ಉತ್ತಮ ಸಮಾಜಕ್ಕಾಗಿ

ಪಂ. ಬಿ.ವಿ. ಕಡ್ಲಾಸ್ಕರಬುವಾ ಪುಣ್ಯತಿಥಿ ಅಂಗವಾಗಿ ಸ್ಮøತಿ ಸಂಗೀತೋತ್ಸವ

0

ಬೆಳಗಾವಿ ನಗರದ ಬಿ. ವಿ. ಕಡ್ಲಾಸ್ಕರಬುವಾ ಸ್ಮøತಿ ಸಮಾರೋಹ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಪಂ| ಬಿ. ವಿ. ಕಡ್ಲಾಸ್ಕರಬುವಾ ಇವರ 15 ನೇ ಪುಣ್ಯತಿಥಿ ಅಂಗವಾಗಿ “ಸ್ಮøತಿ ಸಂಗೀತೋತ್ಸವ” ಕಾರ್ಯಕ್ರಮವನ್ನು ಇದೇ ದಿ. 21, 22, 23 ಮೂರು ದಿನಗಳ ಕಾಲ ಕೊನವಾಳಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದಾರೆ.
ಸ್ಮøತಿ ಸಂಗೀತೊತ್ಸವದ ಮೊದಲ ದಿನವಾದ ಶುಕ್ರವಾರ ದಿ. 20 ರಂದು ಸಾಯಂಕಾಲ 4-30 ಕ್ಕೆ ಗೋವಿಂದಾಚಾರ್ಯ ಕಟ್ಟಿ ಹಾಗೂ ತಂಡದವರಿಂದ ಮಂತ್ರಘೋಷ. ಅ.ಭಾ.ಗಾಂ. ಮಹಾವಿದ್ಯಾಲಯ ಮಂಡಳದ ಮಾಜಿ ಅಧ್ಯಕ್ಷರಾದ ಮುಂಬಯಿಯ ಪಿ.ಎಸ್. ಕುಲಕರ್ಣಿಯವರು ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಬೆಳಗಾವಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ವಿದ್ಯಾವತಿ ಭಜಂತ್ರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇಚಲಕರಂಜಿಯ ಶ್ರೀಮತಿ ಮಧುವಂತಿ ಭಿಡೆ, ಬೆಳಗಾವಿಯ ಶ್ರೀಮತಿ ಪದ್ಮಜಾ ಬಾಪಟ ಹಾಗೂ ದಿವಾಕರ ಕುಲಕರ್ಣಿ ಇವರಿಂದ ಭಕ್ತಿ ಸಂಗೀತವಿದೆ.
ಶ್ರೀಮತಿ ಮಂಜುಶ್ರೀ ಖೋತ ಹಾಗೂ ಶ್ರೀಮತಿ ಶುಭಾ ಕುಲಕರ್ಣಿಯವರಿಂದ ಸುಗಮ ಸಂಗೀತವಿದ್ದು ಶ್ರೀಮತಿ ಅರ್ಚನಾ ತಾಮ್ಹಣಕರ, ಶ್ರೀಮತಿ ಮೀರಾ ಅಜಗಾಂವಕರ ಹಾಗೂ ಶ್ರಿ ವಿಜಯ ಬಾಂದಿವಾಡೇಕರ ರಿಂದ ನಾಟ್ಯ ಸಂಗೀತವಿದೆ. ಅಲ್ಲದೇ ಬೆಂಗಳೂರಿನ ರಾಘವೇಂದ್ರ ಗುಡಿ, ಸಾತಾರಾದ ಶ್ರೀಮತಿ ಉಜ್ವಲಾ ಗೋಡಬೊಲೆ ಹಾಗೂ ಬೆಳಗಾವಿಯ ಗುರುರಾಜ ಕುಲಕರ್ಣಿ ಇವರಿಂದ ಶಾಸ್ತ್ರೀಯ ಗಾಯನಗಳಿವೆ.
ಎರಡನೇ ದಿನವಾದ ದಿ. 21 ಶನಿವಾರದಂದು ಸಾಯಂಕಾಲ 4-30 ಕ್ಕೆ ‘ಗಾಯನ ಕಾರ್ಯಕ್ರಮ’ ವಿದ್ದು. ಬೆಳಗಾವಿಯ ಭಕ್ತಿ ಭಜನಿ ಮಂಡಳದವರಿಂದ ವೃಂದ ಭಜನೆ. ಶ್ರೀಮತಿ ರೋಹಿಣಿ ಗಣಪುಲೆಯವರಿಂದ ಸುಗಮ ಸಂಗೀತ, ಗೋಕಾಕದ ಶ್ರೀಮತಿ ವಿದ್ಯಾ ಮಗದುಮರಿಂದ ಭಾವಗೀತೆ ಹಾಗೂ ಶ್ರೀಮತಿ ಲಲಿತಾ ಕುಲಕರ್ಣಿ, ಶ್ರೀಮತಿ ಉಷಾ ರಾನಡೆ, ಶ್ರೀಮತಿ ನಿರ್ಮಲಾ ಪ್ರಕಾಶ, ಶ್ರೀಮತಿ ಅನಿತಾ ಪಾಗಾದ ಹಾಗೂ ಭೂಪಾಳದ ಶ್ರೀಮತಿ ಜಯಶ್ರೀ ಸವ್ವಾಗುಂಜಿ ಇವರಿಂದ ಲಘು ಶಾಸ್ತ್ರೀಯ ಸಂಗೀತವಿದೆ.
