ಉತ್ತಮ ಸಮಾಜಕ್ಕಾಗಿ

ಬನ್ನಿ… ಎಲ್ಲರೂ ಸೇರಿ ಆತ್ಮಹತ್ಯೆಯನ್ನು ತಡೆಗಟ್ಟೋಣ

0

ಬನ್ನಿ… ಎಲ್ಲರೂ ಸೇರಿ ಆತ್ಮಹತ್ಯೆಯನ್ನು ತಡೆಗಟ್ಟೋಣ

ಬೆಳಗಾವಿ : ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಜಾತಿ ವ್ಯವಸ್ಥೆಯಂತೆ ಪ್ರಸ್ತುತ ದಿನಮಾನಗಳಲ್ಲಿ ಆತ್ಮಹತ್ಯೆಯೂ ಕೂಡ ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಇದು ಇಂದು ಜಾಗತಿಕ ಸಮಸ್ಯೆಯೂ ಆಗಿದೆ. ಆತ್ಮಹತ್ಯೆ ಎನ್ನುವುದು ಕಾಯಿಲೆ ರೀತಿಯಾಗಿ ಮಾರ್ಪಟ್ಟಿದೆ. ಈಗಿನ ದಿನಗಳಲ್ಲಿ ಆತ್ಮಹತ್ಯೆಯು ಸಮಾಜಕ್ಕೆ ಸವಾಲಾಗಿ ನಿಂತಿದೆ ಎಂದೇ ಹೇಳಬಹುದು.
ನಮ್ಮ ದೇಹದಲ್ಲಿನ ಪಂಚೇಂದ್ರಿಯಗಳಂತೆ ಮನೋವೈದ್ಯಕೀಯ ಶಿಕ್ಷಣದ ಪ್ರಕಾರ ನಮ್ಮ ಮನಸ್ಸು ಕೂಡ ೬ನೇ ಅಂಗವಾಗಿದೆ. ಮನಸ್ಸು ಸೂಕ್ಷ್ಮವಾದ ಅಂಗವಾಗಿದೆ. ಮನಸ್ಸಿನ ಮೇಲೆ ಬಿರುವ ಮಷ್ಷರಿಣಾಮಗಳಿಂದ ಜಗತ್ತಿನ ತುಂಬ ಹದಿಹರೆಯದವರಿಂದ ಹಿಡಿದು ವಯೋವೃದ್ಧರವರೆಗೆ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುವುದು ಕಂಡು ಬರುತ್ತಿರುವುದು ವಿಷಾದನೀಯವಾಗಿದೆ.
ವ್ಯಕ್ತಿಯು ತನ್ನನ್ನು ತಾನೇ ಹತ್ಯೆ ಮಾಡಿಕೊಳ್ಳುವುದಕ್ಕೆ ಆತ್ಮಹತ್ಯೆ ಎನ್ನುತ್ತೇವೆ. ವಿಶ್ವ ಆರೋಗ್ಯ ಸಮೀಕ್ಷೆಯ ಪ್ರಕಾರ ವರ್ಷದಲ್ಲಿ ವಿಶ್ವದಾದ್ಯಂತ ಸುಮಾರು ೮ ಲಕ್ಷ ಜನ ಪ್ರತಿ ೪೦ ಸೆಕೆಂಡುಗಳಿಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷಕ್ಕೆ ಶೇ.೧೭ ರಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಶೇ.೯೦ ರಷ್ಟು ಜನರು ಮಾನಸಿಕ ಖಾಯಿಲೆಯಿಂದ ಬಳಲುವವರು ಆತ್ಮಹತ್ಯೆಗೆ ತುತ್ತಾಗುತ್ತಿದ್ದಾರೆ.
ಇಂಡಿಯನ್ ಪೆನಲ್‌ಕೋಡ ೩೦೯ ಸೆಕ್ಷನ್‌ರ ಪ್ರಕಾರ ಯಾರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೋ ಅವರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ದಂಡವನ್ನು ವಿಧಿಸುವ ಕಾನೂನು ಇದೆ.
ಈ ಎಲ್ಲ ವರದಿಗಳನ್ನು ಮನದಲ್ಲಿಟ್ಟುಕೊಂಡು ಮನೋವೈದ್ಯಕೀಯ ಶಿಕ್ಷಣವು ಈ ಸವಾಲನ್ನು ಸ್ವೀಕರಿಸಿ ಆತ್ಮಹತ್ಯೆ ತಡೆಗಟ್ಟುವಲ್ಲಿ ವಿಧಾನಗಳನ್ನು ಕಂಡುಕೊಂಡು ಕಾರ್ಯನಿರ್ವಹಿಸುತ್ತಿದೆ. ಆತ್ಮಹತ್ಯೆಗೆ ಪ್ರಮುಖ ಕಾರಣವೆಂದರೆ ಖಿನ್ನತೆ. ಹಾಗೂ ಇದಕ್ಕೆ ಸಹಾಯಕವಾದ ಇತರೆ ಅಂಶಗಳೆಂದರೆ ಮಾನಸಿಕ ಕಾಯಿಲೆಗಳಾದ ಭೈಫೋಲಾರ್ ಡಿಸ್ಸಾಡರ್ ಮತ್ತು ಸ್ಕಿಜೋಫ್ರಿನಿಯಾ.News Belgaum-ಬನ್ನಿ... ಎಲ್ಲರೂ ಸೇರಿ ಆತ್ಮಹತ್ಯೆಯನ್ನು ತಡೆಗಟ್ಟೋಣ 1

