ಉತ್ತಮ ಸಮಾಜಕ್ಕಾಗಿ

ಬೆಳಗಾವಿ: ಇಂದಿರಾ ಕ್ಯಾಂಟೀನ್, ಅಡುಗೆಮನೆ ಉದ್ಘಾಟನೆ ಶಿರಾ, ಉಪ್ಪಿಟ್ಟು ಸವಿದ ಸಚಿವರು

0

ಬೆಳಗಾವಿ: ಇಂದಿರಾ ಕ್ಯಾಂಟೀನ್, ಅಡುಗೆಮನೆ ಉದ್ಘಾಟನೆ ಶಿರಾ, ಉಪ್ಪಿಟ್ಟು ಸವಿದ ಸಚಿವರು

ಬೆಳಗಾವಿ, ನಗರದಲ್ಲಿ ನಿರ್ಮಿಸಲಾಗಿರುವ ಎರಡು ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆಮನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ
ಜಾರಕಿಹೊಳಿ ಅವರು ಶನಿವಾರ(ಅ.6) ಉದ್ಘಾಟಿಸಿದರು.

ಬೆಳಗಾವಿ ನಗರದ ಎಪಿಎಂಸಿ ರಸ್ತೆಯಲ್ಲಿ ನೆಹರೂ ನಗರದ ಬಸ್ ನಿಲ್ದಾಣ ಬಳಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಅಡುಗೆ ಕೋಣೆಯನ್ನು ಸಚಿವರು ಉದ್ಘಾಟಿಸಿದರು.
ಕ್ಯಾಂಟೀನ್ ಉದ್ಘಾಟಿಸಿದ ಬಳಿಕ ಶಿರಾ-ಉಪ್ಪಿಟ್ಟು ಸವಿದ ಸಚಿವ ಜಾರಕಿಹೊಳಿ ಅವರು, ಈ ಯೋಜನೆಯಿಂದ ಬಡವರಿಗೆ ಕಡಿಮೆ ದರದಲ್ಲಿ ಊಟ-ಉಪಾಹಾರ ದೊರಕಲಿದೆ ಎಂದರು.
ಊಟ-ಉಪಾಹಾರದ ದರದ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು ನಂತರ ಅಡುಗೆ ಕೋಣೆಗೆ ಭೇಟಿ ನೀಡಿದರು.
ಇದಾದ ಬಳಿಕ ಆಂಜನೇಯ ನಗರದ ಕೆಎಂಎಫ್ ಡೇರಿ ಬಳಿಯ ಇಂದಿರಾ ಕ್ಯಾಂಟೀನ್ ಉದ್ಘಾಟಿಸಲಾಯಿತು.
ಶಾಸಕ ಅನಿಲ್ ಬೆನಕೆ, ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ, ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪಾಲಿಕೆ ಆಯುಕ್ತರಾದ ಶಶಿಧರ್ ಕುರೇರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

The post ಬೆಳಗಾವಿ: ಇಂದಿರಾ ಕ್ಯಾಂಟೀನ್, ಅಡುಗೆಮನೆ ಉದ್ಘಾಟನೆ ಶಿರಾ, ಉಪ್ಪಿಟ್ಟು ಸವಿದ ಸಚಿವರು appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.