ಉತ್ತಮ ಸಮಾಜಕ್ಕಾಗಿ

ಪಶು ಪಾಲನಾ ಇಲಾಖೆ ವತಿಯಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

0

ಬೆಳಗಾವಿ, ಜನವರಿ 18 ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2016-17 ನೇ ಸಾಲಿಗೆ ಆರ್ಥಿಕ ಬಲವಿಲ್ಲದ ವಿಧವೆಯರು ಮತ್ತು ನಿರಾಶ್ರಿತ ಹಾಗೂ ಕೃಷಿ ಕಾರ್ಮಿಕ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಶೇಕಡಾ 75 ರಷ್ಟು ಸಹಾಯಧನದೊಂದಿಗೆ, 5 ರಿಂದ 8 ತಿಂಗಳ ವಯಸ್ಸಿನ 3 ಕುರಿ ಅಥವ 3 ಮೇಕೆಗಳ 1 ಘಟಕದ ಒಟ್ಟು ವೆಚ್ಚ ರೂ. 10000-00 ಗಳಲ್ಲಿ, ಶೇ 75 ರಷ್ಟು ಸಹಾಯಧನ, ಉಳಿದ ಶೇ 25 ಬ್ಯಾಂಕ/ಸ್ವ-ಸಹಾಯ ಸಂಘದಿಂದ ಸಾಲ ಅಥವಾ ಫಲಾನುಭವಿಯ ಸ್ವಂತ ವಂತಿಕೆಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಆರ್ಥಿಕ ಬಲವಿಲ್ಲದ ವಿಧವೆಯರು ಮತ್ತು ನಿರಾಶ್ರಿತ ಹಾಗೂ ಕೃಷಿ ಕಾರ್ಮಿಕ ಮಹಿಳೆಯರು ಸಂಬಂಧಪಟ್ಟ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರುಗಳನ್ನು ಸಂಪರ್ಕಿಸಿ, ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅವಶ್ಯಕ ದಾಖಲಾತಿಗಳೊಂದಿಗೆ ದಿನಾಂಕ 28-01-2017ರ ಸಂಜೆ 5.00 ಗಂಟೆ ಒಳಗಾಗಿ ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕೆಂದು ಬೆಳಗಾವಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.