ಉತ್ತಮ ಸಮಾಜಕ್ಕಾಗಿ

ನಗರದ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ: ಸುಧಾ ಬಾತಖಂಡೆ

0

ಬೆಳಗಾವಿ: ಸ್ಮಾರ್ಟ ಸಿಟಿಯಾಗಿ ಆಯ್ಕೆಯಾಗಿರುವ ಬೆಳಗಾವಿ ನಗರದ ಸ್ಚಚ್ಛತೆಯನ್ನು ಕಾಪಾಡುವ ಮೂಲಕ ನಗರದ ಮುಕುಟವನ್ನು ಮತ್ತಷ್ಟು ಏರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸುಧಾ ಬಾತಖಂಡೆ ಹೇಳಿದರು. .

ಕೇಂದ್ರ ಸರಕಾರದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಧಾರವಾಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಳಗಾವಿ ಮಹಾನಗರ ಪಾಲಿಕೆ, ಮತ್ತು ಆರ್.ಎನ್ ಶೆಟ್ಟಿ ಪಾಲಿಟೆಕ್ನಿಕ್ ಬೆಳಗಾವಿ ಇವರುಗಳ ಸಂಯುಕ್ತ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ (ನಗರ) ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಮೂಲದಲ್ಲೆ ಕಸ ವಿಂಗಡಣೆ ಮಾಡುವ ಮೂಲಕ ತ್ಯಾಜ್ಯ ಸಂಸ್ಕರಿಸುವ ಪಾಲಿಕೆಯ ಕೆಲಸದಲ್ಲಿ ನೆರವಾಗಬೇಕು.
ಈ ರೀತಿಯ ತ್ಯಾಜ್ಯ ವಿಂಗಡಣೆ ಪ್ರಕ್ರಿಯೆ ಗ್ರಾಮೀಣ ಪ್ರದೇಶದಲ್ಲೂ ಅನುಕರಿಸಿದಾಗ ಸ್ವಚ್ಛ ಭಾರತ ನಿರ್ಮಾಣ ಮಾಡುವ ಮಹಾತ್ಮ ಗಾಂಧಿ ಅವರ ಕನಸು ನನಸಾಗಲಿದೆ ಎಂದು ತಿಳಿಸಿದರು.
ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಧಾರವಾಡದ ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಜಿ ತುಕಾರಾಮಗೌಡ ಮಾತನಾಡಿ ಕಸವನ್ನು ಎಲ್ಲೇಂದರಲ್ಲಿ ಚೆಲ್ಲುವ ಅಭ್ಯಾಸವನ್ನು ತ್ಯಜಿಸಬೇಕು ಎಂದರು. ಸ್ವಚ್ಛ ಭಾರತ ಮಿಷನ್ ಯೋಜನೆ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯವಾಗಲಿದ್ದು, ಬಯಲು ಮಲ ವಿಸರ್ಜನೆ ತಡೆ ಮತ್ತು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಿದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ, ಉದಯಕುಮಾರ ಬಿ. ಟಿ ಮಾತನಾಡಿ ಬೆಳಗಾವಿ ನಗರದಲ್ಲಿ ಆರು ಲಕ್ಷ ಜನಸಂಖ್ಯೆಯಿದ್ದು ಪ್ರತಿ ನಿತ್ಯ 250 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ, ಇದನ್ನು ತುರುಮುರಿ ಎಂಬ ಪ್ರದೇಶದಲ್ಲಿ 66 ಎಕರೆ ಭೂಪ್ರದೇಶದಲ್ಲಿ ಶೇಖರಿಸಿ ತದನಂತರ ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ. ಆದರೆ ಕಸ ಸಂಗ್ರಹಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕಸ ನಿರ್ವಹಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಈ ಕಾರ್ಯದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತಿ ಅವಶ್ಯವಿದ್ದು ಕಸವನ್ನು ತಮ್ಮ ತಮ್ಮ ಮನೆಗಳಲ್ಲೇ ಗೊಬ್ಬರವನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಇದರಿಂದ ಪಾಲಿಕೆಗೆ ಹಣ ಉಳಿತಾಯವಾಗಲಿದ್ದು, ಜನರ ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದರು.

News Belgaum-ನಗರದ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ: ಸುಧಾ ಬಾತಖಂಡೆ 1 News Belgaum-ನಗರದ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ: ಸುಧಾ ಬಾತಖಂಡೆ 2ನಗರದಲ್ಲಿ 52 ಕೊಳಚೆ ಪ್ರದೇಶಗಳಿದ್ದು ಶೌಚಾಲಯವನ್ನು ನಿರ್ಮಿಸಲಾಗಿದೆ. ಈಗಾಗಲೇ ಬಯಲು ಮಲ ವಿಸರ್ಜನೆ ನಗರ ಎಂದು ಘೋಷಿಸಲಾಗಿದೆ. ಆದರೆ ಮುಂದಿರುವ ದೊಡ್ಡ ಸವಾಲು ಪ್ಲಾಸ್ಟಿಕ್ ನಿರ್ವಹಣೆ, ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರವನ್ನು ಉಳಿಸಬೇಕಾಗಿದೆ ಎಂದರು. ಸ್ವಚ್ಛ ಭಾರತದ ಸಂಪೂರ್ಣ ಯಶಸ್ಸು ಕಾಣಬೇಕಾದರೆ ಒಬ್ಬರಿಂದ ಒಬ್ಬರಿಕೆ ಕಸ ನಿರ್ವಹಣೆಯ ಮಾಹಿತಿ ಪಸರಿಸಬೇಕಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್ ಎನ್ ಶೆಟ್ಟಿ ಪಾಲಿಟಿಕ್ನಿಕ್ ಪ್ರಾಚಾರ್ಯರಾದ ಎಸ್ ಪಿ ಹಿರೇಮಠ ಇಂದಿನ ಪೀಳಿಗೆಯಲ್ಲಿ ಸಮಾಜಿಕ ಕಳಕಳಿ ಮಾಯವಾಗುತ್ತಿದೆ. ಇಂದು ನಾವು ತೋರುವ ಬೇಜವಾಬ್ದಾರಿ ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ನೂಕುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಚೆಲ್ಲದೆ ಸ್ಚಚ್ಛತೆ ಕಾಪಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಪಾಠ ಪ್ರವಚನಗಳ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿ ಸ್ವಚ್ಛ ಭಾರತ ಮಿಷನ್ ಅಂಶಗಳನ್ನು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಅದನ್ನು ಇತರರಿಗೆ ಪ್ರಚುರ ಪಡಿಸಬೇಕು ಎಂದು ಮನವಿ ಮಾಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಪರಿಸರ ಎಂಜಿನಿಯರಗಳಾದ ಪ್ರವೀಣ ಮಾತನಾಡಿದರು. ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಸಚಿನ್ ಶಿರಹಟ್ಟಿ, ಪ್ರಶಾಂತ, ಮಂಜುಳ ಮತ್ತು ಕಾಲೇಜಿನ ಎಲ್ಲಾ ಶಿಕಕರು ಉಪಸ್ಥಿತರಿದ್ದರು. ಜಾಗೃತಿ ಜಾಥಾ, ಶ್ರಮದಾನ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಮುರಳಿಧರ ನಿರೂಪಿಸಿ ವಂದಿಸಿದರು, ಸುರೇಶ್ ಸ್ವಾಗತಿಸಿದರು.

The post ನಗರದ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ: ಸುಧಾ ಬಾತಖಂಡೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.