ಉತ್ತಮ ಸಮಾಜಕ್ಕಾಗಿ

ಬರಪೀಡಿತ ತಾಲೋಕು ಘೋಷಣೆ

0

ಬರಪೀಡಿತ ತಾಲ್ಲೂಕು ಘೋಷಣೆ
ಹಾಸನ ಅ.11: ಜಿಲ್ಲೆಯ ಅರಸೀಕೆರೆ ತಾಲ್ಲೂಕು, ಚನ್ನರಾಯಪಟ್ಟಣ ತಾಲ್ಲೂಕು ಹಾಗೂ ಬೇಲೂರು ತಾಲ್ಲೂಕಿನ ಹಳೇಬೀಡು, ಹಗರೆ, ಬಿಕ್ಕೋಡು ಹೋಬಳಿಗಳಲ್ಲಿ ಉಂಟಾಗಿರುವ ಮಳೆಯ ಅಭಾವದ ಹಿನ್ನೆಲೆಯಲ್ಲಿ 2018ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯ ಅರಸೀಕೆರೆ, ಬೇಲೂರು ಹಾಗೂ ಚನ್ನರಾಯಪಟ್ಟಣ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದೆ, ಸದರಿ ತಾಲ್ಲೂಕುಗಳಲ್ಲಿ ಉಂಟಾಗಿರುವ ಬೆಳೆ ನಷ್ಟವನ್ನು ಮೊಬೈಲ್ ಆಪ್ ಮುಖಾಂತರ ಹಾನಿಯಾಗಿರುವ ಬೆಳೆಗಳ ಛಾಯಚಿತ್ರಗಳನ್ನು ತೆಗೆದು ಉಡಿouಟಿಜ ಖಿಡಿuಣhiಟಿg ಮೂಲಕ ಬೆಳೆ ನಷ್ಟವನ್ನು ಅಂದಾಜಿಸಲಾಗಿರುತ್ತದೆ. ಕೃಷಿ ಇಲಾಖೆಯ ವರದಿಯಂತೆ ಅರಸೀಕೆರೆ ತಾಲ್ಲೂಕಿನಲ್ಲಿ 13938 ಹೆಕ್ಟೇರ್, ಬೇಲೂರು ತಾಲ್ಲೂಕಿನಲ್ಲಿ 6525 ಹೆಕ್ಟೇರ್ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 3850 ಹೆಕ್ಟೇರ್ ಒಟ್ಟು 24313 ಹೆಕ್ಟೇರ್‍ಗಳಷ್ಟು ಪ್ರದೇಶದಲ್ಲಿ ಕೃಷಿ ಬೆಳೆಗಳು ಹಾನಿಯಾಗಿರುತ್ತವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.

ಕುಡಿಯುವ ನೀರು ಸರಬರಾಜು ಸಂಬಂಧ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ 09 ಹಾಗೂ ಬೇಲೂರು ತಾಲ್ಲೂಕಿನ 02 ಒಟ್ಟು 11 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುತ್ತದೆ. ಅರಸೀಕೆರೆ ತಾಲ್ಲೂಕಿನ 17 ಹಾಗೂ ಬೇಲೂರು ತಾಲ್ಲೂಕಿನ 04 ಒಟ್ಟು 21 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುತ್ತದೆ.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಒಟ್ಟು 652921 ಟನ್‍ಗಳಷ್ಟು ಮೇವು ಲಭ್ಯವಿದ್ದು, ಮುಂದಿನ 25 ವಾರಗಳವರೆಗೆ ನಿಭಾಯಿಸಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.[ category hssan news   ]
***

The post ಬರಪೀಡಿತ ತಾಲೋಕು ಘೋಷಣೆ appeared first on Prajaa News.

Source link

ಬರಪೀಡಿತ ತಾಲೋಕು ಘೋಷಣೆ

Leave A Reply

 Click this button or press Ctrl+G to toggle between Kannada and English

Your email address will not be published.