ಉತ್ತಮ ಸಮಾಜಕ್ಕಾಗಿ

ನಾವ್ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿರುವ ಪತ್ರಕರ್ತ “ಜಯಸೂರ್ಯ” ನಾದ ಕಥೆ.

0
ಬೆಳಗಾವಿ, ಜನವರಿ 17  ವೃತ್ತಿಯಲ್ಲಿ ಪತ್ರಕರ್ತ, ಆಕರ್ಷಕ ವ್ಯಕ್ತಿತ್ವ, ಯಾವಾಗಲೂ ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೇರೆಯುವ ಸ್ವಭಾವ… ಆ ವ್ಯಕ್ತಿ ಬೇರಾರು ಅಲ್ಲ ಸಮಯ ನ್ಯೂಸ್ ನ ಬೆಳಗಾವಿ ರಿಪೋರ್ಟರ್ ಸಂತೋಷ್ ಶ್ರೀರಾಮುಡು.
ಇದ್ದಕ್ಕಿದ್ದಂತೆ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ಇವರು “ಜಯಸೂರ್ಯ” ಎಂಬ ಚಿತ್ರವನ್ನು ಕಥೆ,ಚಿತ್ರಕಥೆ,ಸಾಹಿತ್ಯ,ಸಂಭಾಷಣೆಯೊಂಗೆ ನಿರ್ಮಿಸಿ, ನಿರ್ದೇಶಿಸುವ ಮೂಲಕ ನಾವ್ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಗ್ರಾಮೀಣ ಭಾಗದ ಸೊಗಡು, ಅಸ್ಪ್ರಶ್ಯತೆ, ಲವ ಸ್ಟೋರಿ ಜೊತೆಗೆ ದೇಶಪ್ರೇಮವನ್ನು ಸಾರುವ ಕಥೆ ಹೊಂದಿರುವ ಈ ಚಿತ್ರವನ್ನ ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳಿಸುವ ನಿಟ್ಟಿನಲ್ಲಿ  ತೀರಾ ನೈಜವಾಗಿ ಚಿತ್ರೀಸಿದ್ದಾರೆ.
ಬಿಡುಗಡೆಗೂ ಮುನ್ನವೇ “ಜಯಸೂರ್ಯ” ಚಿತ್ರ ಸೆನ್ಷೆಷನ್ ಕ್ರಿಯೆಟ್ ಮಾಡಿದೆ. ಚಿತ್ರದ ಹಾಡುಗಳಂತೂ ಪ್ರೇಕ್ಷಕರನ್ನ ಹುಚ್ಚೆಬ್ಬಿಸಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿವೆ. ಫೆಸಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿರುವ ಈ ಚಿತ್ರ ಅತಿ ಶೀಘ್ರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Leave A Reply

 Click this button or press Ctrl+G to toggle between Kannada and English

Your email address will not be published.