ಉತ್ತಮ ಸಮಾಜಕ್ಕಾಗಿ

ಬೆಳಗಾವಿ ನಗರ.ಪೊಲೀಸ್ ಠಾಣಾಗಳಲ್ಲಿ ದಾಖಲಾದ ಪ್ರಕರಣಗಳು

0

1) ಅಪಘಾತದಲ್ಲಿ ಮರಣ ಪ್ರಕರಣ:
1) ದಿನಾಂಕ: 19/01/2017 ರಂದು ಮುಂಜಾನೆ 11 ಗಂಟೆಗೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಾವಿ ವೆಂಗುರ್ಲಾ ರಸ್ತೆಯಲ್ಲಿರುವ ಸುಳಗಾ ರಸ್ತೆಯಲ್ಲಿ ಮೃತ ವಿಠ್ಠಲ ಜಾನಬಾ ಕಾಂಬಳೆ, ವಯಸ್ಸು: 60 ವರ್ಷ, ಸಾ: ಪೆರನೋಲಿ ತಾ: ಆಜರಾ ಈತನು ನಡೆಸುತ್ತಿದ್ದ ಮೋಟರ ಸೈಕಲ್ ನಂ. ಎಂಎಚ್-09/ಡಿಆರ್-7298 ನೇದ್ದರ ಮೇಲೆ ದಯಾನಂದ ತುಕಾರಾಮ ಕಾಂಬಳೆ ಇವನಿಗೆ ಕೂಡ್ರಿಸಿಕೊಂಡು, ಬೆಳಗಾವಿ ಕಡೆಯಿಂದ ಉಚಗಾಂವ ಕಡೆಗೆ ಹೋಗುವಾಗ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ರೋಡ ಬ್ರೇಕ್‍ದ ಮೇಲೆ ಮೋಟರ ಸೈಕಲ್‍ನ್ನು ತನ್ನಿಂದ ತಾನೇ ಜೋರಾಗಿ ಜಿಗಿಸಿ ಅಪಘಾತ ಮಾಡಿ, ಸ್ವಂತ ತಲೆಗೆ ಬಾರೀ ಗಾಯ ಪಡಿಸಿಕೊಂಡು, ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಹೊಂದುವಾಗ ಮದ್ಯಾಹ್ನ 2 ಗಂಟೆಗೆ ಮೃತನಾಗಿದ್ದಲ್ಲದೇ ಹಿಂದೆ ಕುಳಿತವನಿಗೂ ಸಹ ಸಾದಾ ಗಾಯ ಪಡಿಸಿದ ಬಗ್ಗೆ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
2) ದಿನಾಂಕ: 19/01/2017 ರಂದು ರಾತ್ರಿ 11ಃ30 ಗಂಟೆಗೆ ನವೀನ ಅರವಿಂದ ಗಂಗಲ್ ಈತನು ನಡೆಸುತ್ತಿದ್ದ ಮೋಟರ ಸೈಕಲ್ ನಂ. ಕೆಎ-29/ಇಎ-2365 ನೇದ್ದನ್ನು ಬೆಳಗಾವಿ ಖಾನಾಪೂರ ಮೇನ್ ರೋಡ ಕಡೆಯಿಂದ ಉದ್ಯಮಬಾಗ ಜಿಐಟಿ ಕಾಲೇಜ ಗೇಟ್ ಕಡೆಗೆ ಅತೀವೇಗದಿಂದ ನಿಷ್ಕಾಳಜಿತನದಿಂದ ಮಾನವೀಯ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸುತ್ತಾ ಬಂದು ಜಿಐಟಿ ಕಾಲೇಜ ಗೇಟ್ ಎದುರಿಗೆ ರಸ್ತೆಯ ಬದಿಗೆ ಇರುವ ಮಾವಿನ ಮರಕ್ಕೆ ತನ್ನ ಮೋಟರ ಸೈಕಲನ್ನು ಹಾಯಿಸಿ, ಅಪಘಾತ ಮಾಡಿಕೊಂಡು ಪಕ್ಕದಲ್ಲಿಯೇ ಇದ್ದ ತಂತಿಯ ಬೇಲಿ ಮೇಲೆ ಬಿದ್ದು, ಮಾರಣಾಂತಿಕ ಗಾಯ ಹೊಂದಿ ಉಪಚಾರ ಕುರಿತು ಕೆಎಲ್‍ಇ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯದಲ್ಲಿಯೇ ಮರಣ ಹೊಂದಿದ್ದು, ಈ ಬಗ್ಗೆ ಬೆಳಗಾವಿ ಸಂಚಾರಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಿನಾಂಕ: 20/01/2017 ರಂದು ಪ್ರಕರಣ ದಾಖಲಾಗಿರುತ್ತದೆ.
2) ವರದಕ್ಷಿಣೆ ಕಿರುಕುಳ ಪ್ರಕರಣ ಃ
ಶ್ರೀಮತಿ. ಭಾಗ್ಯಜೋತಿ ಕಿರಣ ಹಂಚಿನಮನೆ ಸಾ: ಸೆಕ್ಟರ ನಂ. 5, ಮಾಳಮಾರುತಿ ಬಡಾವಣೆ, ಬೆಳಗಾವಿ ಇವರ ಮದುವೆ ದಿನಾಂಕ: 20/06/2014 ರಂದು ಕಿರಣ ಗಂಗಾರಾಮ ಹಂಚಿನಮನೆ ಸಾ: ಅಂಬೇಡ್ಕರ ಗಲ್ಲಿ, ಜುನ್ನೆ ಬೆಳಗಾವಿ ಇವನೊಂದಿಗೆ ಆಗಿದ್ದು, ಇವಳಿಗೆ ಗಂಡ, ಅತ್ತೆ, ನಾದಿಣಿ, ನಾದಿಣಿಯ ಮಗಳು ಮತ್ತು ನಾದಿಣಿ ಗಂಡ ಇವರೇಲ್ಲರೂ ಮದುವೆ ಆಗಿ ಕೆಲವು ದಿನಗಳ ನಂತರದಿಂದ ಇಲ್ಲಿಯವರೆಗೆ ತವರುಮನೆಯಿಂದ ವರದಕ್ಷಿಣೆ, ಬಂಗಾರ, 2 ಲಕ್ಷ ರೂ ಹಣ ತರಬೇಕು ಅಂತಾ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ಜೀವದ ಬೆದರಿಕೆ ಹಾಕಿದ್ದಲ್ಲದೆ ದಿನಾಂಕ: 09/09/2016 ರಂದು ಬೆಳಗಿನ ಜಾವ ಫಿರ್ಯಾದಿಗೆ ತವರು ಮನೆಗೆ ಬಿಟ್ಟು ಅವಳ ತಂದೆ ಮತ್ತು ಅಣ್ಣನಿಗೆ ಜೀವದ ಧಮಕಿ ಹಾಕಿದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದಿನಾಂಕ: 19/01/2017 ರಂದು ಕಲಂ: 498(ಎ), 323, 504, 506, ಸಕ 34 ಐಪಿಸಿ ಮತ್ತು 4 ವರದಕ್ಷಿಣೆ ಕಿರುಕುಳ ಕಾಯ್ದೆ 1961 ನೇದ್ದರಡಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.