ಉತ್ತಮ ಸಮಾಜಕ್ಕಾಗಿ

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.In the publication.

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.In the publication.

0

ಏರಮೆನ್ ಹುದ್ದೆಗಳಿಗೆ ನೇಮಕಾತಿ ರ್ಯಾಲಿ
ಬೆಳಗಾವಿ: (news belgaum)ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 18 ಹಾಗೂ 19 ರಂದು ರ್ಯಾಲಿಯಲ್ಲಿ ಗ್ರೂಪ್ “ಙ” ಟ್ರೇಡಗಳ (ಮೆಡಿಕಲ್ ಅಸಿಸ್ಟಂಟ್ ) ಏರಮೆನ್ ಹುದ್ದೆಗಳಿಗೆ (ಅವಿವಾಹಿತ ಪುರುಷರಿಗಾಗಿ) ನೇಮಕಾತಿ ರ್ಯಾಲಿ ನಡೆಯಲಿದೆ.
ಅರ್ಜಿ ಸಲ್ಲಿಸುವವರು ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಶೇ.50 ರಷ್ಟು ಸರಾಸರಿ ಅಂಕ ಹಾಗೂ ಇಂಗ್ಲೀಷನಲ್ಲಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. 13-01-1998 ರಿಂದ 02-01-2002 ರೊಳಗೆ ಜನಿಸಿದವರಾಗಿರಬೇಕು. ಕನಿಷ್ಟ ಎತ್ತರ 152.5 ಸೆಂ.ಮೀ. ಹೊಂದಿರಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಮಾಲೋಚಕರಾದ ಜ್ಞಾನೇಶ್ವರ ಮಾನೆ (9743166178) ಅವರನ್ನು ಸಂಪರ್ಕಿಸಬೇಕೆಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಯುಸಿ ಪರೀಕ್ಷೆಯ ಮಾಹಿತಿ
ಬೆಳಗಾವಿ:  ಮಾ.13 ರಂದು ದ್ವಿತೀಯ ಪಿಯುಸಿ ಭೂಗೋಳಶಾಸ್ತ್ರ ಹಾಗೂ ಹಿಂದೂಸ್ತಾನಿ ಸಂಗೀತ ವಿಷಯದ ಪರೀಕ್ಷೆಗಳು ಜರುಗಿದವು.
ಜಿಲ್ಲೆಯ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಭೂಗೋಳಶಾಸ್ತ್ರ ಪರೀಕ್ಷೆಗೆ 1683 ವಿದ್ಯಾರ್ಥಿಗಳು ಹಾಜರಾಗಿದ್ದರು ಹಾಗೂ 66 ವಿದ್ಯಾರ್ಥಿಗಳು ಗೈರಾಗಿದ್ದರು.
ಹಿಂದೂಸ್ತಾನಿ ಸಂಗೀತ ಪರೀಕ್ಷೆಗೆ ಎಲ್ಲ 21 ವಿದ್ಯಾರ್ಥಿಗಳು ಹಾಜರಾಗಿದ್ದರು. ಯಾರು ಗೈರಾಗಿಲ್ಲ.
ಯಾವುದೇ ತರಹದ ಡಿಬಾರ್ ಆಗಿರುವುದಿಲ್ಲ ಎಂದು ಪದವಿಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ
ಬೆಳಗಾವಿ:  ಪರಿಶಿಷ್ಟ ವರ್ಗದವರ ಅಭಿವೃದ್ಧಿ ಕಾರ್ಯಕ್ರಮಗಳ ಪೈಕಿ ತುಂತುರು ನೀರಾವರಿ, ಹನಿ ನೀರಾವರಿ, ಕುಕ್ಕುಟ ಸಾಕಾಣಿಕೆ (ಕೋಳಿ ಸಾಕಾಣಿಕೆ) ಮತ್ತು ಪಾಲಿ ಹೌಸ ನಿರ್ಮಾಣ ಯೋಜನೆಗಳಿಗೆ ಅರ್ಹ ಪರಿಶಿಷ್ಟ ವರ್ಗದ ಫಲಾನುಭವಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆಸಕ್ತರು ನೀರಾವರಿ ಸೌಲಭ್ಯ ಹಾಗೂ ಸ್ವಂತ ಕೃಷಿ ಜಮೀನು ಹೊಂದಿರಬೇಕು. ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ
