ಉತ್ತಮ ಸಮಾಜಕ್ಕಾಗಿ

ಪ್ರೋ. ಶಶಿರೇಖಾ ಪಿ.ಕೆ. ಇವರಿಗೆ “ಭಾರತ ಜ್ಯೋತಿ ಅವಾರ್ಡ

0

ಬೆಳಗಾವಿ, ಪ್ರೋ. ಶಶಿರೇಖಾ ಪಿ.ಕೆ. ದೈಹಿಕ ಶಿಕ್ಷಣ ನಿರ್ದೇಶಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಶ್ಚಾಪೂರ, ತಾ: ಹುಕ್ಕೇರಿ ಜಿ: ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 7 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಒಟ್ಟು ಸರ್ಕಾರಿ ಸೇವಾ ಅವಧಿಯು 18 ವರ್ಷಗಳಾಗಿದ್ದು ಇವರು ಉತ್ತಮ ಶಿಕ್ಷಕಿ, ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕಿ, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ ಇವರಿಂದ ಉತ್ತಮ ಎನ್.ಎಸ್.ಎಸ್. ಅಧಿಕಾರಿಯಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ಅಷ್ಟೆ ಅಲ್ಲದೇ ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ರೇಂಜರ್ ಲೀಡರ್ ಇತ್ಯಾದಿ ಅನೇಕ ತರಬೇತಿ ಪಡೆದು ಅನೇಕ ವಿದ್ಯಾರ್ಥಿಗಳಿಗೆ ರಾಜ್ಯ ಹಾಗೂ ರಾಷ್ಟ್ರಪತಿ ಪ್ರಶಸ್ತಿ ಗಳಿಸಲು ಕಾರಣ ಕರ್ತರಾಗಿರುತ್ತಾರೆ. ಇವರು ಅತ್ಯುತ್ತಮ ಸೇವೆಯನ್ನು ಪರಿಗಣಿಸಿ “ಇಂಡಿಯಾ ಇಂಟರ್ ನ್ಯಾಷನಲ್ ಫ್ರೆಂಡಶಿಪ್ ಸೊಸೈಟಿ” ನವದೆಹಲಿ, ಇವರು ಜನವರಿ 21 ರಂದು ಇಂಟರ್ ನ್ಯಾಷನಲ್ ಸೆಂಟರ್ ನವದೆಹಲಿಯಲ್ಲಿ ನಡೆದ “ಏಕನಾಮಿಕ್ ಗ್ರೋಥ್ ಮತ್ತು ನ್ಯಾಷನಲ್ ಇಂಟಿಗ್ರೇಷನ್” ಸಮಿನಾರ್ ಹಾಗೂ “ಭಾರತ ಜ್ಯೋತಿ” ಅವಾರ್ಡ ಸಮಾರಂಭದಲ್ಲಿ ಪ್ರೋ. ಶಶಿರೇಖಾ ಪಿ.ಕೆ. ದೈಹಿಕ ಶಿಕ್ಷಣ ನಿರ್ದೇಶಕರು ಇವರಿಗೆ ಪ್ರತಿಷ್ಠಿತ ಪ್ರಶಸ್ತಿ “ಭಾರತ ಜ್ಯೋತಿ” ಅವಾರ್ಡನ್ನು “ಇಂಡಿಯಾ ಇಂಟರ್ ನ್ಯಾಷನಲ್ ಫ್ರೆಂಡಶಿಪ್” ಸೊಸೈಟಿಯ ಅಧ್ಯಕ್ಷರು ಹಾಗೂ ತಮಿಳುನಾಡು ಹಾಗೂ ಆಸ್ಸಾಂ ರಾಜ್ಯ ನಿವೃತ್ತಿ ರಾಜಪಾಲರಾದ ಡಾ|| ಭೀಶ್ಮ ನರೇನಸಿಂಗ್ ಇವರು ಸನ್ಮಾನಿಸಿ ಗೌರವಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: