ಉತ್ತಮ ಸಮಾಜಕ್ಕಾಗಿ

ಬೆಳಗಾವಿ ನಗರ.ಪೊಲೀಸ್ ್ದಠಾಣೆಗಳಲ್ಲಿ ದಾಖಲಾದ ಪ್ರಕರಣಗಳ

1

1) ಬೆಳಗಾವಿ ನಗರ ಅಪರಾಧ ಘಟಕದ, ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ್ ಶ್ರೀ. ಬಿ ಆರ್ ಗಡ್ಡೇಕರ. ಹಾಗೂ ಸಿಬ್ಬಂದಿಯವರಿಂದ ಜೂಜಾಟದ ಮೇಲೆ ದಾಳಿ, 31,260/- ರೂ ಜಪ್ತ ಹಾಗೂ 4 ಜನರ ಬಂಧನ ಪ್ರಕರಣ;
ದಿನಾಂಕ: 22/01/2017 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ರೂಪಾಲಿ ಥೇಟರ್ ಹಿಂದೆ, ಸಮರ್ಥ ನಗರದ ಸಾರ್ವಜನಿಕ ಸ್ಥಳದಲ್ಲಿ 1) ಪರಿಮಲ್ ಗಣೇಶ ಜಾಲಗಾರ 2) ಮಹೇಂಧ್ರಸಿಂಗ್ ಪ್ರತಾಪಸಿಂಗ್ 3) ಈರಪ್ಪ ಮಲ್ಲಪ್ಪ ನಾಯಿಕ 4) ಸಚೀನ ರವೀಂದ್ರ ಪಟಾಡೆ ಸಾ: ಎಲ್ಲರೂ ಸಮರ್ಥ ನಗರ, ವಿನಾಯಕ ನಗರ, ಪುಲಭಾಗ ಗಲ್ಲಿ, ಸಮಾದೇವಿ ಗಲ್ಲಿ, ಬೆಳಗಾವಿ ಇವರೆಲ್ಲರೂ ಕೂಡಿ ಇಸ್ಪೇಟ್ ಎಲೆಗಳ ಮೇಲೆ ಅಂದರಬಾಹರ ಎಂಬುವ ಜುಗಾರ ಆಟ ಆಡುತ್ತಿದ್ದಾಗ ಬೆಳಗಾವಿ ನಗರ ಅಪರಾಧ ಘಟಕದ, ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ್ ಶ್ರೀ. ಬಿ ಆರ್ ಗಡ್ಡೇಕರ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, 4 ಜನರನ್ನು ವಶಕ್ಕೆ ಪಡೆದು, ಅವರಿಂದ 31,260/- ರೂ ಜಪ್ತ ಮಾಡಿದ್ದು ಮಾರ್ಕೆಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
2) ಮೋಸ/ ವಂಚನೆ ಪ್ರಕರಣ:
ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಅಜಂ ನಗರದಲ್ಲಿರುವ ಪ್ಯಾರಾ ಅಮೌಂಟ ಅಪಾರ್ಟಮೆಂಟ್ ಮಾಲೀಕ/ ಮ್ಯಾನೆಜರ 1) ಸರ್ಪರಾಜ ಸನದಿ 2) ಕೋತವಾಲ ಯು ಅಜಾ 3) ಖಾಜಿ ಸಾ: ಎಲ್ಲರೂ ಅಜಂ ನಗರ, ಬೆಳಗಾವಿ ಇವರು ಅಪಾರ್ಟಮೆಂಟ್‍ನ್ನು 