ಬೆಳಗಾವಿ: ಬೆಳಗಾವಿಯ ಎರಡನೇ ಅಡಿಷನಲ್ ಸೆಷನ್ ನ್ಯಾಯಾಲಯ ಎನ್‍ಡಿಪಿಎಸ್ ಸ್ಪೆಷಲ್ ಕೇಸ್ ನಂ. 100/15 ರಲ್ಲಿ ಮಾದಕ ವಸ್ತುಗಳನ್ನು ಹೊಂದಿ ಸಾಗಾಟ ಮಾಡಿದ ಆರೋಪಕ್ಕಾಗಿ ಆರೋಪಿಗಳಾದ ಗದಗ ಜಿಲ್ಲೆಯ ಶ್ರೀನಿವಾಸ.ಸಿದ್ದಪ್ಪ. ನರಗುಂದ, ಹುಬಳ್ಳಿ ತಾಲೂಕಿನ ಗಂಧಿವಾಡ ಗ್ರಾಮದ ಬೆಜಾಂಮಿನ್ ರಾಜರತ್ನಮ್ಮ ಹಾಗೂ ಬೆಳಗಾವಿಯ ವಡಗಾಂವಿಯ ಕೃಷ್ಣ. ರಾಮಪ್ಪ. ಶಿಂಗನಮಲೆ ಈ ಮೂರು ಜನ ಆರೋಪಿಗಳಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ, ಒಂದು ಲಕ್ಷ ರೂ. ದಂಡ ವಿಧಿಸಿ, 05 ಜನ ಆರೋಪಿತರನ್ನು ಖುಲಾಸೆಗೊಳಿಸಿ ಮಾ.12 ರಂದು ಆದೇಶ ಹೊರಡಿಸಿದೆ.
ಪ್ರಕರಣವನ್ನು ರಾಜ್ಯ ವಿಚಕ್ಷಣ ದಳದ ಅಬಕಾರಿ ಅಧೀಕ್ಷಕರಾದ ಶಿವನಗೌಡ ಅವರ ನೇತೃತ್ವದಲ್ಲಿ ರಾಜ್ಯ ವಿಚಕ್ಷಣ ದಳದ ಅಬಕಾರಿ ನಿರೀಕ್ಷಕರಾದ ವಿಜಯಕುಮಾರ್. ಜಿ.ವಿ ಅವರು ಪ್ರಕರಣ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ್ದರು. ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಜಗದೀಶ ಕುಲಕರ್ಣಿ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಕ್ರೀಡಾಪಟುಗಳಿಗೆ ನಗದು ಪುರಸ್ಕಾರ: ಅರ್ಜಿ ಆಹ್ವಾನ
ಬೆಳಗಾವಿ: : 2015, 2016 ಹಾಗೂ 2017ನೇ ಸಾಲಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಕ್ಕೆ ಕೀರ್ತಿ ತಂದ ಕರ್ನಾಟಕದ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗದು ಪುರಸ್ಕಾರವನ್ನು ನೀಡಲಾಗುತ್ತಿದ್ದು, ಅರ್ಹ ಕ್ರೀಡಾಪಟುಗಳಿಮದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಕ್ರೀಡಾಪಟುಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಸಂಬಂಧಪಟ್ಟ ರಾಜ್ಯದ ಅಂಗೀಕೃತ ಕ್ರೀಡಾ ಸಂಸ್ಥೆ, ಜಿಲ್ಲೆಗಳ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಕರ್ನಾಟಕ ಕ್ರೀಡಾ ಪ್ರಾಧಿಕಾರದ ಶಿಫಾರಸ್ಸಿನೊಂದಿಗೆ ಸಲ್ಲಿಸಬೇಕಾಗಿರುತ್ತದೆ.
ಅರ್ಜಿಗಳನ್ನು ಉಪ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಇವರಿಗೆ ಮಾ.22 ರೊಳಗಾಗಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.