ಉತ್ತಮ ಸಮಾಜಕ್ಕಾಗಿ

ಬಂಡೀಪುರ ಈಗ ಪ್ಲಾಸ್ಟಿಕ್ ಮುಕ್ತ: ನಿರ್ದೇಶಕ ಅಂಬಾಡಿ ಮಾಧವ

Bandipur is now plastic free: Director Ambadi Madhava

0

ಬೆಳಗಾವಿ/ಬಂಡೀಪುರ:  ( news belgaum) ದೇಶದ ಪ್ರಮುಖ ಅರಣ್ಯ ಧಾಮಗಳ ಪೈಕಿ ದಕ್ಷಿಣ ಭಾರತದ ಪ್ರಮುಖ ಫಾರೆಸ್ಟ್ ಪಾರ್ಕ್ ಬಂಡಿಪುರ ನ್ಯಾಷನಲ್ ಟೈಗರ್ ರಿಸರ್ವ್ ಈಗ ಪ್ಲಾಸ್ಟಿಕ್ ಮುಕ್ತವಾಗುವ ಪಣ ತೊಟ್ಟಿದೆ.

ಬಂಡೀಪುರ ಈಗ ಪ್ಲಾಸ್ಟಿಕ್ ಮುಕ್ತ: ನಿರ್ದೇಶಕ ಅಂಬಾಡಿ ಮಾಧವ- Tarun kranti
ವಿಶ್ವ ಪರಿಸರ ದಿನದ ಅಂಗವಾಗಿ ಇಡೀ ತಿಂಗಳು ವಿವಿಧ ವಿಶೇಷ ಜನಜಾಗೃತಿ ಕಾರ್ಯಕ್ರಮಗಳನ್ನು ಉದ್ಯಾನ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರಲಾಗಿದ್ದು, ಜನಜಾಗೃತಿ ಸಹ ಹಮ್ಮಿಕೊಳ್ಳಲಾಯಿತು.

1974ರಲ್ಲಿ ಸ್ಥಾಪಿತ ಬಂಡಿಪುರ ರಾಷ್ಟ್ರೀಯ ಉದ್ಯಾನ ದೇಶದ ಹಳೆಯ ಉದ್ಯಾನಗಳಲ್ಲಿ ಪ್ರಮುಖವಾದದ್ದು, ಸಾಕಷ್ಟು ವನ್ಯಪ್ರಾಣಿಗಳು ವಿಶೇಷವಾಗಿ ಹುಲಿ ಸಂತತಿ ಉಳಿಸಿ ಬೆಳೆಸುವಲ್ಲಿ ಹೆಸರುವಾಸಿ. ಅಜೈವಿಕ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಪಾರಿಸರಿಕ ಅನಾನುಕೂಲತೆಗಳ ಬಗ್ಗೆ ಅರಣ್ಯ ಇಲಾಖೆ ಸಮರ ಸಾರಿದೆ.

ಬಂಡೀಪುರ ಈಗ ಪ್ಲಾಸ್ಟಿಕ್ ಮುಕ್ತ: ನಿರ್ದೇಶಕ ಅಂಬಾಡಿ ಮಾಧವ- Tarun kranti 1
ಸಾರ್ವಜನಿಕರು, ಪ್ರವಾಸಿಗರು ಹಾಗೂ ನಾವೆಲ್ಲರೂ ಇಂದು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಲ್ಲಿಸಬೇಕು, ಅನಿವಾರ್ಯತೆ ಇದ್ದಾಗ ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯಬಾರದು ಎಂದು ಬಂಡಿಪುರ ಹುಲಿ ಯೋಜನೆ ನಿರ್ದೆಶಕ ಅಂಬಾಡಿ ಮಾಧವ ತಿಳಿಸಿದ್ದಾರೆ.

ಬಂಡೀಪುರ ಈಗ ಪ್ಲಾಸ್ಟಿಕ್ ಮುಕ್ತ: ನಿರ್ದೇಶಕ ಅಂಬಾಡಿ ಮಾಧವ- Tarun kranti 2
ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ವಿರೋಧಿಸಿ ‘ಸ್ಟಾಪ್ ಪ್ಲಾಸ್ಟಿಕ್’ ಸಂದೇಶ ಹೊತ್ತ ಕವರ್ ಅನ್ನು ತಲೆ ಮುಚ್ಚಿಕೊಳ್ಳುವ ಮೂಲಕ ಜನಜಾಗೃತಿ ಮೂಡಿಸಲಾಯಿತು. ಬಂಡೀಪುರ ಜನಪ್ರತಿನಿಧಿಗಳು, ಶಾಲಾ ಮಕ್ಕಳು ಹಾಗೂ ಪ್ರವಾಸಿಗರು ಪ್ಲಾಸ್ಟಿಕ್ ಮುಕ್ತ ಬಂಡೀಪುರ ಅಭಿಯಾನದಲ್ಲಿ ಪಾಲ್ಗೊಂಡರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: