ಉತ್ತಮ ಸಮಾಜಕ್ಕಾಗಿ

ನಗರ ಸ್ಥಳೀಯ ಸಂಸ್ಥೆಗಳ : ಅಧಿಸೂಚನೆ ಪ್ರಕಟ

news

0

ಬೆಳಗಾವಿ:(news belgaum) ಬೆಳಗಾವಿ ಜಿಲ್ಲೆಯಲ್ಲಿ ಅವಧಿ ಮುಕ್ತಾಯವಾಗುವ 14 ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಅಧಿಸೂಚನೆಯನ್ನು ಶುಕ್ರವಾರ (ಆ.10) ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಹೊರಡಿಸಿದ್ದಾರೆ.
ಈ ಕುರಿತು ಇಲ್ಲಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಶುಕ್ರವಾರ (ಆ.10) ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಗಸ್ಟ್ 10 ರಿಂದ ನಾಮಪತ್ರ ಸಲ್ಲಿಸಬಹುದಾಗಿದ್ದು, ಆಗಸ್ಟ್ 17 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆಗಸ್ಟ್ 18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆ.20 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಆಗಸ್ಟ್ 29 ರಂದು ಬೆಳಿಗ್ಗೆ 7 ಗಂಟೆಯಿಂದ 5 ಗಂಟೆಯವರೆಗೆ ಮತದಾನ (ಅವಶ್ಯವಿದ್ದರೆ) ಜರುಗಲಿದೆ. ಅವಶ್ಯವಿದ್ದಲ್ಲಿ ಆಗಸ್ಟ್ 31 ರಂದು ಮರು ಮತದಾನ ಜರುಗಲಿದೆ. ಸೆಪ್ಟೆಂಬರ್ 03 ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯ ಒಟ್ಟು 10 ಪುರಸಭೆ, 2 ನಗರಸಭೆ ಹಾಗೂ 2 ಪಟ್ಟಣ ಪಂಚಾಯತಗಳ ಒಟ್ಟು 343 ವಾರ್ಡ್‍ಗಳಿಗೆ ಚುನಾವಣೆ ಜರುಗಲಿದ್ದು, ವಿವರ ಇಂತಿದೆ:
ಪುರಸಭೆ:
ಬೈಲಹೊಂಗಲ- 27 ವಾರ್ಡ್‍ಗಳು ಹಾಗೂ 43 ಮತಗಟ್ಟೆಗಳು, ಸವದತ್ತಿ-27 ವಾರ್ಡ್‍ಗಳು ಹಾಗೂ 32 ಮತಗಟ್ಟೆಗಳು, ರಾಮದುರ್ಗ-27 ವಾರ್ಡ್‍ಗಳು ಹಾಗೂ 33 ಮತಗಟ್ಟೆಗಳು, ಕೊಣ್ಣೂರ-23 ವಾರ್ಡ್‍ಗಳು ಹಾಗೂ 23 ಮತಗಟ್ಟೆಗಳು, ಮೂಡಲಗಿ-23 ವಾರ್ಡ್‍ಗಳು ಹಾಗೂ 31 ಮತಗಟ್ಟೆಗಳು, ಸಂಕೇಶ್ವರ-23 ವಾರ್ಡ್‍ಗಳು ಹಾಗೂ 26 ಮತಗಟ್ಟೆಗಳು, ಹುಕ್ಕೇರಿ-23 ವಾರ್ಡ್‍ಗಳು ಹಾಗೂ 23 ಮತಗಟ್ಟೆಗಳು, ಚಿಕ್ಕೋಡಿ-23 ವಾರ್ಡ್‍ಗಳು ಹಾಗೂ 40 ಮತಗಟ್ಟೆಗಳು, ಸದಲಗಾ-23 ವಾರ್ಡ್‍ಗಳು ಹಾಗೂ 23 ಮತಗಟ್ಟೆಗಳು, ಕುಡಚಿ-23 ವಾರ್ಡ್‍ಗಳು ಹಾಗೂ 24 ಮತಗಟ್ಟೆಗಳು.

ನಗರಸಭೆ:
ಗೋಕಾಕ-31 ವಾರ್ಡ್‍ಗಳು ಹಾಗೂ 63 ಮತಗಟ್ಟೆಗಳು, ನಿಪ್ಪಾಣಿ-31 ವಾರ್ಡ್‍ಗಳು ಹಾಗೂ 52 ಮತಗಟ್ಟೆಗಳು.

