ಉತ್ತಮ ಸಮಾಜಕ್ಕಾಗಿ

ನಮಾಜ್​ ಯಾವುದೇ ಸ್ಥಳದಲ್ಲಿ ಬೇಕಾದರೂ ಮಾಡಬಹುದು: 1994ರ ತೀರ್ಪನ್ನೇ ಸುಪ್ರೀಂ ಕೋರ್ಟ್​ ಎತ್ತಿಹಿಡಿದಿದೆ.

0

1994ರ ತೀರ್ಪನ್ನೇ ಸುಪ್ರೀಂ ಕೋರ್ಟ್​ ಎತ್ತಿಹಿಡಿದಿದೆ.

ನವದೆಹಲಿ: ಮಸೀದಿ ಇಸ್ಲಾಂ ನ ಅವಿಭಾಜ್ಯ ಅಂಗವಲ್ಲ ನಮಾಜ್​ ಯಾವುದೇ ಸ್ಥಳದಲ್ಲಿ ಬೇಕಾದರೂ ಮಾಡಬಹುದು, ಇದಕ್ಕೆ ಮಸೀದಿಯೇ ಆಗಬೇಕೆಂಬ ಅಗತ್ಯವಿಲ್ಲ ಎಂದು 1994ರ ತೀರ್ಪನ್ನೇ ಸುಪ್ರೀಂ ಕೋರ್ಟ್​ ಎತ್ತಿಹಿಡಿದಿದೆ.

ಸೀದಿಯಲ್ಲೇ ಪ್ರಾರ್ಥನೆ ಸಲ್ಲಿಸಬೇಕೆಂದೇನಿಲ್ಲ. ಮಸೀದಿಯನ್ನು ಸ್ಥಳಾಂತರ ಮಾಡೋದ್ರಿಂದ ನಮಾಜ್​ಗೆ ಧಕ್ಕೆಯಾಗಲ್ಲ. ಬೇರೆ ಮಸೀದಿಯಲ್ಲೂ ಅಥವಾ ಹೊರಗೂ ನಮಾಜ್​ ಮಾಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರಿದ್ದ ಪೀಠ ತಿಳಿಸಿದೆ.
1994ರ ಇಸ್ಮಾಯಿಲ್​​ ಫಾರೂಕಿ ಪ್ರಕರಣದ ತೀರ್ಪನ್ನು ಎತ್ತಿಹಿಡಿದಿದ್ದು, ಎಲ್ಲಾ ಧಾರ್ಮಿಕ ಸ್ಥಳಗಳನ್ನು ಸಮಾನವಾಗಿ ಗೌರವಿಸಬೇಕು. ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾವಣೆ ಇಲ್ಲ ಎಂದು ತಿಳಿಸಿದೆ.

ಯಾವುದೇ ಧರ್ಮದ ಸ್ಥಳ ಮಸೀದಿ, ಮಂದಿರ, ಚರ್ಚ್ ಗಳನ್ನು ಬೇಕಾದರೂ ಸ್ವಾಧೀನಕ್ಕೆ ಪಡೆಯಬಹುದು, ಮಸೀದಿಗೆ ಪ್ರತ್ಯೇಕ ಮಾನದಂಡ ಇಲ್ಲ ಪ್ರತಿ ತೀರ್ಪನ್ನು ಬೇರೆ ಬೇರೆ ಪರಿಸ್ಥಿತಿಯಲ್ಲಿ ನೀಡಲಾಗುತ್ತದೆ ಎಂದು ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಹಾಗೂ ನ್ಯಾಯಮೂರ್ತಿ ಭೂಷಣ್​ ಅವರದ್ದು ಒಂದು ಅಭಿಪ್ರಾಯವಾದ್ರೆ, ನ್ಯಾ. ಎಸ್​. ನಜೀರ್ ಅವರದ್ದು ಮತ್ತೊಂದು ಅಭಿಪ್ರಾಯವಾಗಿದೆ.

ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿ ಭೂಷಣ್​ ಅವರ ತೀರ್ಪನ್ನು ಒಪ್ಪದ ನ್ಯಾಯಮೂರ್ತಿ ಅಬ್ದುಲ್​ ನಜೀರ್​, ಸಹೋದ್ಯೋಗಿಗಳ ತೀರ್ಪನ್ನು ಒಪ್ಪುವುದಿಲ್ಲ. ಒಂದು ಧರ್ಮದ ಅಗತ್ಯ ಆಚರಣೆ ಯಾವುದು ಎಂದು ನಿರ್ಧರಿಸಲು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ.

2-1ರ ಬಹುಮತದೊಂದಿಗೆ ಈಗ ಸುಪ್ರೀಮ್ ಕೋರ್ಟ್ 1994ರ ತೀರ್ಪನ್ನು ಎತ್ತಿಹಿಡಿದಿದ್ದು, ಸುಪ್ರೀಮ್ ಕೋರ್ಟ್ ನಲ್ಲಿ ಬಾಕಿ ಉಳಿದಿರುವ ಅಯೋಧ್ಯಾ ಭೂಮಿ ವಿವಾದದ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದೆ ಎಂದು ಹೇಳಿದೆ.

The post ನಮಾಜ್​ ಯಾವುದೇ ಸ್ಥಳದಲ್ಲಿ ಬೇಕಾದರೂ ಮಾಡಬಹುದು: 1994ರ ತೀರ್ಪನ್ನೇ ಸುಪ್ರೀಂ ಕೋರ್ಟ್​ ಎತ್ತಿಹಿಡಿದಿದೆ. appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.