನಿವಾಸಿಗಳು ಮುಂದಿನ ದಿನಗಳಲ್ಲಿ ಬೆಳಗಾವಿ ನಗರದಲ್ಲಿ `ಸ್ಲಂ’ ಶಾಖೆಗಳ ರಚಿಸಿ ನಿವೇಶನ ರಹಿತರ, ಅಸಂಘಟಿತ ಸಮುದಾಯದ ಕಾರ್ಮಿಕರು, ಅಲೆಮಾರಿಗಳು ಬೀದಿ ವ್ಯಾಪಾರಿಗಳು, ಒಳಗೊಂಡ ನಗರ ಸಮಿತಿ ರಚಿಸಿ,ನಮ್ಮ ಮಾನವಘನತೆಗೆ& ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ರೂಪಿಸಿ ಸಂಘಟನೆ ದೃಷ್ಠಿಯಲ್ಲಿ ಬದಲಾವಣೆ ತರುವಲ್ಲಿ ಸಾಮೂಹಿಕ ನಾಯಕತ್ವದ ಜೊತೆಗೆ ಪ್ರಸ್ತುತ ಕಾಲಕಾಲಕ್ಕೆ ಎದುರಾಗುವ ವಾಸ್ತವಿಕ ನೆಲೆಗಟ್ಟಿನಲ್ಲಿ ಬದಲಾವಣೆ ತರುವಲ್ಲಿ ಕಾರ್ಯಗಾರದಲ್ಲಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಕೃಷ್ಣಾ ನಾಯಕ, ರಾಜ್ಯ ಸಂಘಟನಾ ಸಂಚಾಲಕ ಇಂತಿಯ್ಯಾಜ ಆರ್ ಮಾನವಿ,ಕಾರ್ಯದರ್ಶಿ ಗೋಪಿ ಬಳ್ಳಾರಿ, ಸದಸ್ಯರು ನರಸಿಂಹ ಶಾಖೆ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಫಕ್ಕಿರಪ್ಪ ತಳವಾರ, ಖಂಜಾಚಿ ರಾಜು ನೆಸರೆಕರ , ಸದಸ್ಯರಾದ ದುರ್ಗಪ್ಪಗಾರಗೋಟಿ, ಸುನೀಲ ಗಾಡಿವಡ್ಡರ, ಶಿವಪ್ಪಾ ನಾಯಕ, ರಾಜಕಮಲ ಚೌಗಲೆ ಹಾಗೂ ಉಪಸ್ಥಿತಿರಿದ್ದರು. ////

The post ನಗರದಲ್ಲಿ ನಮ್ಮ ಅಸ್ಥಿತ್ವಕಕ್ಕಾಗಿ ಹೋರಾಟ ರೂಪಿಸಿ: ಎ.ನರಸಿಂಹಮೂರ್ತಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.