ಉತ್ತಮ ಸಮಾಜಕ್ಕಾಗಿ

ಬೆಳಗಾವಿ ದಕ್ಷಿಣದಲ್ಲಿ ಭ್ರಷ್ಟಾಚಾರ & ತೋಳ್ಬಲ ವಿರೋಧಿ ಅಲೆ ಎಬ್ಬಿಸಿದ ಸ್ವತಂತ್ರ ಅಭ್ಯರ್ಥಿ ಸುಜಿತ ಮುಳಗುಂದ

0

ಬೆಳಗಾವಿ (Tarun Kranti): ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಈಗ ಭ್ರಷ್ಟಾಚಾರ ವಿರೋಧಿ ಅಲೆ ಎಬ್ಬಿಸಲು ಸಜ್ಜಾಗಿದ್ದಾರೆಸ್ವತಂತ್ರಅಭ್ಯರ್ಥಿ ಸುಜೀತ್ ಮುಳಗುಂದ. ಕಳೆದ ಹತ್ತು ವರ್ಷಗಳಿಂದ ಭ್ರಷ್ಟಾಚಾರ ವಿರೋಧಿ ಪರಿವಾರ ಕಟ್ಟಿಕೊಂಡು ಜಗ-ಜಟ್ಟಿಯಂತೆ ಕಾಳಗಕ್ಕೆ ಇಳಿದಿರುವ ಸುಜಿತ ಈಗ ತಮ್ಮ ಎಂದೆಂದಿನಿಂದ ಜನರೊಂದಿಗಿನ ಒಡನಾಟದ ಕ್ಷಣಗಳ ಮೂಲಕ ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆಗೆ ಇಳಿದಿದ್ದಾರೆ.

ಈ ಕ್ಷೇತ್ರದ ಮಾಜಿ ಶಾಸಕ ಬಿಜೆಪಿಯ ಅಭಯ ಪಾಟೀಲ & ಸುಜಿತ ಮುಳಗುಂದ ಪರಸ್ಪರ ರಾಜಕೀಯ ಬದ್ದ ವೈರಿಗಳಾಗಿ ಮುಖಾಮುಖಿ ಸೆಣಸಲಿದ್ದಾರೆ.

ಮಾಜಿ ಶಾಸಕ ಅಭಯ ಪಾಟೀಲ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಬಹಿರಂಗವಾಗಿ ಹೋರಾಟಕ್ಕಿಳಿದು ಹೆಸರು ಮಾಡಿದ್ದ ಸುಜಿತ್ ಮುಳಗುಂದ ಅವರಿಗೆ ಸಹಜವಾಗಿಯೇ ಬಿಜೆಪಿ ವಿರೋಧಿ ಮನೋಭಾವನೆಯ ಜನತೆಯಿಂದ ವ್ಯಾಪಕ ಬೆಂಬಲ ಸಿಕ್ಕಿದೆ.

ಅಭಯ ಪಾಟೀಲ ಅವರ ನೇರ ಎದುರಾಳಿ ದಿಗ್ಗಜರ ತಂಡದ ಪ್ರತಿನಿಧಿಯಾಗಿ ಸುಜಿತ ಮುಳಗುಂದ ಈಗ ಕಣಕ್ಕೆ ಇಳಿದಿದ್ದು ದಕ್ಷಿಣದಲ್ಲಿ ಸಂಚಲನ ಉಂಟು ಮಾಡಿದ್ದಾರೆ. ಈ ಹಿಂದೆ ಇಲ್ಲಿನ ಶಾಸಕನಾಗಿ ಪ್ರತಿಷ್ಠೆ ಗಿಟ್ಟಿಸಿದ್ದ ಅಭಯ ಪಾಟೀಲ ಅವರಿಗೆ ಸರಿಸಮಾನವಾಗಿ, ಅವರ ವಿರೋಧಿಯಾಗಿ ಸುಜಿತ ಮುಳಗುಂದ ಜನಬೆಂಬಲ ಪಡೆಯುತ್ತಿದ್ದಾರೆ.

