ಉತ್ತಮ ಸಮಾಜಕ್ಕಾಗಿ

ಪೆಟ್ರೋಲ್, ಡೀಸೆಲ್‍ ದರದಲ್ಲಿ 2 ರೂ ಕಡಿತ ಗೊಳಿಸಿದ ಕುಮಾರಣ್ಣ

0

ಪೆಟ್ರೋಲ್, ಡೀಸೆಲ್‍ ದರದಲ್ಲಿ 2 ರೂ ಕಡಿತ ಗೊಳಿಸಿದ ಕುಮಾರಣ್ಣ 

ಸದಾ  ಪೆಟ್ರೋಲ್ ದರ ಹೆಚ್ಚಳ ಹೆಚ್ಚಳ ಅನ್ನೋ ಸುದ್ದಿ ಕೇಳಿ , ಓದಿ ಬೇಸರ ಆಗೊಗಿದ್ದ ಜನ ಈ ಸುದ್ದಿ ಕೇಳಿ ಸ್ವಲ್ಪ ನಿಟ್ಟುಸಿರು ಬಿಡಬಹದು.

Petrol and diesel prices cuts Rs 2 a liter

ರಾಜಕೀಯ ಸುದ್ದಿ : ರಾಷ್ಟ್ರದಲ್ಲಿ ಪದೇ ಪದೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ದರ ಏರಿಕೆಯಾಗುತ್ತಲೇ ಇದೆ . ಸದ್ಯ ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು  ಸಾರ್ವಜನಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ದರ ಕಡಿತ ನಿರ್ಣಯಕ್ಕೆ ಬಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಮೇಲಿನ ದರ ಕಡಿತಗೊಳಿಸುತ್ತಿದೆ ಎಂಬುದಾಗಿ ಕಲಬುರಗಿಯಲ್ಲಿ ತಿಳಿಸಿದ್ದಾರೆ.

ರಾಜಸ್ಥಾನ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರಗಳು ಕೂಡ ದರ ಕಡಿತಗೊಳಿಸಿದ್ದು ಕರ್ನಾಟಕ ರಾಜ್ಯದಲ್ಲೂ ಪೆಟ್ರೋಲ್ ಡೀಸೆಲ್ ದರ ಇಳಿಕೆ ಮಾಡಿರುವುದು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ” ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಬಿಕ್ಕಟ್ಟು ಮರೆಮಾಚಲು ಈ ತಂತ್ರ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಡಾಲರ್ಸ್ ಕಾಲೋನಿಯ ಬಿ ಎಸ್ ವೈ ನಿವಾಸದ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು , ” ನಿಜಕ್ಕೂ ಕಡಿಮೆ ಮಾಡುವ ಉದ್ದೇಶವಿದ್ದರೆ 5 ಅಥವಾ 10 ರುಪಾಯಿ ಕಡಿಮೆ ಮಾಡಬಹುದಾಗಿತ್ತು, ಇದೆಲ್ಲಾ ಅವರ ಕಿತ್ತಾಟ , ಸಮ್ಮಿಶ್ರ ಸರ್ಕಾರದ ಒಳಜಗಳವನ್ನು ಮರೆಮಾಚುವ ಉದ್ದೇಶ ಎಂದು ವ್ಯಂಗ್ಯ ಮಾಡಿದ್ದಾರೆ.////

WebTitle : ಪೆಟ್ರೋಲ್, ಡೀಸೆಲ್‍ ದರದಲ್ಲಿ 2 ರೂ ಕಡಿತ ಗೊಳಿಸಿದ ಕುಮಾರಣ್ಣ – Petrol and diesel prices cuts Rs 2 a liter

ಕನ್ನಡ ನ್ಯೂಸ್ >>> ಕ್ಲಿಕ್ಕಿಸಿ : Kannada Politics News | Karnataka Politics News

https://platform.twitter.com/widgets.js

Kannada Politics News

The post ಪೆಟ್ರೋಲ್, ಡೀಸೆಲ್‍ ದರದಲ್ಲಿ 2 ರೂ ಕಡಿತ ಗೊಳಿಸಿದ ಕುಮಾರಣ್ಣ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.