ಆತ್ಮಹತ್ಯೆಗೆ ಕಾರಣಗಳು:

ಖಿನ್ನತೆ, ಪೂರ್ವದಲ್ಲಿ ಆತ್ಮಹತ್ಯೆ ಪ್ರಯತ್ನಗಳು, ಮಾದಕ ವಸ್ತು ಮತ್ತು ಮದ್ಯವ್ಯಸನಗಳ ಬಳಕೆ, ಕಾರಾಗೃಹ ವಾಸ., ಕೌಟುಂಬಿಕ ಇತಿಹಾಸ, ಕಳಪೆ ಉದ್ಯೋಗ ಭದ್ರತೆ ಅಥವಾ ಕಡಿಮೆ ಮಟ್ಟದ ಕೆಲಸದ ತೃಪ್ತಿ, ಗಂಭೀರ ವೈದ್ಯಕೀಯ ಸ್ಥಿತಿಯನ್ನು ಗುರುತಿಸುವುದು (ಉದಾ: ಕ್ಯಾನ್ಸರ್ ಅಥವಾ ಹೆಚ್.ಐ.ವಿ ಇತ್ಯಾದಿಗಳು), ಸಾಮಾಜಿಕವಾಗಿ ಬೇರ್ಪಡಿಸುವುದು ಅಥವಾ ಬೆದರಿಸುವಿಕೆಗೆ ಬಲಿಯಾಗುವುದು, ಆತ್ಮಹತ್ಯೆ ನಡವಳಿಕೆಗೆ ಬಳಗಾಗುವುದು.

ವಿದ್ಯಾರ್ಥಿ/ ಯುವಕರ ಆತ್ಮಹತ್ಯೆಗೆ ಕಾರಣಗಳು:

ಪರಿಕ್ಷೇಯಲ್ಲಿ ಅನುತ್ತೀರ್ಣ, ಕಾಲೇಜಿನಲ್ಲಿ ರಾಗಿಂಗ್ ಮಾಡುವುದು, ಪ್ರೀತಿಯಲ್ಲಿ ಮೋಸ, ಹೊಂದಾಣಿಕೆ ಸಮಸ್ಯೆ, ಆಂತಕ ಮತ್ತು ಭಯದ ವರ್ತನೆಗಳು, ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವುದು, ಮಾದಕದ್ರವ್ಯ ಮತ್ತು ವ್ಯಸನಿಗಳಿಗೆ ತುತ್ತಾಗುವುದು.

ಇತರೆ ಸಾಮಾಜಿಕ ಕಾರಣಗಳು:

ನಿರೂಧ್ಯೋಗ ಸಮಸ್ಯೆ, ವರದಕ್ಷಿಣೆ ಕಿರುಕುಳ, ಒತ್ತಡ ಮತ್ತು ಸಮಾಜದಲ್ಲಿ ಕೀಳು ಭಾವನೆ, ಅರ್ಥಿಕ ಸಮಸ್ಯೆ., ಇತರೆ ಸಾಮಾಜಿಕ ಕಾರಣಗಳು.
News Belgaum-ಬನ್ನಿ... ಎಲ್ಲರೂ ಸೇರಿ ಆತ್ಮಹತ್ಯೆಯನ್ನು ತಡೆಗಟ್ಟೋಣ 2

ಆತ್ಮಹತ್ಯೆ ತಡೆಗಟ್ಟುವ ವಿಧಾನಗಳು:

ಸಮುದಾಯದ ಜನರಲ್ಲಿ ಜಾಗೃತಿ ಶಿಕ್ಷಣವನ್ನು ನೀಡುವುದು, ಸಮಸ್ಯೆಯನ್ನು ಆಲಿಸುವುದು ಮತ್ತು ಗೌಪ್ಯವಾಗಿಡುವುದು, ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಆಗುವ ಹಾನಿಗಳ ಬಗ್ಗೆ ತಿಳಿ ಹೇಳುವುದು, ಆತ್ಮಹತ್ಯೆಗೆ ಒಳಪಡುವ ವ್ಯಕ್ತಿಯೊಂದಿಗೆ ಮದ್ಯಸ್ಥಿಕೆ ವಹಿಸಿ ಅವರನ್ನು ಚಿಕಿತ್ಸೆ ಕಡೆಗೆ ಕರೆತರುವುದು, ವ್ಯಕ್ತಿ ಮತ್ತು ಕುಟುಂಬದ ಸದಸ್ಯರಿಗೆ ಆಪ್ತ ಸಮಾಲೋಚನೆಯನ್ನು ಮಾಡುವುದು, ವ್ಯಕ್ತಿಯನ್ನು ಸಕಾರಾತ್ಮಕ ಚಿಂತನೆಗೆ ಒಳಪಡಿಸಿ ಸರಿಯಾದ ದಾರಿಗೆ ತರುವುದು, ಸಮಸ್ಯೆಯುತ ವ್ಯಕ್ತಿಗಳಿಗೆ ಮಾತನಾಡಲು ಅವಕಾಶಗಳನ್ನು ನೀಡುವುದು, ನಕಾರಾತ್ಮಕ ಮತ್ತು ಅಪರಾಧ ಭಾವನೆಗಳನ್ನು ನಿಲ್ಲಿಸುವಂತೆ ಸಲಹೆ ನೀಡುವುದು,

ಆತ್ಮಹತ್ಯೆ ಆಲೋಚನೆಯಿಂದ ಹೊರಬರುವ ಅಂಶಗಳು:

