ಉತ್ತಮ ಸಮಾಜಕ್ಕಾಗಿ

ಬಿಜೆಪಿ, ಎಂಇಎಸ್ ಕಾರ್ಯಕರ್ತರಿಂದ ಡಾ. ಅಂಜಲಿಗೆ ನಿಂಬಾಳ್ಕರ ಬೆಂಬಲ: ಗ್ರಾಮಸ್ಥರ ಆಶೀರ್ವಾದ

0

ಬೆಳಗಾವಿ (Tarun Kranti): ಕಾಡಿನಿಂದಾವೃತ ಖಾನಾಪುರ ವಿಧಾನಸಭಾ ಮತಕ್ಷೇತ್ರದಲ್ಲಿ MES & BJP ಯಲ್ಲಿನ ಆಂತರಿಕ ಗುದ್ದಾಟ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲ & ಬೇಸರವುಂಟು ಮಾಡಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ತಮ್ಮ ನಾಯಕರಲ್ಲಿನ ಏಕಮೇವ ಅಧಿಕಾರ ದಾಹ ಮನೋಭಾವನೆಯಿಂದ ಕಾರ್ಯಕರ್ತರು ಪಕ್ಷ ತೊರೆಯುವಂತೆ ಮಾಡಿದೆ ಎಂದು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ನಿಲಾವಡೆ ಗ್ರಾಮಪಂಚಾಯತಿಯ ಸದಸ್ಯ ಶಂಕರ ಪರುಶುರಾಮ ಶಾಸ್ತ್ರಿ ಹಾಗೂ 15 ಕ್ಕೂ ಹೆಚ್ಚು MES ನ ಕಾರ್ಯಕರ್ತರು ಕಾಂಗ್ರೆಸ್‍ ಕಡೆಗರ ಮುಖ ಮಾಡಲು ಇದು ಮುಖ್ಯ ಕಾರಣವೆಂದು ಸಾರ್ವಜನಿಕ ಚರ್ಚೆ ವ್ಯಕ್ತವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ ಅವರು ಹಾಗೂ ಪಕ್ಷದ ಪ್ರಮುಖ ಪ್ರಶಾಂತ್ ಐಹೊಳೆ ಅವರ ಸಮ್ಮುಖದಲ್ಲಿ ಡಾ.ಅಂಜಲಿ ಅವರನ್ನು ಭೇಟಿ ಮಾಡಿದ MES ಹಾಗೂ BJP ಯ ಕಾರ್ಯಕರ್ತರು ಕಾಂಗ್ರೆಸ್‍ಗಾಗಿ ಕೆಲಸ ಮಾಡುವ ಪಣ ತೊಟ್ಟರು.

ಕಳೆದ 15 ವರ್ಷಗಳಿಂದ ಎಳ್ಳಷ್ಟು ಅಭಿವೃದ್ಧಿ ಕಾರ್ಯ ನಮ್ಮ ಹಳ್ಳಿಗಳಲ್ಲಿ ಆಗಿಲ್ಲ ಎಂದು ಪ್ರಮುಖ ನಾಯಕರು ಆರೋಪಿಸುತ್ತಾರೆ. ಹೀಗಾಗಿ ತಾವು ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರವರ ಬೆಂಬಲಕ್ಕೆ ನಿಂತಿದ್ದು, ಅವರಿಂದ ತಮ್ಮ ಹಳ್ಳಿಗಳ ಜನರಿಗೆ ಸಹಾಯವಾಗಲಿದೆ ಎಂದು ಶಂಕರ್ ಪರುಶುರಾಮ ಶಾಸ್ತ್ರಿ ವಿಶ್ವಾಸ ವ್ಯಕ್ತ ಪಡಿಸಿದರು.

ಮತದಾನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗ ಡಾ.ಅಂಜಲಿ ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರಚಾರ ನಡೆಸಿದ್ದಾರೆ. ಗರ್ಲಗುಂಜಿ ಜಿಲ್ಲಾ ಪಂಚಾಯತಿಯಲ್ಲಿನ ಕುಪಟಗಿರಿ, ಬಲೋಗಾ ಹಾಗೂ ದೊಡ್ಡ ಹೊಸೂರು ಗ್ರಾಮಗಳಲ್ಲಿ ಮುಂಜಾನೆ 7 ಘಂಟೆಯಿಂದಲೇ ಪ್ರಚಾರ ಕಾರ್ಯ ಆರಂಭಿಸಿದ ಡಾ.ಅಂಜಲಿಯವರಿಗೆ ಕುಂಕುಮವಿಟ್ಟು ಆರತಿಮಾಡಿ ಜನತೆ ಸ್ವಾಗತಿಸಿದರು.

ಅಧಿಕಾರದ ಆಸೆಗಾಗಿ ತಾವೂ ರಾಜಕೀಯಕ್ಕೆ ಬಂದಿಲ್ಲ. ಆದರೆ ಜನಸೇವೆಗಾಗಿ ಅಧಿಕಾರ ಬೇಕು. ಹೀಗಾಗಿ ವೋಟು ನೀಡಿ ಬೆಂಬಲಿಸುವಂತೆ ಡಾ. ಅಂಜಲಿ ಮನವಿ ಮಾಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.