ಉತ್ತಮ ಸಮಾಜಕ್ಕಾಗಿ

ಬಾಲಿವುಡ್‌‌ ಸಿನಿಮಾದಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ ಆ್ಯಕ್ಷನ್ ಹೀರೋ ಜಾಕಿಚಾನ್‌!

0
ಕುಂಗ್‌ ಫೂ ಯೋಗದ ಪ್ರಚಾರಕ್ಕಾಗಿ ಭಾರತಕ್ಕೆ ಆಗಮಿಸಿರುವ ಜಾಕಿಚಾನ್‌ರ ಸಂವಾದ ಕಾರ್ಯಕ್ರಮದಲ್ಲಿ ಜಾಕಿಚಾನ್‌ ತಮ್ಮ ಅಂತರಾಳದ ಆಸೆಯನ್ನು ಮುಂದಿಟ್ಟಿದ್ದಾರೆ. ರೊಮ್ಯಾಂಟಿಕ್‌ ಭಾರತೀಯ ಸಿನಿಮಾ ಮಾಡಬೇಕೆಂಬ ಆಸೆ ಇದೆ ಎಂದಿದ್ದಾರೆ. ಬಾಲಿವುಡ್‌ನಲ್ಲಿ ನಟಿಸಲು 11 ವರ್ಷಗಳ ಹಿಂದೆ ಪ್ರಯತ್ನಿಸಿದ್ದರಂತೆ. ಆದ್ರೆ ಅದು ಮೆಲೋಡ್ರಾಮ ಸಿನಿಮಾವಾಗಿದ್ದರಿಂದ ಸೂಟ್‌ ಆಗಿರ್ಲಿಲ್ಲವಂತೆ.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅಂತಾರಾಷ್ಟ್ರೀಯ ಆ್ಯಕ್ಷನ್‌ ಸ್ಟಾರ್‌ ಜಾಕಿಚಾನ್‌ರ ಅಭಿಮಾನಿ. ಹಾಗಾಗಿ ಶಿಲ್ಪಾ ಜಾಕಿಚಾನ್‌ರ ಚರಣ ಸ್ಪರ್ಶ ಮಾಡುವ ಮೂಲಕ ತಮಗೆ ಅವರ ಬಗ್ಗೆ ಇರುವ ಗೌರವವನ್ನು ಸೂಚಿಸಿದ್ದಾರೆ. ಸಂವಾದದಲ್ಲಿ ಮಾತನಾಡಿದ ಶಿಲ್ಪಾ, ನಾನು ಇಲ್ಲಿಗೆ ಓರ್ವ ನಟಿಯಾಗಿ ಅಥವಾ ಯೋಗ ಉತ್ಸಾಹಿಯಾಗಿ ಬಂದಿಲ್ಲ. ಬದಲಾಗಿ ಜಾಕಿಚಾನ್‌ರ ಅಭಿಮಾನಿಯಾಗಿ ಬಂದಿದ್ದೇನೆ ಎಂದಿದ್ದಾರೆ.

ಜಾಕಿಚಾನ್‌ರಿಂದಾಗಿ ನಾನು ನಟಿಯಾದೆ. ನನಗೆ ಜೀವನದಲ್ಲಿ ಸ್ಟಾರ್‌ಗಳ ಬಗ್ಗೆ ಕ್ರೇಜ್‌ ಇಲ್ಲ. ಆದ್ರೆ ಜಾಕಿಚಾನ್‌ ಒಬ್ಬರನ್ನು ಬಿಟ್ಟು ಅಂತಾ ಹೇಳುತ್ತಾ ಜಾಕಿಚಾನ್‌ರ ಚರಣ ಸ್ಪರ್ಶ ಮಾಡಿದ್ರು.

Leave A Reply

 Click this button or press Ctrl+G to toggle between Kannada and English

Your email address will not be published.