ಉತ್ತಮ ಸಮಾಜಕ್ಕಾಗಿ

ಪುಟ್ಟ ಮಕ್ಕಳು ಸೈಕಲ್ ಜಾತಾದಲ್ಲಿ ಭಾಗವಹಿಸಿ ಆಕರ್ಷಣೆ

0

ಪುಟ್ಟ ಮಕ್ಕಳು ಸೈಕಲ್ ಜಾತಾದಲ್ಲಿ ಭಾಗವಹಿಸಿ ಆಕರ್ಷಣೆ

ಬೆಳಗಾವಿ: 64ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಳಗಾವಿ ಅರಣ್ಯ ವಿಭಾಗ, MLIRC ಯೋಧರ ಸೈಕಲ್ ತಂಡ, ರೈಡರ್ಸ್ ಕ್ಲಬ್, ವೇಣುಗ್ರಾಮ ಸೈಕ್ಲಿಸ್ಟ್ಸ ಕ್ಲಬ್ ಹಾಗೂ ಪೆಡ್ಲರ್ಸ್ ಕ್ಲಬ್ ಬೆಳಗಾವಿ ಅವರ ಸಹಯೋಗದಲ್ಲಿ ಬೃಹತ್ ಸೈಕಲ್ ಜಾತಾ

ಇಂದು ನಗರದಲ್ಲಿ ನಡೆಯಿತು. ಅರಣ್ಯ ಇಲಾಖೆ ಆವರಣದಲ್ಲಿ MLIRC ಬ್ರಿಗೇಡಿಯರ್ ಗೋವಿಂದ ಕಲವಾಡ ಹಾಗೂ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
News Belgaum-ಪುಟ್ಟ ಮಕ್ಕಳು ಸೈಕಲ್ ಜಾತಾದಲ್ಲಿ ಭಾಗವಹಿಸಿ ಆಕರ್ಷಣೆ 1ಅರಣ್ಯ ಭವನದಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ ವಿಟಿಯು ನಗರ ಉಪವನದವರೆಗೆ ಸೈಕಲ್ ಜಾತಾ ನಡೆಯಿತು. ವನ್ಯಜೀವಿಗಳ ರಕ್ಷಣೆ ಮತ್ತು ಸಸ್ಯಸಂಪತ್ತು ಉಳಿಸಿ ಬೆಳೆಸುವ ಸಾರ್ವಜನಿಕ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸಲಾಯಿತು.
ಬ್ರಿಗೇಡಿಯರ್ ಗೋವಿಂದ ಕಲವಾಡ ಹಾಗೂ ಡಿಸಿಎಫ್ ಎಂ. ವಿ. ಅಮರನಾಥ ಸೈಕಲ್ ತುಳಿದು ಗಮನ ಸೆಳೆದರು. ಎಸಿಎಫ್ ಎಸ್.‌ ಎಂ. ಸಂಗೊಳ್ಳಿ, ಶಿವಾನಂದ ನಾಯಿಕವಾಡಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ, ಆರ್ ಎಫ್ ಓ ನಾಗರಾಜ ಬಾಳೆಹೊಸೂರ, ಶ್ರೀನಾಥ ಎಂ. ಕಡೋಲಕರ, ಪ್ರಭಾಕರ ಸಂಗಮೇಶ, ಬಸವರಾಜ ವಾಳದ, ಡಿಆರ ಎಫ್ ಓ ರಮೇಶ, ಐಜಾಜ ಇನಾಮದಾರ ಹಾಗೂ ಇತರರು ಭಾಗವಹಿಸಿದರು.
ಪುಟ್ಟ ಮಕ್ಕಳು ಸೈಕಲ್ ಜಾತಾದಲ್ಲಿ ಭಾಗವಹಿಸಿ ಆಕರ್ಷಣೆ ತಂದರು.

The post ಪುಟ್ಟ ಮಕ್ಕಳು ಸೈಕಲ್ ಜಾತಾದಲ್ಲಿ ಭಾಗವಹಿಸಿ ಆಕರ್ಷಣೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.