ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಗ್ರಾಮೀಣ : ಸ್ವಚ್ಛತಾ ಹೀ ಸೇವಾ ಅಭಿಯಾನ

0

ಬೆಳಗಾವಿ ಗ್ರಾಮೀಣ : ಸ್ವಚ್ಛತಾ ಹೀ ಸೇವಾ ಅಭಿಯಾನ

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ಉಚಗಾಂವ ಗ್ರಾಮದ ಶ್ರೀ ಮಳೇಕರಣಿ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ ಇವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸ್ವಚ್ಛಭಾರತ ಅಭಿಯಾನವನ್ನು ಕೈಗೆತ್ತಿಕೊಂಡಿದ್ದು ಅವರ ಈ ಅಭಿಯಾನಕ್ಕೆ ನಾವೆಲ್ಲರೂ ಕೈಜೋಡಿಸಿ, ನಮ್ಮ ಪರಿಸರ, ನಮ್ಮ ಊರು, ನಮ್ಮ ದೇಶದ ಸ್ವಚ್ಛತೆಗಾಗಿ ಶ್ರಮಪಡಬೇಕೆಂದು ಹೇಳಿದರು.

ಧನಂಜಯ ಜಾದವ, ಚೇತನ ಪಾಟೀಲ, ಪವನ ದೇಸಾಯಿ, ಉಮಾಶಂಕರ ದೇಸಾಯಿ, ಯಲ್ಲಪ್ಪಾ ಗಾವಡೆ, ಅರ್ಜುನ ಧೋಂಬಳೆ, ಅರುಣ ಜಾಧವ, ಮಾರುತಿ ಖಾಂಡೇಕರ, ಚಾಲು ಫನಾಂಡಿಸ್, ಕಾಚು ಸಾವಂತ, ರವೀಂದ್ರ ದೇಸಾಯಿ, ರವೀಂದ್ರ ಹುಂದ್ರೆವಾಡಿಕರ, ಗಜಾನನ ಕಾಂಬಳೆ, ಮೋಹನ ಪಾವಸೆ, ಚಂದ್ರಕಾಂತ ದೇಸಾಯಿ, ಗಣಪತ ದೇಸಾಯಿ, ಜವಾಹರ ದೇಸಾಯಿ, ದೀಪಕ ದೇಸಾಯಿ, ಮಹೇಶ ದೇಸಾಯಿ, ರಾಜೇಶ ಪಾಟೀಲ ಹಾಗೂ ಗ್ರಾಮಸ್ತರು ಪಾಲ್ಗೊಂಡಿದ್ದರು. ///

The post ಬೆಳಗಾವಿ ಗ್ರಾಮೀಣ : ಸ್ವಚ್ಛತಾ ಹೀ ಸೇವಾ ಅಭಿಯಾನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.