ಉತ್ತಮ ಸಮಾಜಕ್ಕಾಗಿ

ಪವಾಡ ಬಯಲಿಗೆ ಸಿದ್ಧ

0

ಹಾಸನಾಂಬೆಯದು ಪವಾಡ ಹೌದೋ ಅಲ್ಲವೋ
– ಜಿಲ್ಲಾಡಳಿತದ ಮುಂದೆ ಪ್ರಶ್ನೆ ಇಡಲು ಬಿಜಿವಿಎಸ್ ಸಿದ್ಧತೆ

ಹಾಸನ: ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯ ಪೊನ್ನಂಬಲ ಮೇಡು ಬೆಟ್ಟದಲ್ಲಿ ಕಾಣಿಸುವ ಮಕರಜ್ಯೋತಿಯ ಹಿನ್ನೆಲೆ ಭೇದಿಸಿದ ಕೇರಳ ವಿಜ್ಞಾನ ಸಂಘಟನೆಯ ಕಾರ್ಯ ವಿಧಾನ ಹೊಂದಿರುವ ಇಲ್ಲಿನ ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್)ಯು ಹಾಸನ ನಗರದ ಅಧಿದೇವತೆ ಹಾಸನಾಂಬ ದೇವಿಯದು ಪವಾಡ ಹೌದೋ ಅಲ್ಲವೋ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ.

ಹಾಸನಾಂಬೆ ಭಕ್ತರ ನಂಬಿಕೆ:
ಪ್ರತಿ ವರ್ಷ ಗರ್ಭಗುಡಿ ಬಾಗಿಲು ತೆರೆದು ಶಾಸ್ತ್ರೋಕ್ತವಾಗಿ ಮುಚ್ಚುವಾಗ ದೇವಿಯ ಸನ್ನಿಧಾನದಲ್ಲಿ ಹಚ್ಚಿದ ಹಣತೆ ಆರುವುದಿಲ್ಲ. ಮುಡಿಸಿದ ಹೂ ಬಾಡುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೇವಿಯ ಮುಂದೆ ಇಟ್ಟ ಎಡೆ-ನೈವೇದ್ಯ ಹಳಸದೇ ಹಾಗೇ ತಾಜಾವಾಗಿರುತ್ತದೆ. ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಹಾಗೇ ಇರುತ್ತದೆ. ಇದಕ್ಕೆ ಹಾಸನಾಂಬೆ ಪವಾಡಗಳೇ ಕಾರಣ ಎನ್ನುವುದು ಹಾಸನಾಂಬೆಯ ಭಕ್ತರ ನಂಬಿಕೆ.
ಪವಾಡಗಳು ಪಡೆಯಲು ಸಾಧ್ಯವಿಲ್ಲ ಎನ್ನುವುದು ವಿಜ್ಞಾನದ ಸಾಮಾನ್ಯ ಜ್ಞಾನ ಇರುವವರೆಲ್ಲರಿಗೂ ಗೊತ್ತು. ಹಾಗಾಗಿ ವೈಜ್ಞಾನಿಕವಾಗಿ ಸಾಧ್ಯವಿಲ್ಲ ಎನ್ನುವುದು ಬಿಜಿವಿಎಸ್ ನ ವಾದ.
ಇದಕ್ಕೆ ಪೂರಕವಾಗಿ ಎಚ್.ಸಿ.ಶ್ರೀಕಂಠಯ್ಯ ಕಂದಾಯ ಸಚಿವರಾಗಿದ್ದಾಗ ನಡೆದ ಘಟನೆಯನ್ನು ನೆನಪಿಸುತ್ತಾರೆ.( ಫೋಟೋ ನೋಡಿ).

ಆದರೆ ಹಾಸನಾಂಬೆ ಭಕ್ತರು ಸಾಧ್ಯ ಎಂದೇ ನಂಬಿದ್ದಾರೆ. ಈ ಪವಾಡಗಳ ನಂಬಿಯೇ ಹಾಸನಾಂಬೆ ದರ್ಶನಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ.

ಮುಂದಿನ ತಿಂಗಳು 1ರಿಂದ 8ರವರೆಗೆ ಹಾಸನಾಂಬೆಯ ದರ್ಶನವಿರುತ್ತದೆ. ಇದಕ್ಕೆ ಸಿದ್ಧತೆ ಆರಂಭವಾಗಿದೆ. ಇದರ ನಡುವೆ ಪವಾಡಗಳ ಸತ್ಯಾಸತ್ಯತೆ ತಿಳಿಯುವ ಚರ್ಚೆ ಆರಂಭವಾಗಿದೆ.