ಸುಜಿತ ಹಿಂದೆ ದೊಡ್ಡ ಶಕ್ತಿ:ಹಿರಿಯ ರಾಜಕಾರಣಿ ಹಾಗೂ ಸಂಪಾದಕ ಕಿರಣ ಠಾಕೂರ ಅವರ ಬೆಂಬಲ ಪಡೆದ ಸುಜಿತ ಮುಳಗುಂದ ಈಗ ಎಂಇಎಸ್ ನಾಯಕರು ಹಾಗೂ ಪ್ರಜ್ಞಾವಂತ ನಾಗರಿಕರ ಕೃಪಾಕಟಾಕ್ಷದಲ್ಲಿರುವುದು ಬಿಜೆಪಿಯ ಅಭಯ ಪಾಟೀಲ ಅವರಿಗೆ ಈಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಭಯ ಪಾಟೀಲ ಅವರ ಕಟ್ಟಾ ಬೆಂಬಲಿಗರು ಹಾಗೂ ಅವರ ಪರಮಾಪ್ತ ವಲಯದ ಕೆಲವರು ಅವರಿಂದ ದೂರಾದರು ಎಂಬ ವಿಷಯ ಮತ್ತು ಅಭಯ ಪಾಟೀಲ ಶಾಸಕರಾಗಿದ್ದಾಗ ಕೆಲವರ ಮೇಲೆ ‘ಕೈ’ ಮಾಡಿದರು ಎಂಬ Arrogancy & ಭೂಹಗರಣಗಳ ವಿಷಯದ ಆರೋಪವನ್ನು ಪ್ರಚಾರ ಮಾಡುತ್ತ ಸುಜಿತ ಮುಳಗುಂದ ಅನಿರೀಕ್ಷಿತ ಜನಬೆಂಬಲ ಗಿಟ್ಟಿಸಿದ್ದಾರೆ.

ಚೇಂಬರ್ ಆಫ್ ಕಾಮರ್ಸ್ ನ ಬಸವರಾಜ ಜವಳಿ, ನೀರಾವರಿ ಇಲಾಖೆ ಮುಖ್ಯ ಎಂಜಿನೀಯರಿಂಗ್ ಶಿವಪುತ್ರಪ್ಪ ಖನಗಾಂವಿ, ಮಹಾವೀರ ಪರಮಾಜೆ, ನ್ಯಾ. ಹರ್ಷವರ್ಧನ ಪಾಟೀಲ, ಸಂತೋಷ ಜವರೆ, ಎಂಇಎಸ್ ನ ನಾಯಕ ಹಾಗೂ ಶಾಸಕ ಸಂಭಾಜಿ ಪಾಟೀಲ ಅವರೊಂದಿಗಿನ ಕಲಹ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅಭಯ ಪಾಟೀಲ ಅವರ ನಡುವಳಿಕೆಗಳು ದಕ್ಷಿಣದ ಜನರಿಗೆ ತಿಳಿದಿದೆ, ಜನರೂ ಸಾಕಷ್ಟು ಪ್ರಜ್ಞಾವಂತರಿದ್ದಾರೆ ಎಂದು ಸುಜಿತ ಮುಳಗುಂದ ತಿಳಿಸಿದ್ದಾರೆ.

ಎಂಇಎಸ್ vs ಬಿಜೆಪಿ:ಕಾಂಗ್ರೆಸ್ ಬಿಜೆಪಿ ನಡುವಿನ ತುರುಸಿನ ಸ್ಪರ್ಧೆ ಎಂದು ಚರ್ಚೆಗೆ ಒಳಗಾಗಿದ್ದ ಕ್ಷೇತ್ರ, ಈಗ ಪರೋಕ್ಷವಾಗಿ ಎಂಇಎಸ್ & ಬಿಜೆಪಿ ನಡುವಿನ ಸ್ಪರ್ಧಾ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸನ ಎಂ. ಡಿ. ಲಕ್ಷ್ಮೀನಾರಾಯಣ ಹೊರಗಿನವರಾಗಿ ಇಲ್ಲಿನ ಜನರ ವಿಶ್ವಾಸ ಗಳಿಸುವುದೇ ಕಷ್ಟವಾಗಿದ್ದು, ಇನ್ನೆಲ್ಲಿ ಅವರು ಗೆದ್ದು ಬರುತ್ತಾರೆ ಎಂಬ ಚರ್ಚೆಯ ಮಧ್ಯೆ ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ಎಂಇಎಸ್ ಇಲ್ಲವೇ ಸ್ವತಂತ್ರ ಅಭ್ಯರ್ಥಿಗಳ ಆಯ್ಕೆ ಮಾಡಲಿದ್ದಾರೆ ಎಂಬ ಚರ್ಚೆ ವ್ಯಕ್ತವಾಗುತ್ತಿದೆ. ಅಭಯ ಪಾಟೀಲ ಅವರ ವಿರೋಧಿ ಬಣಗಳ ನಾಯಕರು, ಸಂಘ ಸಂಸ್ಥೆಗಳು ಹಾಗೂ ಜನತೆ ಬೆಳಗಾವಿ ದಕ್ಷಿಣದಲ್ಲಿ ಸುಜಿತ ಮುಳಗುಂದ, ಎನ್. ಎಸ್. ಶಂಕರಾಚಾರ್ಯ ಇಲ್ಲವೇ ಕಿರಣ ಸಾಯನಾಯಕ ಅವರ ಆಯ್ಕೆ ಮಾಡಲು ಮನಸ್ಸು ಮಾಡಿರುವುದು ಗಮನ ಸೆಳೆದಿದೆ.

