ಉತ್ತಮ ಸಮಾಜಕ್ಕಾಗಿ

ಬೀಡಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

0

ಬೀಡಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ

ಖಾನಾಪುರ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿರುವ, ಮಲೆನಾಡಿನ ಕಾಡಂಚಿನಲ್ಲಿರುವ ಖಾನಾಪುರ ತಾಲೂಕಿನ ಮಧ್ಯಭಾಗದಲ್ಲಿರುವ ಗ್ರಾಮ ಬೀಡಿ ಗ್ರಾಮ ಬಹಳ ಹೆಸರುವಾಸಿಯಾಗಿದೆ.

ಎಕೆಂದರೆ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ಬೀಡಿ ಗ್ರಾಮವನ್ನು ತಾಲುಕುವನ್ನಾಗಿ ಮಾಡಿಕೊಂಡು ತಾಲೂಕಾ ಕಚೇರಿಗಳನ್ನು ಅಲ್ಲಿ ನಡೆಸುತ್ತಿದ್ದರು. ಆ ಸಮಯದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೋದಲ ಕಿಚ್ಚುಹಚ್ಚಿದ ಎಂಬ ಹೆಗ್ಗಳಿಕೆಗೆ ಪಾತ್ರಳಾದ ಕಿತ್ತೂರು ರಾಣಿ ಚೆನ್ನಮ್ಮನ, ಬಲಗೈಬಂಟ ಗಂಡುಮೆಟ್ಟಿದ ನಾಡಿನ ಹುಲಿ ಎಂದು ಪ್ರಖ್ಯಾತಿ ಪಡೆದಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನು ಬೀಡಿ ತಾಲೂಕಾ ಕಚೇರಿಯನ್ನು ಬೆಂಕಿ ಹಚ್ಚಿ ಮಾಮಲೆದಾರನನ್ನು ಜೀವಂತ ಸುಟ್ಟಿದ್ದಾನೆಂದು ಹಚ್ಚಿನ ಪ್ರಸಿದ್ಧಿ ಪಡೆದಿತ್ತು. ಆದರೆ ಈಗ ಇದು ಖಾನಾಪುರ ತಾಲೂಕಿನ ಎರಡನೇ ಅತಿದೊಡ್ಡ ಗ್ರಾಮ ಪಂಚಾಯಿತಿಯಾಗಿದೆ.
News Belgaum-ಬೀಡಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ 2ಕರ್ನಾಟಕ ಸರಕಾರ ಪ್ರತಿವರ್ಷ ಗಾಂಧಿ ಜಯಂತಿಯಂದು ನೀಡಲಾಗುವ “ಗಾಂಧಿ ಪುರಸ್ಕಾರ” ನೀಡುತ್ತಾ ಬಂದಿದ್ದು, 2017-2018ನೇ ಸಾಲಿನ ಖಾನಾಪುರ ತಾಲೂಕಿನಲ್ಲಿ ಬೀಡಿ ಒಂದೇ ಗ್ರಾಮ ಪಂಚಾಯಿತಿ “ಗಾಂಧಿ ಪುರಸ್ಕಾರ”ವನ್ನು ಪಡೆದಿದೆ. ಯಾಕೆ ಈ ಪುರಸ್ಕಾರ ದೊರೆತಿದೆ ಎಂದರೆ ಗ್ರಾಪಂ ಮಾನದಂಡಗಳನ್ನು ಗಮನಿಸಿದಾಗ 2017-2018ನೇ ಸಾಲಿನಲ್ಲಿ ಬಜೆಟ್ ಘೋಷಣೆ, ಶೌಚಾಲು ನಿರ್ಮಾಣ, ಎನ್,ಆರ್.ಇ.ಜಿ ಅನುದಾನದ ಸದ್ಬಳಕೆ, 14ನೇ ಹಣಕಾಸು ಯೋಜನೆಯ ಅನುದಾನದ ಬಳಕೆ, ಲೆಕ್ಕಪತ್ರ ನಿರ್ವಹಣೆ, ಗ್ರಾಮಸಭೆ, ಸಾಮಾನ್ಯ ಸಭೆಗಳ ಸಮರ್ಪಕವಾದ ನಿರ್ವಹಣೆ, ಕ್ರೀಯಾ ಯೋಜನೆಯ ತಯಾರಿ ಹಾಗೂ ಶೇ.80% ರಷ್ಟು ತೆರಿಗೆ ವಸೂಲಿ ಸೇರಿದಂತೆ ಇನ್ನೂಳಿದ ಮಾನದಂಡಗಳ ಆದಾರದ ಮೇಲೆ ಈ ಗ್ರಾಮ ಪಂಚಾಯಿತಿಗೆ ಪುಸ್ಕಾರ ಲಭಿಸಿದೆ.
ಒಟ್ಟಾರೆಯಾಗಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಜಿಪಂ ಸದಸ್ಯರು, ತಾಪಂ ಸದಸ್ಯರು, ಗ್ರಾಪಂ ಅದ್ಯಕ್ಷರು, ಗ್ರಾಪಂ ಸದಸ್ಯರುಗಳ ಇಚ್ಛಾಶಕ್ತಿ ಹಾಗೂ ಸ್ಥಳಿಯರ ಪ್ರೋತ್ಸಾಹದಿಂದ ಗಾಂಧಿ ಪುರಸ್ಕಾರ ಲಭಿಸಲು ಸಾಧ್ಯವಾಗಿದೆ. ಈ ಪುರಸ್ಕಾರದಿಂದ ಗ್ರಾಮ ಪಂಚಾಯಿತಿ ಆಡಳಿತ ನಿರ್ವಹಣೆಗೆ 5ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಲಭಿಸಿದ್ದರಿಂದ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಶೀಮ ಹಟ್ಟಿಹೊಳಿ,ಖಾನಾಪುರ

The post ಬೀಡಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.