16 ಜನರಿಗೆ ಮಾರಾಟ ಮಾಡಿದ್ದು, ಅಪಾರ್ಟಮೆಂಟ್‍ಕ್ಕೆ ಸರಿಯಾದ ಬ್ಯಾಕಅಪ್ ಇಲ್ಲದೇ ಲಿಪ್ಟ್ ಕೂಡ್ರಿಸಿ, ಮಾನವ ಜೀವಕ್ಕೆ ಮರಣವನ್ನುಂಟು ಮಾಡಲು ಅಥವಾ ಅವರ ದೈಹಿಕ ಸುರಕ್ಷತೆಗೆ ಅಪಾಯಕ್ಕೀಡು ಮಾಡುವ ನಿರ್ಲಕ್ಷತನದಿಂದ ವರ್ತಿಸಿ, ಅಪಾರ್ಟಮೆಂಟ್ ತೆಗೆದುಕೊಂಡವರಿಗೆ ಮೂಲ ಸೌಲಭ್ಯಗಳನ್ನು ಮಾಡಿಸುತ್ತೇನೆ ಎಂದು ಹೇಳಿ ಮಾಡಿಸದೇ ವಂಚಿಸಿದ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
3) ಕಿಡಕಿಯ ಗ್ಲಾಸ್ ಒಡೆದು, ಲುಕ್ಸಾನ ಪಡಿಸಿ, ಜೀವದ ಬೆದರಿಕೆ ಹಾಕಿದ ಪ್ರಕರಣ:
ದಿನಾಂಕ: 22/01/2016 ರಂದು ಮದ್ಯಾಹ್ನ ಹಿಂದವಾಡಿ ಆದರ್ಶ ನಗರದಲ್ಲಿರುವ ಫಿರ್ಯಾದಿ ಸನತ್‍ಕುಮಾರ ವರ್ಧಮಾನ ವಟಕ್ಕಿ ಇವರ ಮನೆಗೆ 1) ಚನ್ನರಾಜ ಹಟ್ಟಿಹೊಳಿ 2) ಶಂಕರಗೌಡ ಪಾಟೀಲ 3) ಪ್ರಣಯ ಶೆಟ್ಟಿ ಹಾಗೂ 20 ರಿಂದ 22 ಜನ ಇವರೆಲ್ಲರೂ ಬಂದು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮನೆಯ ಒಳಗೆ ಅತೀಕ್ರಮಣ ಪ್ರವೇಶ ಮಾಡಿ, ಫಿರ್ಯಾದಿಯ ಹೆಂಡತಿಗೆ ಲಕ್ಷ್ಮೀ ಹೆಬ್ಬಾಳ್ಕರ ಇವರು ಸನತ್‍ಕುಮಾರ ಇವರಿಗೆ ಸಾಯಿಸಿ ಬರಲು ಹೇಳಿರುತ್ತಾರೆ ಎಲ್ಲಿ ಅವನು ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಮನೆಯ ಕಿಡಕಿ ಗ್ಲಾಸುಗಳಿಗೆ ಕಲ್ಲಿನಿಂದ ಒಗೆದು ಒಡೆದು, 5,000/- ರೂದಷ್ಟು ಲುಕ್ಸಾನ ಪಡಿಸಿ, ನಡುವೆ ಹೋದ ಕುಂತಿನಾತ ಮಹಾವೀರ ಮುರಾಬಟ್ಟಿ ಇವನಿಗೆ ಕ್ಕೈಯಿಂದ ಕಪಾಳಕ್ಕೆ ಬಡೆದಿದ್ದಲ್ಲದೇ ಫಿರ್ಯಾದಿಗೆ ಕೊಲ್ಲುತ್ತೇವೆ ಅಂತಾ ಜೀವ ಬೆದರಿಕೆ ಹಾಕಿದ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
4) ಕೊಲೆಗೆ ಪ್ರಯತ್ನ ಪ್ರಕರಣ:
