ಉತ್ತಮ ಸಮಾಜಕ್ಕಾಗಿ

ಬಾಲಕರಿಂದಲೇ ಬಾಲಕನ ಮೇಲೆ ಅತ್ಯಾಚಾರ

0

ಬಾಲಕರಿಂದಲೇ ಬಾಲಕನ ಮೇಲೆ ಅತ್ಯಾಚಾರ

ಬೆಳಗಾವಿ : ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಬಾಲಕರು ಸೇರಿ ಒಬ್ಬ ಬಾಲಕನ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಶಾಲೆ ಮುಗಿಸಿ ಮನೆಗೆ ಹಿಂದಿರುಗುವಾಗ ಎದುರಾದ ಇಬ್ಬರು ಯುವಕರು ತಿನ್ನಲು ಹಣ್ಣು ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ ಅತ್ಯಾಚಾರ ವೆಸಗಿರುವ ಬಗ್ಗೆ ನಂದಗಡ ಪೋಲಿಸ್  ಠಾಣೆಯಲ್ಲಿ ದೂರು ದಾಖಲಾಗಿದೆ.

ಅತ್ಯಾಚಾರ ವೆಸಗಿದ ಬಾಲಕರಲ್ಲಿ ಒಬ್ಬನು 14 ವರ್ಷದವನಾದರೆ , ಇನ್ನೊಬ್ಬ 17 ವರ್ಷದವನು ಎಂದು ತಿಳಿದು ಬಂದಿದೆ. ಸದ್ಯ ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡೆಸಿದ್ದಾರೆ.

ಅತ್ಯಾಚಾರದ ನಂತರ ಬಾಲಕನಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಆ ನಂತರ ನಡೆದ ಘಟನೆಯನ್ನು ಬಾಲಕ ತಮ್ಮ ಪೋಷಕರಿಗೆ ತಿಳಿಸಿದ್ದಾನೆ. ಪೋಷಕರು ಬಾಲಕನನ್ನು ಬೆಳಗಾವಿಯ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ನಂತರ ಪೊಲೀಸರಿಗೆ ದೊರು ನೀಡಿದ್ದಾರೆ.. ///

The post ಬಾಲಕರಿಂದಲೇ ಬಾಲಕನ ಮೇಲೆ ಅತ್ಯಾಚಾರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.