ಉತ್ತಮ ಸಮಾಜಕ್ಕಾಗಿ

ಪ್ರಧಾನಿ ಜನ್ಮದಿನ ಶಾಸಕರಿಂದ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

0

Distribution of fruits and vegetables to the patients from MLA for Prime Minister's Birthday

ಪ್ರಧಾನಿ ಜನ್ಮದಿನ ಶಾಸಕರಿಂದ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

ಹಾಸನ : ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜನ್ಮದಿನದ ಅಂಗವಾಗಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಶಾಸಕರಾದ ಪ್ರೀತಮ್ ಜೆ. ಗೌಡ ಅವರು ತೆರಳಿ ರೋಗಿಗಳಿಗೆ ಹಣ್ಣು-ಹಂಪಲು ನೀಡಿ ಅವರ ಕಷ್ಟ-ಸುಖವನ್ನು ವಿಚಾರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ನಂತರ ಮಾತನಾಡಿದ ಶಾಸಕರು, ಜಗತ್ತಿನ ಪ್ರಭಾವಿ ನಾಯಕರು ಭಾರತ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ೬೯ನೇ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಲು ಬಿಜೆಪಿ ಪಕ್ಷದ ಕಾರ್ಯಕರ್ತರು ಎಲ್ಲಾ ಸೇರಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲನ್ನು ಸೇವಾ ಮನೋಭಾವನೆಯಲ್ಲಿ ವಿತರಣೆ ಮಾಡಲಾಗುತ್ತಿದೆ ಎಂದರು. ಪ್ರಧಾನಿ ಮೋದಿ ಅವರಿಗೆ ಭಗವಂತ ಇನ್ನು ಆರೋಗ್ಯ ಮತ್ತು ಆಯಸ್ ನೀಡಿ ದೇಶ ಸೇವೆ ಮಾಡುವ ಅವಕಾಶ ಕಲ್ಪಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಇದೆ ವೇಳೆ ಬಿಜೆಪಿ ಮುಖಂಡರು ಬಾಳೆಮಂಡಿ ಪುಟ್ಟಸ್ವಾಮಿ, ಚನ್ನಪಟ್ಟಣ ಹರೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಗರಾಧ್ಯಕ್ಷ ಶೋಭನ್ ಬಾಬು, ಪ್ರಸನ್ನಕುಮಾರ್, ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚನ್ನಕೇಶವ, ಪುನೀತ್ ಇತರರು ಉಪಸ್ಥಿತರಿದ್ದರು.  ////

The post ಪ್ರಧಾನಿ ಜನ್ಮದಿನ ಶಾಸಕರಿಂದ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ appeared first on Prajaa News.

Source link

ಪ್ರಧಾನಿ ಜನ್ಮದಿನ ಶಾಸಕರಿಂದ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

Leave A Reply

 Click this button or press Ctrl+G to toggle between Kannada and English

Your email address will not be published.