ಕಾಂಗ್ರೆಸ್ ಗೆ ಅವಕಾಶವಿಲ್ಲ:ಎಂಇಎಸ್ ಕೋಟೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅವಕಾಶವೇ ಇಲ್ಲ; ಅಭ್ಯರ್ಥಿ ಸ್ಥಳೀಕರಾಗಿದ್ದರೆ ಏನಾದರೂ ಸಾಧನೆ ಕಾಂಗ್ರೆಸ್ ಮಾಡಬಹುದಿತ್ತು ಎಂಬುವುದು ನಿರ್ವಿವಿವಾದ ಸಂಗತಿ. ಈಗೇನಿದ್ದರು ಬಿಜೆಪಿಯ ಅಭಯ ಪಾಟೀಲ & ಅವರ ವಿರೋಧಿ ಬಣದ ಸ್ಪರ್ಧಾಳುಗಳ ನಡುವಿನ ನೇರ ಸ್ಪರ್ಧೆ ದಕ್ಷಿಣದಲ್ಲಿ ಉಂಟಾಗಲಿದೆ. ಅಭಯ ಪಾಟೀಲ ಅವರನ್ನು ಹೇಗಾದರೂ ಮಾಡಿ ಚುನಾವಣೆಯಲ್ಲಿ ಸೋಲಿಸುವ ಜಿದ್ದಿಗೆ ಬಿದ್ದಿರುವ ಜನತೆ ಸ್ವತಂತ್ರ ಅಭ್ಯರ್ಥಿ ಸುಜಿತ ಮುಳಗುಂದ, ಎಂಇಎಸ್ ನ ಕಿರಣ ಸಾಯನಾಯಕ ಹಾಗೂ ಎನ್. ಎಸ್. ಶಂಕರಾಚಾರ್ಯ ಬೆನ್ನಿಗೆ ನಿಂತಿದ್ದಾರೆ.‌

ಸುಜಿತ Manifesto:ಸುಜಿತ ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ದಕ್ಷಿಣ ಜನತೆಗೆ ನೀಡಿದ್ದಾರೆ. ಜತೆಗೆ ಕೋಮು ಸಾಮರಸ್ಯ, ಕಾರ್ಮಿಕರಿಗೆ ವಿಮೆ ಮತ್ತು ಆಸ್ಪತ್ರೆ ಸೌಲಭ್ಯ ಹಾಗೂ ಕನಿಷ್ಠ ವೇತನ ಖಾತರಿ, ಕೈಗಾರಿಕಾ ವಸಾಹತು ಸ್ಥಾಪನೆ & ಉದ್ಯೋಗ ಸೃಷ್ಠಿ, ರೈತರ ಕಬಳಿಸಿದ ಭೂಮಿ ಬಿಡಿಸಿಕೊಡುವುದು, ITBT ಕಂಪನಿಗಳ ಸೆಳೆತ, ಖಾಸಗಿ ಶಾಲಾ ಮಾದರಿಯಲ್ಲಿ ಸರಕಾರಿ ಶಾಲೆಗಳ ಉನ್ನತೀಕರಣ, ಮೊಹಲ್ಲಾ ಕ್ಲಿನಿಕ್ ಗಳ ರಚನೆ, ಸಾರಿಗೆ ವ್ಯವಸ್ಥೆ ಜಾಲಬಂಧ ನಿರ್ಮಾಣ, ಗೂಂಡಾಗಿರಿ ಪ್ರವೃತ್ತಿ ನಾಶ ಮಾಡುವ ‘ಅಭಯ’ ನೀಡಿದ್ದಾರೆ. ಸುಜಿತ ಮುಳಗುಂದ ಅವರಿಗೆ ಸಾಮಾನ್ಯ ಜನತೆ ಹಾಗೂ ಸಂಘಟನೆಗಳು ಬೆಂಬಲ ನೀಡಿರುವುದು ಅವರ ಆಯ್ಕೆಯನ್ನು ಸನ್ನಿಹಿತಗೊಳಿಸಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.