ದೆಹಲಿಯ ನರೇಶ ಮಲ್ಹೋತ್ರಾ, ಚೇತನಕುಮಾರ ನಾಯಿಕ, ಡಾ|ಗೌಡಪ್ಪ ಪಡಗುರಿ, ನಾರಾಯಣ ಖಾಂಡೇಕರ ಹಾಗೂ ಧಾರವಾಡದ ರಘುನಾಥ ನಾಕೋಡರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಿ ಗೌರವಿಸಲಾಗುವುದು. ದೆಹಲಿಯ ಪಂ. ನರೇಶ ಮಲ್ಹೋತ್ರಾ ಅವರಿಂದ ಗಾಯನ ಕಾರ್ಯಕ್ರಮವಿದ್ದು. ಪಂ. ರಘುನಾಥ ನಾಕೋಡ ಹಾಗೂ ರವಿಕಿರಣ ನಾಕೋಡ ಇವರಿಂದ ತಬಲಾವಾದನವಿದೆ.
ಮೂರನೇ ದಿನವಾದ 22 ರವಿವಾರದಂದು ಬೆಳಿಗ್ಗೆ 9-30 ಕ್ಕೆ ಮುಂಬಯಿಯ ಶ್ರೀಮತಿ ಗೀತಾ ಗುಲವಡಿ, ಪುಣೆಯ ಸೋಮನಾಥ ಜಾಯದೆ, ಸಾಂಗಲಿಯ ಶ್ರೀಮತಿ ಸ್ವಾತಿ ಕಾಳೆ ಹಾಗೂ ಮುಂಬಯಿಯ ರಾಜೇಶ ಬಾಳೇಕುಂದ್ರಿಯವರಿಂದ ಲಘುಸಂಗೀತ ಕಾರ್ಯಕ್ರಮವಿದೆ.
ಸಾಯಂಕಾಲ 4-30 ಕ್ಕೆ ಮೋಹನ ಬಾಗೇವಾಡಿಯವರಿಂದ ಕ್ಲೇರಿಯೋನೆಟ್ ವಾದನ, ಹರಿಕಾಕಾ ಭಜನಾ ಮಂಡಳದವರಿಂದ ವೃಂದ ಭಜನೆ, ಭಾವಾಂಜಲಿ ಭಜನಾ ಮಂಡಳದವರಿಂದ ಸುಗಮ ಸಂಗೀತ. ಶ್ರೀಮತಿ ಶುಭಾಂಗಿ ಕಾರೇಕರ, ನಮ್ರತಾ ಕುಲಕರ್ಣಿಯವರಿಂದ ಭಕ್ರಿ ಸಂಗೀತ ಅಲ್ಲದೇ ಮುಂಬಯಿಯ ಮಹೇಶ ಕುಲಕರ್ಣಿ, ಸ್ನೇಹಾ ರಾಜುರೀಕರ ಹಾಗೂ ಕೊಲ್ಹಾಪುರದ ಜಯಶ್ರೀ ಪಾಟಣಿಕರರಿಂದ ಶಾಸ್ತ್ರಿಯ ಗಾಯನವಿದೆ.
ಬಂಡೋಪಂಥ ಕುಲಕರ್ಣಿ, ನಾರಾಯಣ ಗಣಾಚಾರಿ, ಯಶವಂತ ಬೋಂದ್ರೆ, ಅಂಗದ ದೇಸಾಯಿ, ವಿಶಾಲ ಮೋಡಕ, ಸತೀಶ ಗಚ್ಚಿ, ಚಿತೇಂದ್ರ ಸಾಬಣ್ಣವರ, ಮುಂಬಯಿಯ ವಿನಾಯಕ ನಾಯಿಕ ತಬಲಾ ಸಾಥ ನೀಡಲಿದ್ದಾರೆ. ಡಾ. ಸುಧಾಂಶು ಕುಲಕರ್ಣಿ, ಮುಕುಂದ ಗೋರೆ, ವಾಮನ ವಾಗೂಕರ, ಯಾದವೇಂದ್ರ ಪೂಜಾರ, ದೀಪಕ ಮರಾಠೆ ಹಾರ್ಮೋನಿಯಂ ಸಾಥ ನೀಡಲಿದ್ದಾರೆ.
ಮೂರು ದಿನಗಳ ನಡೆಯು ಈ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ ಉತ್ಸವದ ಸದುಪಯೋಗ ಪಡೆಯಬೇಕೆಂದು ಬಿ. ವಿ. ಕಡ್ಲಾಸ್ಕರಬುವಾ ಸ್ಮøತಿಸಮಾರೋಹ ಸಮಿತಿ ಅಧ್ಯಕ್ಷರಾದ ರಾಜಪ್ರಭು ಧೋತ್ರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.