ಉತ್ತಮ ಸಮಾಜಕ್ಕಾಗಿ

ಪ್ರಕಟಣೆ:ಸಂಪರ್ಕಿಸಿ

0

ವನ್ಯಜೀವಿ ಸಪ್ತಾಹ: ಅ.5 ರಂದು ಸೈಕಲ್ ಜಾಥಾ
ಬೆಳಗಾವಿ,  ಅಕ್ಟೋಬರ್ 2 ರಿಂದ 8ರವರೆಗೆ 64ನೇ ವನ್ಯಜೀವಿ ಸಪ್ತಾಹವನ್ನು ಆಚರಿಸುವ ನಿಮಿತ್ಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸೇರಿಕೊಂಡು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಕ್ಟೋಬರ್ 5 ರಂದು ಮುಂಜಾನೆ 6-30 ಗಂಟೆಗೆ ಸೈಕಲ್ ಜಾಥಾವನ್ನು ಆಯೋಜಿಸಲಾಗಿದ್ದು, ಅರಣ್ಯ ಸಂಕೀರ್ಣದಿಂದ ಆರ್‍ಟಿಓ ಸರ್ಕಲ್, ಚನ್ನಮ್ಮ ಸರ್ಕಲ್, ಬೋಗಾರವೇಸ್, ಕಾಂಗ್ರೇಸ್ ರೋಡ್, 3ನೇ ರೇಲ್ವೆಗೇಟ್, ಪೀರನವಾಡಿ ಹಾಗೂ ಜಾಂಬೋಟಿ ರಸ್ತೆ ಮೂಲಕ ನಗರವನ ಮಚ್ಛೆಯ (ವಿಟಿಯು ಗೇಟ್)ವರೆಗೆ ಹಮ್ಮಿಕೊಳ್ಳಲಾಗಿದೆ.
ಜಾಥಾದಲ್ಲಿ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಸೈಕಲ್ ಜಾಥಾದಲ್ಲಿ ಭಾಗವಹಿಸಬಹುದಾಗಿದೆ ಎಂದು ಬೆಳಗಾವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿತ್ತೂರು ಚನ್ನಮ್ಮ ಉತ್ಸವ: ಮಳಿಗೆ ಸ್ಥಾಪನೆಗೆ ಅರ್ಜಿ ಆಹ್ವಾನ
ಬೆಳಗಾವಿ,  ಪ್ರತಿ ವರ್ಷದಂತೆ ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅಕ್ಟೋಬರ್ 23 ರಿಂದ 25ರವರೆಗೆ ಚೆನ್ನಮ್ಮನ ಕಿತ್ತೂರ ಉತ್ಸವವನ್ನು ಜರುಗಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಚೆನ್ನಮ್ಮನ ಕಿತ್ತೂರ ಉತ್ಸವದ ಸಮಯದಲ್ಲಿ ಜಿಲ್ಲೆಯಲ್ಲಿ ತಯಾರಿಸಲಾಗುವ ಖಾದಿ ಗ್ರಾಮೋದ್ಯೋಗ, ಗೃಹ ಕೈಗಾರಿಕೆ ಹಾಗೂ ಕರಕುಶಲ ವಸ್ತುಗಳು, ಕೈಮಗ್ಗದ ವಸ್ತ್ರಗಳು ಮತ್ತು ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಲಾಗಿದೆ.
ಈ ಉತ್ಸವದಲ್ಲಿ ಸುಮಾರು 2 ರಿಂದ 3 ಲಕ್ಷ ಜನರು ಭೇಟಿ ನೀಡುವವರಿದ್ದು, ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ತಮ ಅವಕಾಶವಿರುತ್ತದೆ. ಆದುದರಿಂದ ವಿವಿಧ ಸಣ್ಣ ಕೈಗಾರಿಕಾ ಘಟಕಗಳು, ಕುಶಲ ಕರ್ಮಿಗಳು, ಸ್ವ ಸಹಾಯ ಸಂಘ, ಸಂಸ್ಥೆಗಳವರು ಹಾಗೂ ಸರಕಾರಿ ಇಲಾಖೆಯವರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಮಳಿಗೆಗಾಗಿ ಅರ್ಜಿ ಸಲ್ಲಿಸಲು ಕೊನೆಯ ಅಕ್ಟೋಬರ್ 16 ಕೊನೆಯ ದಿನವಾಗಿರುತ್ತದೆ. ಅರ್ಜಿಯ ಜೊತೆಗೆ ಪ್ರತಿ ಮಳಿಗೆಗೆ ಸರಕಾರಿ ಇಲಾಖೆಯವರು ರೂ.5000, ಕುಶಲಕರ್ಮಿಗಳ ಘಟಕ ರೂ. 1000, ಸಣ್ಣ ಕೈಗಾರಿಕಾ ಘಟಕ ರೂ. 3000, ಆಹಾರ ಮಳಿಗೆ ರೂ. 6000 ಇತ್ಯಾದಿ ಹಾಗೂ ಸ್ವ ಸಹಾಯ ಸಂಘಗಳಿಗೆ ಹಾಗೂ ಕುಶಲಕರ್ಮಿಗಳಿಗೆ ರೂ.1000 ಬಾಡಿಗೆ ನಿಗದಿ ಪಡಿಸಲಾಗಿದೆ.
ಉತ್ಸವದಲ್ಲಿ ಮಳಿಗೆಯನ್ನು ಪಡೆಯಲು ಇಚ್ಛಿಸುವವರು ಬಾಡಿಗೆಯನ್ನು ಡಿ.ಡಿ.ರೂಪದಲ್ಲಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ಇವರ ಹೆಸರಿನಲ್ಲಿ ಪಡೆದು ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉದ್ಯಮಬಾಗ, ಬೆಳಗಾವಿ ಇವರನ್ನು ಕಚೇರಿ ದೂರವಾಣಿ ಸಂ: 0831-2440187 ಸಂಪರ್ಕಿಸಬಹುದಾಗಿದೆ.
ಬೈಲಹೊಂಗಲ, ಉಪವಿಭಾಗ ಸಹಾಯಕ ನಿರ್ದೇಶಕ ಶ್ರೀಪಾದ ಹುದ್ದಾರ ಅವರ ಮೊಬೈಲ ಸಂಖ್ಯೆ: 9900364514 ಹಾಗೂ ಎ.ಐ.ಪಠಾಣ, ಬೈಲಹೊಂಗಲ ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಮೊ.ಸಂ:9448866919 ನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ನಾಗರಿಕರ ಗಮನಕ್ಕೆ
ಬೆಳಗಾವಿ,  2018-19 ನೇ ಸಾಲಿನ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ” ಅಂಗವಾಗಿ ಅಕ್ಟೊಬರ್ 1 ರಂದು ಮಾನ್ಯ ಮುಖ್ಯ ಮಂತ್ರಿಗಳವರು, ರಾಜ್ಯದ ಹಿರಿಯ ನಾಗರಿಕರಿಗೆ ಗುರುತಿನ ಚೀಟಿಗಳನ್ನು ಆನ್‍ಲೈನ್ ಮುಖಾಂತರ ವಿತರಿಸಲು ಸೇವಾ ಸಿಂಧು ಪೋರ್ಟಲ್‍ನ್ನು ಪ್ರಾರಂಭಿಸಿರುತ್ತಾರೆ.

ಕಾರಣ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ವಿತರಿಸುತ್ತಿರುವ ಎಲ್ಲಾ ಸ್ವಯಂ-ಸೇವಾ ಸಂಸ್ಥೆಯವರು ಇನ್ನು ಮುಂದೆ ಗುರುತಿನ ಚೀಟಿಗಳನ್ನು ತಯಾರಿಸಿ ವಿತರಿಸುವುದನ್ನು ನಿಲ್ಲಿಸುವಂತೆ ತಿಳಿಸಿರುತ್ತಾರೆ. ಅಕ್ಟೋಬರ್ 1ರ ನಂತರ ಜಿಲ್ಲಾ ಕಚೇರಿಗೆ ಸಹಿಗಾಗಿ ಗುರುತಿನ ಚೀಟಿಗಳನ್ನು ಸಲ್ಲಿಸುವುದನ್ನು ತಡೆಯಲಾಗಿದೆ. ಇನ್ನು ಮುಂದೆ ಹಿರಿಯ ನಾಗರಿಕರ ಗುರುತಿನ ಚೀಟಿಗಳನ್ನು ಸೇವಾ ಸಿಂಧು ಸರ್ವಿಸ್ ಪ್ಲಸ್ ಪೋರ್ಟಲ್‍ನಲ್ಲಿ ಆನ್‍ಲೈನ್ ಮುಖಾಂತರ ಡಿಜಿಟಲ್ ಸಹಿಯೊಂದಿಗೆ ಫಲಾನುಭವಿಗಳಿಗೆ ನೇರವಾಗಿ ಒದಗಿಸಲಾಗುವುದೆಂದು ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿಯ ದೂರವಾಣಿ ಸಂ:0831-2476096/7 ಮತ್ತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 0831-2494476 ಗೆ ಸಂಪರ್ಕಿಸಬಹುದಾಗಿದೆ.

