ಉತ್ತಮ ಸಮಾಜಕ್ಕಾಗಿ

ಪ್ರಧಾನಿ ಮೋದಿ ಆಶಯಕ್ಕೆ ಆಕರ್ಷಿತರಾಗಿದ್ದ ಅನ್ನದಾತರು : ಆಕಾಶದಲ್ಲಿ

0

ಪ್ರಧಾನಿ ಮೋದಿ ಆಶಯಕ್ಕೆ ಆಕರ್ಷಿತರಾಗಿದ್ದ ಅನ್ನದಾತರು : ಆಕಾಶದಲ್ಲಿ

ಬೆಳಗಾವಿ: ಗದ್ದೆ ಊಳುವ ರೈತರೂ ಸಹ ಆಕಾಶದಲ್ಲಿ ಹಾರಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಆಶಯ ಬೆಳಗಾವಿಯಲ್ಲಿ ಇಂದು ಈಡೇರಿದೆ! ಬೆಳಗಾವಿಯ ಬಸವಣ ಕುಡಚಿ ಗ್ರಾಮದ 15ಜನ ರೈತರು ಬೆಳಗಾವಿಯಿಂದ-ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಪ್ರಧಾನಿ ಮೋದಿ ಆಶಯಕ್ಕೆ ಆಕರ್ಷಿತರಾಗಿದ್ದ ಅನ್ನದಾತರು ತಾವೂ ಸಹ ಹೇಗಾದ್ರೂ ಮಾಡಿ ಒಮ್ಮೆ ವಿಮಾನ ಹಾರಾಟ ಮಾಡಲೆಬೇಕು ಎಂದು ತಿಂಗಳ ಹಿಂದೆಯೇ ಅತಿ ಕಡಿಮೆ ಬೆಲೆಗೆ ಫ್ಲೈಟ್ ಬುಕ್ ಮಾಡಿದ್ದರು.

ಬಸವಣ ಕುಡಚಿಯ 15ರೈತರು ಥೇಟ್ ಗದ್ದೆಕೆಲಸದ ಉಡುಪಿನಲ್ಲೇ ವಿಮಾನ ಏರಿದಾಗ; ಸೂಟುಬೂಟಿನ ಗಂಭೀರವದನ ಸಹಪ್ರಯಾಣಿಕರು ಆನಂದಾಶ್ಚರ್ಯ ವ್ಯಕ್ತಪಡಿಸಿ ಆಹ್ವಾನಿಸಿದರು.

ರೈತರ ವಿಮಾನಯಾನ ಆಸೆಗೆ ಶಾಸಕ ಅನಿಲ ಬೆನಕೆ ಪೋಷಣೆ ನೀಡಿ, ಅಭಿನಂದನೆ & ಶುಭಾಶಯದೊಂದಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು. ಇಂದು ಬೆಂಗಳೂರಿನಲ್ಲಿ ವಸತಿ ಮಾಡಿ ಮತ್ತೆ ಶನಿವಾರ ವಿಮಾನ ಏರಿ ಬೆಳಗಾವಿಯಲ್ಲಿ ಇಳಿಯಲಿದ್ದಾರೆ.

ನಿಲುವಂಗಿ, ಪೈಜಾಮ, ಲುಂಗಿ, ಹಾಪ್ ಪ್ಯಾಂಟ್, ನೆಹರೂ ಟೋಪಿ, ಹೆಗಲ ಮೇಲೆ ಟವಾಲು, ಕೈಚೀಲ ಹೊತ್ತಿದ್ದ 15ಜನ ರೈತರೊಂದಿಗೆ ಪ್ರಯಾಣಿಸಲು ಸಹ ಪ್ರಯಾಣಿಕರು ಅಮಿತ ಸಂತಸ ಪಟ್ಟರು.

ಶಾಸಕ ಅನಿಲ ಬೆನಕೆ ಮಾತನಾಡಿ ದುಬಾರಿ & ಆರಾಮದಾಯಕ ಸವಾರಿ ಎನಿಸಿರುವ ವಿಮಾನಯಾನ ಬಡವರು, ಕೃಷಿಕರಿಗೂ ಸಿಗಬೇಕು ಎನ್ನುವುದು ಸರಕಾರದ ಆಶಯ. ಅದಕ್ಕೆ ಪೂರಕ ಎಂಬಂತೆ ರೈತರು ವಿಮಾನ ಪ್ರಯಾಣ ಮಾಡಿದ್ದು ಬಹಳ ಸಂತಸ ಉಂಟು ಮಾಡಿದೆ.

ರೈತರಿಗೆ ಅತಿ ಕಡಿಮೆ ದರದಲ್ಲಿ ವಿಮಾನಯಾನ ಲಭ್ಯ ಮಾಡುವ ದಿಸೆಯಲ್ಲಿ ಕೇಂದ್ರ ವಿಮಾನಯಾನ ಇಲಾಖೆ ಪ್ರಯತ್ನ ನಡೆಸಿದೆ. ಮುಂದಿನ ದಿನಗಳಲ್ಲಿ ರೈತರು ವಿಮಾನ ಪ್ರಯಾಣ ಮಾಡಲು ಇವತ್ತು ಮುನ್ನುಡಿ ಬರೆದಂತಾಗಿದೆ ಎಂದರು.///

The post ಪ್ರಧಾನಿ ಮೋದಿ ಆಶಯಕ್ಕೆ ಆಕರ್ಷಿತರಾಗಿದ್ದ ಅನ್ನದಾತರು : ಆಕಾಶದಲ್ಲಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.