ಉತ್ತಮ ಸಮಾಜಕ್ಕಾಗಿ

ಬಡವರಿಗೆ ಉಚಿತ ಅಡುಗೆ ಗ್ಯಾಸ್ ವಿತರಣೆ

0

ಬಡವರಿಗೆ ಉಚಿತ ಅಡುಗೆ ಗ್ಯಾಸ್ ವಿತರಣೆ

ಬೆಳಗಾವಿ:ಪ್ರಧಾನಮಂತ್ರಿ ಉಜ್ವಲ ಗ್ಯಾಸ್ ಯೋಜನೆ ಅಡಿ ಬಡವರಿಗೆ ಉಚಿತ ಅಡುಗೆ ಗ್ಯಾಸ್ ವಿತರಣೆ ತಾಲೂಕಿನ ಕುದುರೆಮನಿ ಗ್ರಾಮದಲ್ಲಿ ಇಂದು ನಡೆಯಿತು. ಬೆಳಗಾವಿ ಸಂಸದ ಸುರೇಶ ಅಂಗಡಿ ೨೩೮ ಬಡ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಿಸಿದರು.

ರಿಸರ ನಾಶ ಮಾಡಿ, ಕಾಡು ಕಡಿದು, ಸ್ವ -ಆರೋಗ್ಯ ಕೆಡಿಸಿಕೊಳ್ಳುವ ಗ್ರಾಮೀಣರ ಸಂಕಷ್ಟ ಪರಿಹರಿಸಲು ಕೇಂದ್ರ ಗ್ಯಾಸ ವಿತರಿಸುತ್ತಿದೆ. ಕುದುರೆಮನಿಯಲ್ಲಿ ಹೆಚ್ಚಿನ ಪರಿಶಿಷ್ಠ ಪಂಗಡದ ಜನರು ಕಂಡುಬರುವುದರಿಂದ ಗ್ಯಾಸ ವಿತರಣೆ ಇಲ್ಲಿಂದ ಪ್ರಾರಂಭಿಸಲಾಗಿದೆ. ಗ್ರಾಮೀಣ ಬಡತನ ನಿರ್ಮೂಲನೆಗೆ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ, ಆರ್ಥಿಕ ಮಟ್ಟ ಚೈತನ್ಯಕ್ಕೆ ಕೇಂದ್ರ ಬದ್ದವಾಗಿದೆ ಎಂದರು.

News Belgaum-ಬಡವರಿಗೆ ಉಚಿತ ಅಡುಗೆ ಗ್ಯಾಸ್ ವಿತರಣೆ 1RFO ಶ್ರೀನಾಥ ಕಡೋಲಕರ ಮಾತನಾಡಿ ಕಾಡು ಅಮೂಲ್ಯ ಸಂಪತ್ತು. ಉರುವಲಿಗಾಗಿ ಕಾಡು ಕಡಿಯುವ ಅನಿವಾರ್ಯತೆ ದೂರ ಮಾಡಿ ಗ್ರಾಮಸ್ಥರಿಗೆ ಗ್ಯಾಸ ಸರಕಾರ ಘೋಷಿಸಿದ್ದು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. ಮಾಜಿ ಎಂಎಲ್ ಎ ಮನೋಹರ ಕಡೋಲಕರ, RFO ಶ್ರೀನಾಥ ಕಡೋಲಕರ, ಧನಂಜಯ ಜಾಧವ, ಗ್ರಾಪಂ. ಅಧ್ಯಕ್ಷೆ ಅಶಿತಾ ಸುತಾರ, ಉಪಾಧ್ಯಕ್ಷೆ ಮಲ್ಲವ್ವ ನಾಯಕ, ವಿತರಕ ಕಂಪನಿಯ ತೇಜಸ್ವಿನಿ ಎಂಟರಪ್ರೈಸಸ್ ಮಾಲೀಕ ಆಶೀಶ ಕಾಲಕುಂದ್ರಿಕರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.////

The post ಬಡವರಿಗೆ ಉಚಿತ ಅಡುಗೆ ಗ್ಯಾಸ್ ವಿತರಣೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.