ಇಲಿ ಮತ್ತು ಹೆಗ್ಗಣಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳು
ಬೆಳಗಾವಿ,  ಇಲಿ ನಿಯಂತ್ರಣಕ್ಕೆ ಜಿಂಕ್ ಫಾಸ್ಪೈಡ್ ಮತ್ತು ರೋಬಾನ್ (ಇಲಿ ಪಾಷಾಣಗಳು), ಅಕ್ಕಿ, ರಾಗಿ, ಹುರಿದ ಕಡಲೆ ಬೀಜ ಹಾಗೂ ಕಡಲೆಕಾಯಿ ಎಣ್ಣೆ,ಪ್ಲಾಸ್ಟಿಕ್ ಬೋಗುಣಿ ಅಥವಾ ಬೇಸಿನ್, ಪ್ಲಾಸ್ಟಿಕ್ ಚಮಚ, ಪ್ಲಾಸ್ಟಿಕ್ ಕವರುಗಳು (6” ಉದ್ದ 4” ಅಗಲ, ತೆಳ್ಳನೆಯ ಮಾದರಿ) ಬೇಕಾದ ಸಾಮ್ಯಾನ ಸಲಕರಣೆಗಳು ಉಪಯೋಗಿಸಬೇಕು.
ಪೂರ್ವ ಸಿದ್ಧತೆಗಳು ವಿಷರಹಿತ ಆಮಿಷದ ತಯಾರಿಕೆ: ಒಂದು ದೂಡ್ಡ ಪ್ಲಾಸ್ಟಿಕ್ ಬೋಗುಣಿಯಲ್ಲಿ 48 ಭಾಗ ಅಕ್ಕಿ, 48 ಭಾಗ ರಾಗಿ, 3 ಭಾಗ ಹುರಿದು ಕುಟ್ಟಿದ ಕಡಲೆಕಾಯಿ ಬೀಜ, 3 ಭಾಗ ಕಡಲೆಕಾಯಿ ಎಣ್ಣೆ ಹಾಕಿ. ಇದನ್ನು ಪ್ಲಾಸ್ಟಿಕ್ ಅಥವಾ ಮರದ ಸೌಟಿನಿಂದ ಚೆನ್ನಾಗಿ ಬೆರೆಸಿ, ಹೀಗೆ ಬೆರೆಸಿದ 20ಗ್ರಾಂ ಮಿಶ್ರಣವನ್ನು ಪ್ಲಾಸ್ಟಿಕ್ ಚಮಚದ ಸಹಾಯದಿಂದ ಪ್ಲಾಸ್ಟಿಕ್ ಕವರಿನೊಳಗೆ ಹಾಕಿ, ಗಂಟು ಹಾಕಿ. ಹೀಗೆ ಎಲ್ಲಾ ಮಿಶ್ರಣವನ್ನು ಪ್ಲಾಸ್ಟಿಕ್ ಕವರಿನೊಳಗೆ ತುಂಬಿ, ಗಂಟು ಹಾಕಿ.