ಸಾವಿರಾರು ವರ್ಷಗಳ ಇತಿಹಾಸದಲ್ಲಿ ಹಾಸನಾಂಬೆಯನ್ನು ನಂಬಿರುವವರು ದೇವಿಯ ಬಗ್ಗೆ ಅವರದೇ ಆದ ನಂಬಿಕೆ ಇಟ್ಟುಕೊಂಡಿದ್ದಾರೆ.
ಯಾರು ಏನೇ ಅಂದರೂ, ದೇವಿಯ ನಂಬಿಕೆ ಇದೇ ಎಂದು ಪ್ರತಿಪಾದಿಸುವವರೇ ಹೆಚ್ಚು. ಸನ್ನಿವೇಶ ಹೀಗಿರುವಾಗ ಪವಾಡವನ್ನು ಬಯಲುಗೊಳಿಸಿ ಎಂಬ ಹೊಸ ವಾದಕ್ಕೆ ಮನ್ನಣೆ ಸಿಗುತ್ತೋ? ಅಥವಾ ಕಡೆಗಣನೆಗೆ ಒಳಗಾಗುತ್ತೋ? ಅನ್ನೋದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.

10 ರಂದು ದುಂಡು ಮೇಜಿನ ಸಭೆ:
ಹಾಸನಾಂಬೆ ದೇವಾಲಯದ ಪವಾಡಗಳ ಕುರಿತ ಸತ್ಯಾಸತ್ಯತೆ ಬಹಿರಂಗಗೊಳಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಸಂಬಂಧ ಚರ್ಚೆ ಮತ್ತು ಅಭಿಪ್ರಾಯ ಸಂಗ್ರಹಿಸಲು ಅ.10 ರಂದು ನಗರದ ಸಂಸ್ಕೃತ ಭವನದ ಬಳಿ ಇರುವ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ಕಚೇರಿಯಲ್ಲಿ ದುಂಡು ಮೇಜಿನ ಸಭೆ ಕರೆಯಲಾಗಿದೆ.
ಸತ್ಯಾಸತ್ಯತೆ ಬಯಲಾಗಬೇಕು
ದೇವರು ಮತ್ತು ದೇವರ ಮೇಲಿನ ನಂಬಿಕೆ, ಭಾವನೆಗಳನ್ನು ಗೌರವಿಸುತ್ತಲೇ ಹಾಸನಾಂಬೆಯ ಮೇಲೆ ಹೊರಿಸಲಾಗಿರುವ ಪವಾಡ ಆರೋಪಗಳನ್ನು ಸಾರ್ವಜನಿಕವಾಗಿ ತಿಳಿಯ ಪಡಿಸಬೇಕು ಎಂಬುದು ನಮ್ಮ ಆಗ್ರಹ.
ಹಾಸನಾಂಬೆ ಕುರಿತಾಗಿ ಇರುವ ಪವಾಡಗಳ ಸತ್ಯಾಸತ್ಯತೆ ಜನರ ಮುಂದೆ ಅದನ್ನು ಬಹಿರಂಗಪಡಿಸಬೇಕು ಎಂಬುದಷ್ಟೇ ನಮ್ಮ ಮನವಿ. ವೈಜ್ಞಾನಿಕ ಚಿಂತನೆಯನ್ನು ಪ್ರಚಾರ ಮಾಡುವ ಧನಾತ್ಮಕ ಕಾಳಜಿಯುಳ್ಳವರು ಸಭೆಗೆ ಆಗಮಿಸಿ ಸಲಹೆ-ಸೂಚನೆ ನೀಡಬೇಕು.
* ಎಸ್.ಟಿ.ಗುರುರಾಜ್, ಬಿಜಿವಿಎಸ್ ಜಿಲ್ಲಾಧ್ಯಕ್ಷ

The post ಪವಾಡ ಬಯಲಿಗೆ ಸಿದ್ಧ appeared first on Prajaa News.

Source link

ಪವಾಡ ಬಯಲಿಗೆ ಸಿದ್ಧ

Leave A Reply

 Click this button or press Ctrl+G to toggle between Kannada and English

Your email address will not be published.