ಉತ್ತಮ ಸಮಾಜಕ್ಕಾಗಿ

ಬಿಜೆಪಿ ಬಂಡಾಯ ಅಭ್ಯರ್ಥಿಗಳ ಮೇಲೆ ಪಕ್ಷ ಕ್ರಮ: ಸುರೇಶ ಅಂಗಡಿ ಎಚ್ಚರಿಕೆ

0

ಬೆಳಗಾವಿ (Tarun Kranti): ಬಿಜೆಪಿ ವಿಭಾಗೀಯ ಮಾಧ್ಯಮ ಕೇಂದ್ರವನ್ನು ಇಂದು ಪೊಲೀಸ್ ಭವನ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಸಂಸದ ಸುರೇಶ ಅಂಗಡಿ ಉದ್ಘಾಟಿಸಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಸುರೇಶ ಅಂಗಡಿ ಬೆಳಗಾವಿ ವಿಭಾಗದ ಮಾಧ್ಯಮ ಕಚೇರಿ ಬಿಜೆಪಿಯ ಕಾರ್ಯಕ್ರಮಗಳನ್ನು ಹೊರಜಗತ್ತಿಗೆ ತೆರೆದಿಡಲಿದೆ. ಜಿಲ್ಲೆಯ 18 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. ಕಾಂಗ್ರೆಸ್ ಜನತೆಗೆ ಬರಿ <strong>‘ಲಾಲಿಪಾಪ್’</strong> ವಿಶ್ವವಿದ್ಯಾಲಯ, ಸುವರ್ಣಸೌಧ, ಬೆಳಗಾವಿ ನಗರಕ್ಕೆ ನೂರು ಕೋಟಿ ಅನುದಾನ ಕೊಟ್ಟಿದ್ದ ಯಡಿಯೂರಪ್ಪ ಅವರು ಎಂದರು. ವಿಟಿಯು, ರೈಲ್ವೆ ಓವರ್ ಬ್ರಿಡ್ಜ್ಸ್, ರೈಲ್ವೇ ನಿಲ್ದಾಣ ಮತ್ತು ಏರ್ಪೋರ್ಟ್ ಅಭಿವೃದ್ಧಿ ಮತ್ತಿತರ ಜನಪರ ಕೆಲಸಗಳನ್ನು ಕೇಂದ್ರ ಸರಕಾರ ಬೆಳಗಾವಿಗೆ ನೀಡಿದೆ ಎಂದರು.

ದೇಶದ ಸಂಪತ್ತು:  ಬೆಂಗಳೂರು ದೇಶದ ಸಂಪತ್ತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕಾಂಗ್ರೆಸ್ ದುರಾಡಳಿತ ದೂರ ಮಾಡಲಾಗುವುದು ಎಂದರು.

ಸಂವಾದ:ನಾಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬೆಳಗಾವಿಗೆ ಆಗಮಿಸುವರು, ನಗರದ ಜೀರಗೆ ಸಭಾಂಗಣದಲ್ಲಿ ಮಹಿಳೆಯರೊಂದಿಗೆ ಸ್ಮೃತಿ ಸಂವಾದ ನಡೆಸಲಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಇಲ್ಲವೇ ಇಲ್ಲ. ಕೆಲವರು ತಾವೇ Un comfort ಭಾವಿಸಿಕೊಂಡು ಹೊರಹೋಗಿದ್ದಾರೆ. ಅಭ್ಯರ್ಥಿಗಳ ಪೈಕಿ ಯುವಕರಿಗೆ ಮನ್ನಣೆ ಕೊಡಲಾಗಿದೆ. ಬಂಡಾಯ ನಾಮಪತ್ರ ಸಲ್ಲಿಸಿರುವ ಕೆಲ ಅಭ್ಯರ್ಥಿಗಳ ಬಗ್ಗೆ ಪಕ್ಷ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು. ಜಿಲ್ಲೆಯಲ್ಲಿ 18 ಕ್ಷೇತ್ರಗಳನ್ನು ಗೆಲ್ಲದಿದ್ದರೆ, ನಾನು ಜವಾಬ್ದಾರನಲ್ಲ ನಮ್ಮ ಪಕ್ಷ ಜವಾಬ್ದಾರಿ ಹೊರುತ್ತದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಮೆ. 1ಕ್ಕೆ ಚಿಕ್ಕೋಡಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು. ಜಗದೀಶ್ ಹಿರಾಮನಿ, ರಾಜೇಂದ್ರ ಹರಕುಣಿ, ಬಸವರಾಜ ರೊಟ್ಟಿ, ಎಂ. ಬಿ. ಝಿರಲಿ, ಲೀನಾ ಟೋಪನ್ನವರ, ಜಯಶ್ರೀ ಮಾಳಗಿ ಇತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: