ಉತ್ತಮ ಸಮಾಜಕ್ಕಾಗಿ

ಬಾಡಿಗೆದಾರನೊಂದಿಗೆ ಪತ್ನಿ ಎಸ್ಕೇಪ್, ಪತಿಯಿಂದ ಪ್ರತಿಭಟನೆ

0

ಬಾಡಿಗೆದಾರನೊಂದಿಗೆ ಪತ್ನಿ ಎಸ್ಕೇಪ್, ಪತಿಯಿಂದ ಪ್ರತಿಭಟನೆ

ಜಾಮೀನು ಕೊಟ್ಟಿದ್ದಕ್ಕೆ ಸಹಕಾರಿ ಬ್ಯಾಂಕ್ ನವರು ಪೀಡಿಸುತ್ತಿದ್ದಾರೆ ಎಂದು ಆರೋಪಿಸುತ್ತಾ ಧಾರವಾಡ ನಿವಾಸಿಯೊಬ್ಬ ತನ್ನ ಇಬ್ಬರು ಮಕ್ಕಳ ಜೊತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿರುವ ಘಟನೆ ನಡೆದಿದೆ.

ಧಾರವಾಡ : ಪರಿಚಿತನಂತೆ ಬಂದ ವ್ಯಕ್ತಿಯೊಬ್ಬ ಕೆಲ ವರ್ಷಗಳ ಕಾಲ ಅಂಗಡಿ ಬಾಡಿಗೆ ಪಡೆದು ಈತನ ಹೆಂಡತಿಯ ಜೊತೆ ಹಣ ಆಭರಣ ಸೇರಿದಂತೆ ಸುಮಾರು ನಾಲ್ಕೈದು ಲಕ್ಷ ಹಣ ದೋಚಿಕೊಂಡ ಹೋಗಿದ್ದಾನಂತೆ.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೇರಿದಂತೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹೆಂಡತಿಯಿಂದ ಮೋಸ ಹೋದ ಪತಿ ಮಂಜುನಾಥ ಪೈ ತನ್ನ ಅಸಹಾಯಕತೆ ತೋಡಿಕೊಂಡಿದ್ದಾನೆ‌.

ಕಳೆದು ನಾಲ್ಕು ವರ್ಷದ ಹಿಂದೆ ಮಂಜುನಾಥ ಪೈ ಹೊಟೇಲ್ ಮಳಿಗೆಯಲ್ಲಿದ್ದ ಅಂಗಡಿ ಬಾಡಿಗೆ ಪಡೆದ ಅಭಿಷೇಕ ಬೋಗಾರ ಎಂಬ ವ್ಯಕ್ತಿ ಮಂಜುನಾಥ ಪೈ ಅವರ ಪತ್ನಿ ನೀತಾಳೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದಾನೆ.

ಹಲವು ಕಡೆ ನೀತಾ ಮತ್ತು ಅಭಿಷೇಕ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಹಣ ಪಡೆದು ಹಣಕ್ಕೆ ಮಂಜುನಾಥ ಪೈ ಅವರನ್ನು ಜಾಮೀನುಗೊಳಿಸಿ ಇದ್ದಕ್ಕಿದ್ದಂತೆ ಒಂದು ದಿನ ಪರಾರಿಯಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ಈ‌ ಕುರಿತು ಮಂಜುನಾಥ ಪೈ ತನ್ನ ಎರಡು ಮಕ್ಕಳ ಜೊತೆಗೆ ಬದುಕು ನಡೆಸುತ್ತಿದ್ದಾರೆ. ಆದರೆ ಸಾಲ ನೀಡಿದ ಬ್ಯಾಂಕ್ ಸಹಕಾರ ಸಂಘದವರು ಈಗ ಮಂಜುನಾಥನಿಗೆ ಸಾಲ ಮರು ಪಾವತಿಸುವಂತೆ ಒತ್ತಾಯ ಮಾಡುತ್ತಿರುವುದರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನ್ಯಾಯಕ್ಕಾಗಿ ಧರಣಿ ಕೂರಲು ಸಿದ್ದರಾಗಿದ್ದಾರೆ. ////

WebTitle : ಬಾಡಿಗೆದಾರನೊಂದಿಗೆ ಪತ್ನಿ ಎಸ್ಕೇಪ್, ಪತಿಯಿಂದ ಪ್ರತಿಭಟನೆ – Wife escape with a rented man, protests by husband

>>> ಕ್ಲಿಕ್ಕಿಸಿ : Karnataka Crime News | Kannada Crime News | Dharwad News Kannada

Kannada Crime News

The post ಬಾಡಿಗೆದಾರನೊಂದಿಗೆ ಪತ್ನಿ ಎಸ್ಕೇಪ್, ಪತಿಯಿಂದ ಪ್ರತಿಭಟನೆ appeared first on News Belgaum.

Source link

ಬಾಡಿಗೆದಾರನೊಂದಿಗೆ ಪತ್ನಿ ಎಸ್ಕೇಪ್, ಪತಿಯಿಂದ ಪ್ರತಿಭಟನೆ

Leave A Reply

 Click this button or press Ctrl+G to toggle between Kannada and English

Your email address will not be published.