ಉತ್ತಮ ಸಮಾಜಕ್ಕಾಗಿ

ಪ್ರತಿಯೊಬ್ಬರಲ್ಲಿ ದೇಶಭಕ್ತಿ ಬೆಳೆಯಬೇಕು- ಚಿತ್ಪ್ರಕಾಶಾನಂದ ಸರಸ್ವತಿ ಸ್ವಾಮೀಜಿ

0

ಬೆಳಗಾವಿ.ಜ.20: ದೇಶದ ಯೋಧರಂತೆ ದೇಶದ ಪ್ರತಿಯೊಬ್ಬ ನಾಗರಿಕನಲ್ಲಿ ದೇಶಭಕ್ತಿ ಬೆಳೆಯುಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಅರ್ಷ ವಿದ್ಯಾಕೇಂದ್ರದ ಚಿತ್ಪ್ರಕಾಶಾನಂದ ಸರಸ್ವತಿ ಸ್ವಾಮೀಜಿ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ದೇಶಭಕ್ತಿ ಎಂಬುದು ಒಂದು ದಿನ ಮಾತ್ರವಾಗಿರದೆ ಅದು ನಮ್ಮ ಕರ್ಮವಾಗಬೇಕು.ಪಿತ್ರೊದೇವೋ ಭವ ಮಾತ್ರೊದೇವೋ ಜೊತೆಗೆ ದೇಶ ಭಕ್ತಿ ಗುಣಗಳು ಬೆಳೆಯಬೇಕು. ಎಲ್ಲ ಧರ್ಮಗಳನ್ನು ಗೌರವದಿಂದ ಕಾಣಬೇಕು. ಎಲ್ಲರಿಗೂ ಸಮಬಾಳು ಸಮಪಾಲು ಎಲ್ಲರನ್ನು ಸಮಾನತೆಯಿಂದ ಕಾಣಬೇಕು ಎಂದು ಹೇಳಿದ ಅವರು, ದೇಶದ ಪ್ರಜೆಗಳು ಸ್ವಚ್ಚತೆ, ನ್ಯಾಯ, ಸಮಾನತೆಯಿಂದ ಕಾಣಬೇಕು. ದೇಶದ ಪ್ರಜೆಗಳು ಸ್ವಚ್ಛತೆ, ನ್ಯಾಯ ಸಮಾನತೆಯನ್ನು ಕಾಯಬೇಕು ಗಡಿ ಯೋಧರು ಗಡಿಕಾಯುವುದು ಒಂದು ದೇಶಭಕ್ತಿಯಾದರೆ,ಗಡಿಯೊಳಗೆ ಇರುವ ನಾವುಗಳು ಶ್ರದ್ಧೆ ಧರ್ಮ ಆಚರಣೆ ಜೊತೆಗೆ ಸ್ವಚ್ಚತಾ ಕಾರ್ಯಕ್ರಮ, ದೇಶದ ಅಭಿವೃದ್ಧಿಯಲ್ಲಿ ಪಾಲ್ಗೋಳ್ಳಬೇಕು ಎಂದು ಅವರು ವಿವರಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ದೇಶಭಕ್ತಿಯ ಕಾರ್ಯಕ್ರಮದ ಕುರಿತು ಜಿನದತ್ತ ದೇಸಾಯಿ ಅವರು ಮಾತನಾಡುತ್ತಾ ಪ್ರತಿ ಯುವಕರಲ್ಲಿ ದೇಶಭಕ್ತಿ ಬೆಳೆಯಬೇಕು ಅದು ಅವರ ಜೀವವಾಗಬೇಕು “ಜನನೀಯ ಜನ್ಮಭೂಮಿಶ್ಚ ಸ್ವಗಾದಪಿಗರೀಯಸೆ” ಅಂದರೆ ಪ್ರತಿಯೊಬ್ಬ ಪ್ರಜೆಗೆ ಅವರ ಜನ್ಮಭೂಮಿ ಅವರಿಗೆ ಸ್ವರ್ಗಕ್ಕಿಂತ ಮಿಗಿಲು ಎಂದು ಹೇಳಿದರು. ಈ ವರ್ಷ 1500 ಸ್ಪರ್ಧಾಳುಗಳು ಈ ದೇಶಭಕ್ತಿ ಗೀತೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಭರತೇಶ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಂದ ಈಶಸ್ತವನ ಮತ್ತು ನಾಡಗೀತೆಯನ್ನು ಹಾಡಿದರು. ಆಡಳಿತ ಮಂಡಳಿಯ ಸದಸ್ಯರಾದ ವಿನೋದ ದೊಡ್ಡಣ್ಣವರ ಅತಿಥಿಗಳಿಗೆ ಪುಷ್ಪಗುಚ್ಛ ಸವಿನೆನಪಿನ ಕಾಣಿಕೆಯನ್ನು ನೀಡಿ ಸ್ವಾಗತಿಸಿದರು.ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಜಿನದತ್ತ ದೇಸಾಯಿ, ಕಾರ್ಯದರ್ಶಿಗಳಾದ ರಾಜೀವ ದೊಡ್ಡಣ್ಣವರ, ವಿನೋದ ದೊಡ್ಡಣ್ಣವರ, ಎಲ್ಲ ಶಿಕ್ಷಕ ವರ್ಗದವರು, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡು ದಿನಗಳವರೆಗೆ 14 ವರ್ಷದೊಳಗೆ 14ವರ್ಷ ಮೇಲ್ಪಟ್ಟವರಿಗೆ ಗೀತಗಾಯನ ಸ್ಪರ್ಧೆ ನಡೆಯಲಿದೆ. ಮಿಥುನ ಶಾಸ್ತ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್.ಎನ್. ಅಕ್ಕಿ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.