ಪಟ್ಟಣ ಪಂಚಾಯತ:
ಖಾನಾಪುರ-20 ವಾರ್ಡ್‍ಗಳು ಹಾಗೂ 20 ಮತಗಟ್ಟೆಗಳು,, ರಾಯಬಾಗ-19 ವಾರ್ಡ್‍ಗಳು ಹಾಗೂ 32 ಮತಗಟ್ಟೆಗಳು.

14 ನಗರ ಸ್ಥಳೀಯ ಸಂಸ್ಥೆಗಳ ಮತದಾರರ ವಿವರ:
2 ನಗರ ಸಭೆಗಳ ವ್ಯಾಪ್ತಿಯಲ್ಲಿ 57,235 ಪುರುಷರು ಹಾಗೂ 58,974 ಮಹಿಳೆಯರು ಸೇರಿದಂತೆ ಒಟ್ಟು 1,16,209 ಮತದಾರರಿದ್ದಾರೆ. 10 ಪುರಸಭೆಗಳಲ್ಲಿ 1,32,415 ಪುರುಷರು ಹಾಗೂ 1,34,318 ಮಹಿಳೆಯರು ಸೇರಿದಂತೆ ಒಟ್ಟು 2,66,733 ಮತದಾರರಿದ್ದಾರೆ. 2 ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ 16,201 ಪುರುಷರು ಹಾಗೂ 15,676 ಮಹಿಳೆಯರು ಸೇರಿದಂತೆ ಒಟ್ಟು 31,877 ಮತದಾರರಿದ್ದಾರೆ.
ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2,05,851 ಪುರುಷರು ಹಾಗೂ 2,08,968 ಮಹಿಳೆಯರು ಸೇರಿದಂತೆ ಒಟ್ಟು 4,14,819 ಮತದಾರರಿದ್ದಾರೆ.
14 ನಗರ ಸ್ಥಳೀಯ ಸಂಸ್ಥೆಗಳ ಮತಗಟ್ಟೆಗಳ ವಿವರ:
2 ನಗರಸಭೆ ವ್ಯಾಪ್ತಿಯಲ್ಲಿ 115 ಮತಗಟ್ಟೆಗಳಿದ್ದು, 38 ಸೂಕ್ಷ್ಮ, 30 ಅತಿ ಸೂಕ್ಷ್ಮ ಹಾಗೂ 47 ಸಾಮಾನ್ಯ ಮತಗಟ್ಟೆಗಳಿವೆ. 10 ಪುರಸಭೆ ವ್ಯಾಪ್ತಿಯಲ್ಲಿ 298 ಮತಗಟ್ಟೆಗಳಿದ್ದು, 90 ಸೂಕ್ಷ್ಮ, 81 ಅತಿ ಸೂಕ್ಷ್ಮ ಹಾಗೂ 127 ಸಾಮಾನ್ಯ ಮತಗಟ್ಟೆಗಳಿವೆ. 2 ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ 40 ಮತಗಟ್ಟೆಗಳಿದ್ದು, 16 ಸೂಕ್ಷ್ಮ, 09 ಅತಿ ಸೂಕ್ಷ್ಮ ಹಾಗೂ 15 ಸಾಮಾನ್ಯ ಮತಗಟ್ಟೆಗಳಿವೆ.
14 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 453 ಮತಗಟ್ಟೆಗಳಿದ್ದು, 144 ಸೂಕ್ಷ್ಮ, 120 ಅತಿ ಸೂಕ್ಷ್ಮ ಹಾಗೂ 189 ಸಾಮಾನ್ಯ ಮತಗಟ್ಟೆಗಳಿವೆ.