ವ್ಯಕ್ತಿಯ ವಾಸಸ್ಥಳವನ್ನು ಬದಲಾಯಿಸಿ ಮನರಂಜನೆ ಕಡೆಗೆ ವಾಲಿಸುವುದು, ಕುಟುಂಬದ ಸದಸ್ಯರು ಉತ್ತಮ ಸಂವಹನ ಮತ್ತು ಅವಲೋಕನವನ್ನು ಮಾಡುವುದು, ವ್ಯಕ್ತಿಯನ್ನು ಏಕಾಂಗಿತನದಿಂದ ದೂರವಿಡುವುದು. ದಿನನಿತ್ಯ ವ್ಯಾಯಾಮ, ಧಾನ್ಯಾಬ್ಯಾಸದಲ್ಲಿ ತೊಡಗಿಸುವುದು. ಪ್ರೇಕ್ಷಣಿಯ ಸ್ಥಳಗಳ ಭೇಟಿ ಅಥವಾ ಹಳೆಯ ಒಳ್ಳೆಯ ನೆನಪುಗಳನ್ನು ನೆನಪಿಸುವುದು, ಇಷ್ಟವಾದ ಆಹಾರ ಸೇವಿಸುವುದು, ಮನೋವೈದ್ಯರ ಸಲಹೆ ಮತ್ತು ಆಪ್ತಸಮಾಲೋಚನೆಯನ್ನು ಪಡೆದುಕೊಳ್ಳುವುದು, ಕುಟುಂಬದ ಸದಸ್ಯರು ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಮತ್ತು ಬೆಂಬಲಿಸುವುದು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸೌಲಭ್ಯಗಳು:

ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಈ ಬಗ್ಗೆ ಜಾಗೃತಿ, ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ವಿವಿಧ ಸೌಲಭ್ಯಗಳು ಲಭ್ಯವಿದೆ. ಉತ್ತಮವಾದ ಮನೋವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿಗಳು, ಆಪ್ತಸಮಾಲೋಚನೆಯ ಸೇವೆಗಳು, ಮನಸ್ಸಿನ ಆರೋಗ್ಯ ಶಿಕ್ಷಣ, ವೃತಿಪರ ತರಬೇತಿಯ ಶಿಕ್ಷಣ, ಸರಕಾರದ ಸೌಲಭ್ಯಗಳ ಕುರಿತು ಮಾಹಿತಿ ಶಿಕ್ಷಣ, ಮನೆ ಭೇಟಿ ಕಾರ್ಯಕ್ರಮ, ಮಾನಸಿಕ ಆರೋಗ್ಯ ಶಿಬಿರಗಳು, ಆರೋಗ್ಯ ಸಹಾಯವಾಣಿ (೧೦೪) ಈ ಎಲ್ಲ ಸೌಲಭ್ಯಗಳು ಲಭ್ಯವಿದೆ.
ಆತ್ಮಹತ್ಯೆಯನ್ನು ತಡೆಗಟ್ಟಲು ಹಾಗೂ ಈ ಕುರಿತು ಜಾಗೃತಿ ಮೂಡಿಸಲು ವಿಶ್ವದಾದ್ಯಂತ ಪ್ರತಿ ವರ್ಷ ಸೆ.೧೯ ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ದೇಶದ ಎಲ್ಲ ರಾಜ್ಯ ಹಾಗೂ ಜಿಲ್ಲೆಗಳಲ್ಲಿಯೂ ಕೂಡ ಸೆ.೧೯ ರಂದು ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಾರ್ಯಾಗಾರ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ.
ಈ ವರ್ಷ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಕಾರ್ಯಕ್ರಮದ ಘೋಷಣೆ “ “Cycle Around the Globe” ಎಂಬುದಾಗಿದೆ. ಸಮುದಾಯದ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಎಲ್ಲರೂ ಕೈಜೋಡಿಸೋಣ. ಬಲಿಷ್ಠ ಹಾಗೂ ಸಮೃದ್ಧ ವಿಶ್ವ ನಿರ್ಮಾಣ ಮಾಡೋಣ.
ಲೇಖಕರು:
ಶ್ರೀಮತಿ. ಸವಿತಾ. ಎ. ತಿಗಡಿ
ಮನೋವೈದ್ಯಕೀಯ ಸಮಾಜ ಕಾರ್ಯಕರ್ತರು
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಬೆಳಗಾವಿ.

The post ಬನ್ನಿ… ಎಲ್ಲರೂ ಸೇರಿ ಆತ್ಮಹತ್ಯೆಯನ್ನು ತಡೆಗಟ್ಟೋಣ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.