ಉತ್ತಮ ಸಮಾಜಕ್ಕಾಗಿ

ಪಂಚಾಯತ ಅಭಿವೃದ್ದಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ:ಆಗ್ರ

0

ಪಂಚಾಯತ ಅಭಿವೃದ್ದಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ:ಆಗ್ರ

ಬೆಳಗಾವಿ: ಗ್ರಾಮ ಪಂಚಾಯತಿಗಳಲ್ಲಿ ಲೆಕ್ಕಪರಿಶೋಧಕರು ಲೆಕ್ಕ ಪರಿಶೀಲನೆಯಲ್ಲಿ ನಮೂದಿಸಿರುವ ಆಕ್ಷೇಪಣೆಗಳು ಮತ್ತು ವಸೂಲಾತಿಯ ಶಿಫಾರಸ್ಸುಗಳ ಬಗ್ಗೆ ಅನುಪಾಲನಾ ವರದಿ ನೀಡದ ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನಪರ ಸಂಘಟನೆಗಳ ಮುಖಂಡರುಗಳು ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಿಗೆ ಆಗ್ರಹಿಸಿದ್ದಾರೆ.

ಕುರಿತು ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ ಜಾನಕಿ ಅವರ ಮೂಲಕ ರಾಮದುರ್ಗದ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪಂಚಾಯತ್ ರಾಜ್ ಸಚಿವರಿಗೆ ಮನವಿ ಸಲ್ಲಿಸಿದರು.

ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕಾರ ಲೆಕ್ಕಪರಿಶೋಧನೆಯಲ್ಲಿ ಲೆಕ್ಕಪರಿಶೋಧಕರು ನಮೂದಿಸುವ ಆಕ್ಷೇಪಣೆಗಳು ಮತ್ತು ದುರ್ಬಳಕೆಯಾಗಿರುವ ಹಣದ ವಸೂಲಾತಿಯ ಬಗ್ಗೆ ಶಿಫಾರಸ್ಸು ಮಾಡುತ್ತಾರೆ. ನಿಯಮದ ಪ್ರಕಾರ ಆಯಾ ಗ್ರಾಮ ಪಂಚಾಯತಿಗಳ ಅಭಿವೃದ್ದಿ ಅಧಿಕಾರಿಗಳು ಲೆಕ್ಕಪರಿಶೋಧಕರು ನಮೂದಿಸಿರುವ ಆಕ್ಷೇಪಣೆಗಳು ಮತ್ತು ವಸೂಲಾತಿಯ ಶಿಫಾರಸ್ಸುಗಳ ಬಗ್ಗೆ ಕೈ ಗೊಂಡಿರುವ ಕ್ರಮಗಳ ಬಗ್ಗೆ ಸರಕಾರಕ್ಕೆ ವರದಿ ನೀಡಬೇಕು. ಆದರೆ, ಬಹುತೇಕ ಅಧಿಕಾರಿಗಳು ಅನುಪಾಲನಾ ವರದಿ ನೀಡದರಿಂದ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಸರಕಾರದ ಅನುದಾನದ ದುರ್ಬಳಕೆಯಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಅನುಪಾಲನಾ ವರದಿ ನೀಡದಿರುವದರಿಂದ ಪಂಚಾಯತಿಗಳಿಗೆ ವಿವಿಧ ಮೂಲಗಳಿಂದ ಸಾರ್ವಜನಿಕರ ಮೂಲ ಸೌಕರ್ಯ ಮತ್ತು ಅಭಿವೃದ್ದಿ ಕಾಮಗಾರಿಗಳಿಗೆ ಬಂದಿರುವ ಹಣ ದುರುಪಯೋಗವಾಗುತ್ತಿದೆ. ಗ್ರಾಮೀಣ ಪ್ರದೇಶಗಳು ಈ ಭ್ರಷ್ಟಾಚಾರದಿಂದಾಗಿ ಅಭಿವೃದ್ದಿ ವಂಚಿತವಾಗುತ್ತಿರುವದರಿಂದ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಂದ ತಕ್ಷಣ ಅನುಪಾಲನಾ ವರದಿ ಪಡೆಯಬೇಕು. ಆಕ್ಷೇಪಣೆ ಮತ್ತು ವಸೂಲಾತಿಯ ಮೊತ್ತವನ್ನು ಪಂಚಾಯತ್ ರಾಜ್ಯ ನಿಯಮದ ಪ್ರಕಾರ ವಾರ್ಷಿಕ 15 ಪ್ರತಿಶತ ಬಡ್ಡಿ ದರದಲ್ಲಿ ವಸೂಲಿ ಮಾಡಿ, ಆ ಹಣವನ್ನು ಗ್ರಾಮಗಳ ಅಭಿವೃದ್ದಿಗೆ ವಿನಿಯೋಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸುಮಾರು 500 ಗ್ರಾಮ ಪಂಚಾಯತಿಗಳು ಒಳಗೊಂಡಂತೆ ಆಕ್ಷೇಪಣೆಯ ಸುಮಾರು 221 ಕೋಟಿ ಮತ್ತು ವಸೂಲಾತಿ ಶಿಫಾರಸ್ಸಿನ ಸುಮಾರು 19 ಕೋಟಿ ರೂ. ಹಣ ಸರಕಾರಕ್ಕೆ ವಾಪಸ್ ಸಂದಾಯವಾಗಬೇಕಿದೆ. ಇದು ಕೇವಲ ಬೆಳಗಾವಿ ಜಿಲ್ಲೆಯ ಸಮಸ್ಯೆಯಲ್ಲ. ಇದು ಇಡಿ ರಾಜ್ಯದ ಸಮಸ್ಯೆಯಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ವಿನಿಯೋಗವಾಗಬೇಕಿದ್ದ ಕೋಟಿ ಕೋಟಿ ರೂ. ಅನುದಾನವು ಅಧಿಕಾರಿಗಳ ಮತ್ತು ಗುತ್ತಿಗೆದಾರರ ಪಾಲಾಗಿದೆ.

ಈ ಬಗ್ಗೆ ತಕ್ಷಣ ಕ್ರಮ ಜರುಗಿಸುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದಾಖಲೆಗಳ ಸಹಿತ ಮನವಿ ಸಲ್ಲಿಸಿದರೂ ಕ್ರಮ ಜರುಗಿಸದರಿಂದ ತಮಗೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಈ ಕುರಿತು ತಕ್ಷಣ ಕ್ರಮ ಜರುಗಿಸಿ, ಹಣ ವಸೂಲಾತಿಗೆ ಕ್ರಮ ಕೈಗೊಳ್ಳದಿದ್ದರೇ, ವಿಧಾನ ಸೌಧದ ಮುಂದೆ ಧರಣಿ ಸತ್ಯಾಗ್ರಹ ಮತ್ತು ಕಾನೂನು ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಭ್ರಷ್ಟಾಚಾರ ನಿರ್ಮೂಲನಾ ಹೋರಾಟ ಸಮಿತಿಯ ಮುಖಂಡ ಸುಜಿತ ಮುಳಗುಂದ, ಕೂಲಿ ಕಾರ್ಮಿಕರ ಹೋರಾಟ ಸಮಿತಿಯ ಮುಖಂಡ ದಿಲೀಪ ಕಾಮತ, ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ, ಆನಂದ ಪೂಜಾರ ಮುಂತಾದವರು ಉಪಸ್ಥಿತರಿದ್ದರು.

The post ಪಂಚಾಯತ ಅಭಿವೃದ್ದಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ:ಆಗ್ರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.