ಒಟ್ಟು 832 ಪೊಲೀಸ್ ಸಿಬ್ಬಂದಿ:
ಒಟ್ಟು 832 ಪೊಲೀಸ್ ಅಧಿಕಾರಿ /ಪೋಲಿಸ್ ಸಿಬ್ಬಂದಿಗಳನ್ನು ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜನೆ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ ಮತ್ತು 3 ಮತಗಟ್ಟೆ ಅಧಿಕಾರಿಗಳನ್ನು ( 1 Pಖಔ+ 3 Pಔ) ನೇಮಕ ಮಾಡಲಾಗಿದೆ. ಚುನಾವಣೆಯ ಸಂಪೂರ್ಣ ಮೇಲ್ವಿಚಾರಣೆ ಜರುಗಿಸಲು ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಸೂಚಿಸಲಾಗಿದೆ.
ಮತಯಂತ್ರಗಳ (ಇ.ವಿ.ಎಂ) ಬಳಕೆ:
ಮತಯಂತ್ರಗಳನ್ನು ಬಳಸಿ ಈ ಚುನಾವಣೆಯನ್ನು ನಡೆಸಲಾಗುತ್ತಿದೆ. ಚುನಾವಣೆ ನಡೆಯುತ್ತಿರುವ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಒಟ್ಟು 544 ಬ್ಯಾಲೆಟ್ ಯೂನಿಟ್‍ಗಳನ್ನು ಹಾಗೂ 544 ಕಂಟ್ರೋಲ್ ಯೂನಿಟ್‍ಗಳನ್ನು ಸಿದ್ದಗೊಳಿಸಲಾಗಿದೆ.

ಅಭ್ಯರ್ಥಿಗಳ ಚುನಾವಣಾ ವೆಚ್ಚಮಿತಿ:
ಸರ್ಕಾರದ ಅಧಿಸೂಚನೆ ಅನ್ವಯ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಗರಿಷ್ಠ ಮಿತಿಯು ನಗರ ಸಭೆ- 2 ಲಕ್ಷ ರೂ, ಪುರಸಭೆ- 1.50 ರೂ, ಪಟ್ಟಣ ಪಂಚಾಯತ- 1 ಲಕ್ಷ ರೂ.

ಚುನಾವಣಾಧಿಕಾರಿಗಳ ನಿಯೋಜನೆ:
ಜಿಲ್ಲೆಯಲ್ಲಿ ಒಟ್ಟು 35 ಚುನಾವಣಾಧಿಕಾರಿಗಳು ಹಾಗೂ 35 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಈಗಾಗಲೇ ತರಬೇತಿಯನ್ನು ನೀಡಲಾಗಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಒಂದು ತಂಡ ಹಾಗೂ ನಗರ ಸ್ಥಳಿಯ ಸಂಸ್ಥೆಗಳವಾರು ಒಟ್ಟು 32 ಸೆಕ್ಟರ್ / ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. ವೆಚ್ಚ ನಿರ್ವಹಣಾ ಕುರಿತು ಜಿಲ್ಲಾ ಮಟ್ಟದಲ್ಲಿ ಒಂದು ತಂಡ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 19 ತಂಡಗಳನ್ನು ರಚಿಸಲಾಗಿದೆ. ಪ್ರತಿ ನಗರ ಸ್ಥಳೀಯ ಸಂಸ್ಥೆಗಳಿಗೆ ಇಬ್ಬರಂತೆ ಒಟ್ಟು 30 ಇವಿಎಂ ಮಾಸ್ಟರ ಟ್ರೇನರ್ಸಗಳನ್ನು ನೇಮಕ ಮಾಡಲಾಗಿದೆ.

ನೋಟಾ:
ರಾಜ್ಯ ಚುನಾವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇರುವ ವ್ಯಕ್ತ್ತಿಯು, ತನ್ನ ಇಚ್ಛೆಯಂತೆ “ಯಾರೊಬ್ಬರಿಗೂ ತನ್ನ ಮತ ನೀಡಲು ಇಚ್ಛೆ ಇರುವುದಿಲ್ಲ” ಎಂಬ ತನ್ನ ತೀರ್ಮಾನವನ್ನು ರಹಸ್ಯವಾಗಿ ಮತ ಚಲಾಯಿಸುವ ಮೂಲಕ ವ್ಯಕ್ತಪಡಿಸಲು ಅನುಕೂಲವಾಗುವಂತೆ ಮತಪತ್ರದಲ್ಲಿ ಕೊನೆಯ ಅಭ್ಯರ್ಥಿಯ ನಂತರದ ಪ್ಯಾನಲ್ “ಮೇಲ್ಕಂಡ ಯಾರು ಅಲ್ಲ” ಎಂದು ಮುದ್ರಿಸಲಾಗಿರುತ್ತದೆ.
ಆಗಸ್ಟ್ 29 ರಂದು ಜರುಗುವ ಚುನಾವಣಾ ಸಂದರ್ಭದಲ್ಲಿ ಮತದಾರರ ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಹಿಯನ್ನು (Iಟಿಜeಟibಟe Iಟಿಞ) ಹಾಕಲಾಗುವುದು.

