ಉತ್ತಮ ಸಮಾಜಕ್ಕಾಗಿ

ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರಆದ್ಯಕರ್ತವ್ಯ- ಪ್ರೊ.ಸಿದ್ದು

0

ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರಆದ್ಯಕರ್ತವ್ಯ- ಪ್ರೊ.ಸಿದ್ದು ಆಲಗೂರ

ಬೆಳಗಾವಿ:: ನಾಡಿನ ನೆಲ, ಜಲ, ಸಂಸ್ಕøತಿ, ಪರಂಪರೆಯ ಬಹು ಮುಖ್ಯ ಪ್ರಾತಿನಿಧಿಕ ಕ್ಷೇತ್ರಗಳಾಗಿರುವ ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಆದ್ಯಕರ್ತವ್ಯವಾಗಿದೆ ಎಂದು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಸಿದ್ದು ಪಿ.ಆಲಗೂರಕರೆ ನೀಡಿದರು.

ಅವರು ಇಂದು ನಗರದ ಕೋಟೆ ಆವರಣದಲ್ಲಿರುವ ಕಮಲ ಬಸದಿಯಲ್ಲಿ ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ, ಭರತೇಶ ಬಿ.ಬಿ.ಎ ಕಾಲೇಜು, ಗೋಗಟೆ ಇನ್‍ಸ್ಟಿಟ್ಯೂಟ್ ಆಫ್‍ಟೆಕ್ನಾಲಜಿ, ಸಮಿತಿ ಮಹಾವಿದ್ಯಾಲಯ ಮತ್ತು ದಂಡು ಪ್ರದೇಶ, ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘’ಸ್ವಚ್ಛತಾ ಹಿ ಸೇವಾ’’ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಜಾಗೃತಿ ಮುಡಿಸುತ್ತಿರುವುದು ಅತ್ಯಂತ ರಚನಾತ್ಮಕ ಕಾರ್ಯವಾಗಿದೆ ಎಂದು ಅವರು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಸುಭಾಸ ಎಸ್. ಉಪ್ಪಾರ ಇವರು ಮಾತನಾಡುತ್ತಾ, ಮಾನ್ಯ ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಮಿಷನ್‍ಯೋಜನೆಯಡಿಯಲ್ಲಿ ಪ್ರವಾಸಿ ತಾಣಗಳಲ್ಲಿ ವಿಷಯಾಧಾರಿತ ಸ್ವಚ್ಛತಾ ಆಂದೋಲನವನ್ನು ಎಲ್ಲರ ಸಹಭಾಗೀತ್ವದೊಂದಿಗೆ ಆಯೋಜಿಸಿದ್ದು ನಮ್ಮ ಭವ್ಯ ಪರಂಪರೆಯ ಪ್ರವಾಸಿ ತಾಣಗಳನ್ನು ಪ್ರತಿಯೊಬ್ಬರು ಸ್ವಚ್ಛವಾಗಿಟ್ಟುಕೊಳ್ಳುವ ಸದುದ್ದೇಶದಿಂದ ಈ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು. ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರಾದ ಪ್ರೊ. ಎಸ್.ಓ ಹಲಸಗಿ, ಭರತೇಶ ಬಿ.ಬಿ.ಎ ಕಾಲೇಜಿನ ಪವನಕುಮಾರ್‍ಆರ್. ಉಪನ್ಯಾಸಕರಾದ ಗೋಗಟೆ ಕಾಲೇಜು ವೈಭವಚಾಟೆ, ಸಮಿತಿ ಮಹಾವಿದ್ಯಾಲಯದ ಶಾಂತಾ ಪಾಟೀಲ ಹಾಗೂ ಬೆಳಗಾವಿ ದಂಡು ಮಂಡಳಿ ಅಧಿಕಾರಿ ಶ್ರೀ ನಾಗೇಶ ಸಾಕೆ ಉಪಸ್ಥಿತರಿದ್ದರು.
ಪ್ರವಾಸಿ ಅಧಿಕಾರಿ, ಶ್ರೀ ಸೋಮಶೇಖರ ಬನವಾಸಿ ಇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪ್ರವಾಸೋದ್ಯಮ ಸಮಾಲೋಚಕ, ಚೇತನ್‍ಕ್ಯಾಸನೂರ ವಂದಿಸಿದರು. ಸ್ವಚ್ಛತಾ ಅಭಿಯಾನದಲ್ಲಿ ಸುಮಾರು 300 ವಿದ್ಯಾರ್ಥಿಗಳು ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿಗಳು ಭಾಗವಹಿಸಿ ಕಮಲ ಬಸದಿ ಪ್ರವಾಸಿ ಸ್ಥಳವನ್ನು ಸ್ವಚ್ಛಗೊಳಿಸಿದರು.////

The post ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರಆದ್ಯಕರ್ತವ್ಯ- ಪ್ರೊ.ಸಿದ್ದು appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.