ವಿಷದ ಆಮಿಷ ತಯಾರಿಕೆಗೆ ಮೇಲೆ ಹೇಳಿದಂತೆ ವಿಷರಹಿತ ಆಮಿಷವನ್ನು ತಯಾರಿಸಿ ಅದಕ್ಕೆ ಶೇ.2 ರಷ್ಟು ಜಿಂಕ್ ಫಾಸ್ಪೈಡ್ ಎಂಬ ಇಲಿ ಪಾಷಂವನ್ನು ಬೆರೆಸಿ, ಈ ವಿಷಯುಕ್ತವನ್ನು ತಲಾ 10ಗ್ರಾಂ ನಂತೆ ಪ್ಲಾಸ್ಟಿಕ್ ಕವರಿನೊಳಗೆ ಹಾಕಿ, ಗಂಟು ಹಾಕಿ.
ಇಲಿ ನಿಯಂತ್ರಣದ ವೇಳಾ ಪಟ್ಟಿ ಮೊದಲನೇ ದಿನ: ಹೊಲ,ಗದ್ದೆಗಳಲ್ಲಿರುವ ಎಲ್ಲಾ ಇಲಿ ಬಿಲಗಳನ್ನು ಮುಚ್ಚಿ. ಎರಡನೇ ದಿನ: ಬಾಯ್ದೆರೆದಿರುವ ಬಿಲಗಳÀಲ್ಲಿ ಒಂದೊಂದು ವಿಷರಹಿತ ಪ್ಲಾಸ್ಟಿಕ್ ಕವರನ್ನು ಹಾಕಿ, ಬಿಲದ ಬಾಯನ್ನು ಮಣ್ಣಿನಿಂದ ಮುಚ್ಚಿ. ನಾಲ್ಕನೇ ದಿನ: ಪ್ರತಿ ಬಿಲದೊಳಕ್ಕೂ ಒಂದರಂತೆ ವಿಷಪೂರಿತ ಆಹಾರವಿರುವ ಪ್ಲಾಸ್ಟಿಕ್ ಕವರನ್ನು ಹಾಕಿ, ಬಿಲದ ಬಾಯನ್ನು ಮಣ್ಣಿನಿಂದ ಮುಚ್ಚಿ. ಐದನೇ ದಿನ: ಮೇಲಿನ ಕ್ರಮದಿಂದ ಶೇ.60-70 ರಷ್ಟು ಇಲಿ, ಹೆಗ್ಗಣಗಳು ಸಾಯುತ್ತವೆ.ಉಳಿದಿರುವ ಇಲಿಗಳನ್ನು ಕೊಲ್ಲಲು ಬಾಯಿ ತೆಗೆದಿರುವ ಬಿಲದೊಳಕ್ಕೆ ತಲಾ ಒಂದರಂತೆ “ರೋಬಾನ್” ಬೆಲ್ಲೆ ಹಾಕಿ.
ಮುಂಜಾಗ್ರತೆಗಳು ಝಿಂಕ್ ಫಾಸ್ಪೈಡ್ ಬಳಕೆಯನ್ನು ಹೊಲಗದ್ದೆ,ತೋಟಗಳಲ್ಲಿ ಮಾತ್ರ ಮಾಡಿ. ವಿಷವನ್ನು ಬರಿ ಕೈಯಿಂದಾಗಲಿ,ಲೋಹದ ಪಾತ್ರೆಗಳಲ್ಲಾಗಲಿ ಬೆರಸಬೇಡಿ ಕೇವಲ ಪ್ಲಾಸ್ಟಕ್ ಬೇಸಿನ್ ಮತ್ತು ಸೌಟುಗಳನ್ನು ಬಳಸಿ. ವಿಷಪ್ರಾಶನದ ನಂತರ ಕೈಕಾಲು, ಮುಖವನ್ನು ಸಾಬೂನಿನಿಂದ ತೊಳೆಯಬೇಕು, ಸತ್ತ ಇಲಿ,ಹೆಗ್ಗಣಗಳನ್ನು ಆಳವಾದ ಗುಂಡಿ ತೋಡಿ ಅದರಲ್ಲಿ ಹೂಳಬೇಕು. ಆಕಸ್ಮಿಕವಾಗಿ ಜಿಂಕ್ ಫಾಸ್ಪೈಡ್ ವಿಷವನ್ನು ಯಾರಾದರೂ ತಿಂದಿದ್ದರೆ ತಕ್ಷಣವೇ ಉಪ್ಪು ನೀರು ಅಥವಾ ಮೊಟ್ಟೆಯ ಬಿಳಿ ಭಾಗ ನುಂಗಿಸಿ ವಾಂತಿ ಮಾಡಿಸಿ, ತಡ ಮಾಡದೆ ವೈದ್ಯರ ಬಳಿಗೆ ಕರೆದೊಯ್ಯಿರಿ. ರೋಬಾನ್ ಆಕಸ್ಮಿಕವಾಗಿ ಸೇವಿಸಲ್ಪಟ್ಟರೆ, ವೈದ್ಯರಲ್ಲಿಗೆ, ಕರೆದೊಯ್ದು, ವಿಟಾಮಿನ್ ಕೆ-1 ರ ಚುಚ್ಚು ಮದ್ದನ್ನು ಕೊಡುವಂತೆ ವಿಜ್ಞಾಪಿಸಿ ಎಂದು ಬೆಳಗಾವಿ ಹಾರ್ಟಿಕ್ಲಿನಿಕ್ ವಿಷಯ ತಜ್ಞರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಬೆಳಗಾವಿ,  ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ಅರೆಅಲೆಮಾರಿ ವಿದ್ಯಾರ್ಥಿಗಳಿಂದ, 2018-19 ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ”, “ಶುಲ್ಕ ವಿನಾಯಿತಿ”, “ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ”, ಮತ್ತು “ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ”, ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ: www.karepass.cgg.gov.in, www.backwardclasses.kar.nic.in ಹಾಗೂ ಸಹಾಯವಾಣಿ ಸಂಖ್ಯೆ 8050770005 / 8050770004 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿರುಸಾಲ ಯೋಜನೆಯಡಿ ಅರ್ಜಿ ಆಹ್ವಾನ
ಬೆಳಗಾವಿ,  ಶಿಶು ಅಭಿವೃದ್ಧಿ ಯೋಜನೆ ಬೆಳಗಾವಿ ನಗರದ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಕಿರುಸಾಲ ಯೋಜನೆಯಡಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಒಂದು ಸ್ತ್ರೀ ಶಕ್ತಿ ಗುಂಪಿಗೆ ರೂ. 2 ಲಕ್ಷಗಳ ವರೆಗೆ ಸಾಲವನ್ನು ಬಡ್ಡಿ ರಹಿತವಾಗಿ ಮಂಜೂರು ಮಾಡಲಾಗುವುದು.
ಬೆಳಗಾವಿ ನಗರದ ಉತ್ತರ ಮತಕ್ಷೇತ್ರದ-18 ಮತ್ತು ಬೆಳಗಾವಿ ನಗರದ ದಕ್ಷಿಣ ಮತಕ್ಷೇತ್ರದ-08 ಮಹಿಳಾ ಫಲಾನುಭವಿಗಳಿಗೆ ಸಮೃದ್ಧಿ ಯೋಜನೆಯಡಿ ಸ್ವ-ಉದ್ಯೋಗ ಬೀದಿ ಬದಿ ವ್ಯಾಪಾರ ಮಾಡಲು ರೂ. 10,000 ಪ್ರೋತ್ಸಾಹಧನ ನೀಡಲಾಗುವುದು.
ಈ ಎರಡು ಯೋಜನೆಗಳಿಗೆ ಅರ್ಹ ಮಹಿಳಾ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳವರು ಅಕ್ಟೊಬರ್ 20ರಂದು ಸಾಯಂಕಾಲ 5-30ರ ರೊಳಗೆ ಅರ್ಜಿಗಳನ್ನು ಈ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಬೆಳಗಾವಿ ನಗರ, ಜಿಲ್ಲಾ ಬಾಲಭವನ ಕಟ್ಟಡ ಶ್ರೀನಗರ, ಬೆಳಗಾವಿ ದೂ.ಸಂ 0831-2471579ನ್ನು ಸಂಪರ್ಕಿಸಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗೆ ಅರ್ಜಿ ಆಹ್ವಾನ
ಬೆಳಗಾವಿ, 2018-19ನೇ ಸಾಳಿಗಾಗಿ 2 ವರ್ಷದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗಾಗಿ ಸರ್ಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಬೆಳಗಾವಿಯಲ್ಲಿ ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ ಎಂದು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರೇಗಾ ಓಂಬುಡ್ಸ್‍ಮನ್ ಜಿಲ್ಲಾ ಪ್ರವಾಸ
ಬೆಳಗಾವಿ, : ಬೆಳಗಾವಿ ಜಿಲ್ಲಾ ಪಂಚಾಯತಿಯ ನರೇಗಾ ಓಂಬುಡ್ಸಮನ್‍ರಾದ ಡಾ. ಎ.ಜೆ. ಧುಮಾಳೆ ಅವರು ಅ.4 ರಿಂz 20ರವರೆಗೆ ಆಯಾ ತಾಲೂಕಿನ ತಾಲೂಕ ಪಂಚಾಯತ ಕಾರ್ಯಾಲಯಗಳಲ್ಲಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಕುರಿತು ಬಂದ ದೂರುಗಳ ವಿಚಾರಣೆ ನಡೆಸುವರು ಹಾಗೂ ಸಾರ್ವಜನಿಕರಿಂದ ದೂರು ಅಹವಾಲುಗಳನ್ನು ಸ್ವೀಕರಿಸುವರು.