ಭಾವಚಿತ್ರವಿರುವ ಮತಪತ್ರ:
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಂದೇ ವಾರ್ಡಿನಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ಸ್ಪರ್ಧಿಸುವ ಸಂದರ್ಭಗಳಿರುವುದರಿಂದ ಅಭ್ಯರ್ಥಿಗಳನ್ನು ಗುರುತಿಸಲು ಮತಪತ್ರದಲ್ಲಿ ಅವರ ಹೆಸರಿನ ಮುಂದೆ ಅವರ ವೃತ್ತಿ ಅಥವಾ ವಿಳಾಸ ಇತ್ಯಾದಿಗಳನ್ನು ತೋರಿಸಲಾಗುತ್ತಿತ್ತು. ಆದರೂ ಸಹ ಮತದಾರನಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸಲು ಮತಪತ್ರದಲ್ಲಿ ಎಲ್ಲಾ ಅಭ್ಯರ್ಥಿಗಳ ಹೆಸರಿನ ಮುಂದೆ ಅವರ ಇತ್ತೀಚಿನ ಭಾವಚಿತ್ರ ಮುದ್ರಿಸುವಂತೆ ಕ್ರಮ ಕೈಗೊಳ್ಳಲಾಗಿದೆ.

ಪರಿಷ್ಕøತ ಪ್ರಮಾಣ ಪತ್ರ:
ಮತದಾರನಿಗೆ ಅಭ್ಯರ್ಥಿಯ ಪೂರ್ವಾಪರಗಳನ್ನು ತಿಳಿದುಕೊಳ್ಳಲು ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ತನ್ನ ಹಿನ್ನಲೆ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳು ಇರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿತ್ತು. ಈಗ ಅದರೊಂದಿಗೆ ತನ್ನ ಸ್ವವಿವರ ವಿದ್ಯಾರ್ಹತೆ ಆದಾಯದ ಮೂಲಗಳನ್ನು ತಿಳಿಸಲು ಪರಿಷ್ಕøತ ನಮೂನೆಯಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕಾಗಿರುತ್ತದೆ.

ಭಾವಚಿತ್ರವಿರುವ ಮತದಾರರ ಚೀಟಿ:
ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಮತದಾರನಿಗೆ ಅವರ ವಾರ್ಡಿನ ಸಂಖ್ಯೆ, ಮತದಾರರ ಪಟ್ಟಿಯ ಭಾಗದ ಸಂಖ್ಯೆ, ಮತದಾರರ ಪಟ್ಟಿ ಕ್ರಮ ಸಂಖ್ಯೆ, ಮತಗಟ್ಟೆಯ ಸಂಖ್ಯೆ ಮತ್ತು ಹೆಸರು/ವಿಳಾಸ, ಮತದಾನದ ದಿನಾಂಕ, ಮತದಾನದ ಸಮಯ, ಇತ್ಯಾದಿ ಮಾಹಿತಿಗಳಿರುವ ಭಾವಚಿತ್ರವಿರುವ ಮತದಾರರ ಚೀಟಿಯನ್ನು ನೀಡಲು ಉದ್ದೇಶಿಸಿರುತ್ತಾರೆ. ಜಿಲ್ಲೆಯ ಎಲ್ಲ ಮತದಾರರ ಚೀಟಿಗಳನ್ನು ಮುದ್ರಿಸಿ ಬಿ.ಎಲ್.ಒ ಗಳ ಮೂಲಕ ಸಂಬಂಧಪಟ್ಟ ಮತದಾರರಿಗೆ ವಿತರಣೆ ಮಾಡಲು ತಿಳಿಸಲಾಗಿದೆ.
ಶಾಂತಿಯುತ ಮತದಾನಕ್ಕೆ ಮನವಿ:
ಮಸ್ಟರಿಂಗ, ಡಿ ಮಸ್ಟರಿಂಗ ಮತ ಎಣಿಕೆ ಕಾರ್ಯಗಳು ತಾಲೂಕು ಕೇಂದ್ರ ಸ್ಥಾನದಲ್ಲಿ ಜರುಗಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2018ನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.