ಅಕ್ಟೋಬರ್ 04 ರಂದು ಮಧ್ಯಾಹ್ನ 3 ಗಂಟೆಗೆ ಖಾನಾಪೂರ, ಅ.10 ರಂದು ಮಧ್ಯಾಹ್ನ 3 ಗಂಟೆಗೆ ಬೈಲಹೊಂಗಲ, ಅ. 12 ರಂದು ಬೆಳಿಗ್ಗೆ 11 ಗಂಟೆಗೆ ಚಿಕ್ಕೋಡಿ ಹಾಗೂ ಮಧ್ಯಾಹ್ನ 3 ಗಂಟೆಗೆ ಅಥಣಿ, ಅ.16 ರಂದು ಬೆಳಿಗ್ಗೆ 11 ಗಂಟೆಗೆ ಹುಕ್ಕೇರಿ ಹಾಗೂ ಮಧ್ಯಾಹ್ನ 3 ಗಂಟೆಗೆ ಗೋಕಾಕ, ಅ.20 ರಂದು ಬೆಳಿಗ್ಗೆ 11 ಗಂಟೆಗೆ ಸವದತ್ತಿ, ಮಧ್ಯಾಹ್ನ 3 ಗಂಟೆಗೆ ರಾಮದುರ್ಗ ಭೇಟಿ ನೀಡಿ, ದೂರುಗಳ ವಿಚಾರಣೆ ನಡೆಸುವರು.

ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನಗೊಂಡ ಹಾಗೂ ಅನುಷ್ಠಾನÀಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಯಾವ ರೀತಿ ಲೋಪದೋಷಗÀಳಾಗಿವೆ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದಿಸಿ ಲಿಖಿತ ದೂರುಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಓಂಬುಡ್ಸಮನ್ ಕಚೇರಿ ಬೆಳಗಾವಿ ಕಳುಹಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಖಾನಾಪೂರ: 4, 9 ರಂದು ವಿದ್ಯುತ್ ನಿಲುಗಡೆ
ಬೆಳಗಾವಿ, : ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 33 ಕೆ.ವ್ಹಿ. ಖಾನಾಪೂರ ಉಪಕೇಂದ್ರದಿಂದ ಸರಬರಾಜು ಆಗುವ ಖಾನಾಪೂರ ಪಟ್ಟಣ, ಶಿವಾಜಿ ನಗರ, ರುಮೇವಾಡಿ, ಓತೋಳ್ಳಿ, ಮೊದೇಕೊಪ್ಪ, ನಾಗುರ್ಡಾ, ರಾಮಗುರವಾಡಿ, ಕರಂಬಳ, ಕೌಂದಲ, ಝಾಡನಾವಗಾ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ, ಕಾರಲಗಾ, ಶಿವೊಳ್ಳಿ, ಚಾಪಗಾಂವ, ಅಂಬೋಳಿ, ಹರಸನವಾಡಿ, ಅಸೋಗಾ, ನೇರಸಾ, ಅಶೋಕ ನಗರ, ಮಂತುರ್ಗಾ, ಶೇಡೇಗಾಳಿ ಹಾಗೂ ಹೆಮ್ಮಡಗಾ ಗ್ರಾಮಗಳಿಗೆ ಅಕ್ಟೋಬರ್ 4 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ
ಅದರಂತೆ ಕ.ವಿ.ಪ್ರ.ನಿ.ನಿ. ವತಿಯಿಂದ ಮೂರನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಖಾನಾಪೂರ ಉಪಕೇಂದ್ರದಿಂದ ಸರಬರಾಜು ಆಗುವ ಲೈಲಾ ಶುಗರ ಕಾರ್ಖಾನೆ, ದೇವಲತ್ತಿ, ಬಿದರಭಾವಿ, ಭಂಡಾರಗಾಳಿ, ಗರ್ಲಗುಂಜಿ, ತೋಪಿನಕಟ್ಟಿ, ಬೋರಗಾಂವ, ನಿಡಗಲ, ದೊಡ್ಡಹೊಸುರ, ಸಣ್ಣಹೊಸುರ, ಕರಂಬಳ, ಜಳಗಾ, ಕುಪ್ಪಟಗಿರಿ, ಲೋಕೋಳ್ಳಿ, ಲಕ್ಕೇಬೈಲ, ಯಡೋಗಾ, ಬಳೋಗಾ, ಜೈನಕೊಪ್ಪ, ಗಾಂಧಿನಗರ, ಹಲಕರ್ಣಿ, ಕೋರ್ಟ ಪ್ರದೇಶ, ಕೈಗಾರಿಕಾ ಪ್ರದೇಶ, ಬಾಚೋಳ್ಳಿ, ಕೌಂದಲ, ಝಾಡನಾವಗಾ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ, ಕಾರಲಗಾ, ಶಿವೊಳ್ಳಿ ಹಾಗೂ ಚಾಪಗಾಂವ ಗ್ರಾಮಗಳಿಗೆ ಅಕ್ಟೋಬರ್ 4 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಅಕ್ಟೋಬರ್ 9 ರಂದು ವಿದ್ಯುತ್ ನಿಲುಗಡೆ:
ಕ.ವಿ.ಪ್ರ.ನಿ.ನಿ. ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 33ಕೆ.ವ್ಹಿ. ಲೋಂಡಾ ಹಾಗೂ ಖಾನಾಪೂರ ಉಪಕೇಂದ್ರದಿಂದ ಸರಬರಾಜು ಆಗುವ ನಾಗರಗಾಳಿ, ನಾಗರಗಾಳಿ ರೇಲ್ವೆ ಸ್ಟೇಶನ್, ಮುಂದವಾಡ, ಕುಂಬರ್ಡಾ, ತಾರವಾಡ, ಲೋಂಡಾ, ಲೋಂಡಾ ರೇಲ್ವೆ ಸ್ಟೇಶನ್, ಗುಂಜಿ, ಮೋಹಿಶೇಟ, ವಾಟ್ರೆ, ಭಾಲ್ಕೆ ಬಿ.ಕೆ, ಭಾಲ್ಕೆ ಕೆ.ಎಚ್, ಶಿಂದೋಳ್ಳಿ, ಹೊನ್ಕಲ, ಸಾವರಗಾಳಿ, ಅಂಬೇವಾಡಿ, ತಿವೊಳ್ಳಿ, ಡೋಕೆಗಾಳಿ, ಖಾನಾಪೂರ ಪ್ರದೇಶ, ಶಿವಾಜಿ ನಗರ, ರುಮೇವಾಡಿ, ಓತೋಳ್ಳಿ, ಮೊದೇಕೊಪ್ಪ, ನಾಗುರ್ಡಾ, ರಾಮಗುರವಾಡಿ, ಅಂಬೋಳಿ, ಹರಸನವಾಡಿ, ಅಸೋಗಾ, ನೇರಸಾ, ಅಶೋಕ ನಗರ, ಮಂತುರ್ಗಾ, ಶೇಡೇಗಾಳಿ ಹಾಗೂ ಹೆಮ್ಮಡಗಾ ಪ್ರದೇಶಗಳಿಗೆ ಅಕ್ಟೋಬರ್ 9 ರಂದು ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಹೆಸ್ಕಾಂ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಪ್ರಕಟಣೆ:ಸಂಪರ್ಕಿಸಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.