ದಿನಾಂಕ: 22/01/2017 ರಂದು ಸಾಯಂಕಾಲ 5ಃ15 ಗಂಟೆಯ ಸುಮಾರಿಗೆ ಅಟೋ ನಗರ ಲಾಸ್ಟ್ ಕ್ರಾಸ್‍ದಲ್ಲಿ, ಫಿರ್ಯಾದಿ ಆಸೀಪ್ ದಸ್ತಗಿರಸಾಬ ಅತ್ತಾರ ಈತನು ಮಹೇಂದ್ರ ಪಿಕ್‍ಅಪ್ ಗೂಡ್ಸ ವಾಹನದಲ್ಲಿ ದನದ ಮಾಂಸ ಸಾಗಿಸುತ್ತಿದ್ದಾಗ, ಯಾರೋ ಒಬ್ಬನು ಮೋಟರ ಸೈಕಲ್ ಮೇಲೆ ಫಿರ್ಯಾದಿಯ ವಾಹನಕ್ಕೆ ಬೆನಟ್ಟಿ ಬಂದು, ವಾಹನಕ್ಕೆ ಅಡ್ಡಗಟ್ಟಿ, ತರುಬಿ ಅವಾಚ್ಯ ಶಬ್ದಗಳಿಂದ ಬೈದು, ಮುಂದಿನ ಗ್ಲಾಸ್ ಒಡೆದು, 7-8 ಜನರನ್ನು ಸೇರಿಸಿ, ವಾಹನದ ತಾಡಪತ್ರಿ ಹರಿದು, ಡಿಸೈಲ್ ಪೈಪ್‍ನ್ನು ಕಿತ್ತು, ಪೆಟ್ರೋಲ್ ಗೊಜ್ಜಿ, ವಾಹನಕ್ಕೆ ಬೆಂಕಿ ಹಚ್ಚಿ, ವಾಹನದಲ್ಲಿರುವ ಹಮಾಲರಾದ ಯಾಸೀನ ಇಬ್ರಾಹಿಂ ಮುಲ್ಲಾ ಮತ್ತು ಮತ್ತು ಮಲ್ಲಪ್ಪ ನಾಗಪ್ಪ ತಳವಾರ ಇವರಿಗೆ ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ, ವಾಹನ ಸುಟ್ಟು ಸುಮರು 4 ಲಕ್ಷದಷ್ಟು ಲುಕ್ಸಾನ ಪಡಿಸಿದ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
5) ಸಾರ್ವಜನಿಕ ಸ್ಥಳದಲ್ಲಿಯ ಬೋರ್ಡನ್ನು ಹರಿಯಲು ಪ್ರಯತ್ನಿಸಿದ ಪ್ರಕರಣ:
ದಿನಾಂಕ: 22/01/2017 ರಂದು ಲಕ್ಷ್ಮೀಟೇಕ್ ಸೈನಿಕ ನಗರದಲ್ಲಿ ಮೋಹನ ಸೀತಾರಾಮ ಕಂಗ್ರಾಳ್ಕರ ಹಾಗೂ ಅವರ ಸಮಾಜದ ಜನರು ಕೂಡಿಕೊಂಡು ರಸ್ತೆಯ ದಂಡೆಯಲ್ಲಿ ಬುದ್ದಂ ಕಾಲನಿ ವಾರ್ಡ ನಂ. 43, ಸಿಟಿ ಕಾರ್ಪೋರೇಶನ್ ಸೈನಿಕ ರೋಡ, ಲಕ್ಷ್ಮೀ ಟೇಕಡಿ, ಬೆಳಗಾವಿಯಲ್ಲಿ ಬುದ್ದ ಮತ್ತು ಅಂಬೇಡ್ಕರ ರವರ ಭಾವಚಿತ್ರ ಇದ್ದ ಬೋರ್ಡನ್ನು ಆರೋಪಿ ಶಿವಶಂಕರ ಚವ್ಹಾನ ಹರಿದಿರುತ್ತಾನೆ ಎಂದು ಸಂಶಯ ಇದ್ದ ಬಗ್ಗೆ, ನೀಡಿದ ದೂರಿನಂತೆ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

1 Comment
  1. L,Babu says

    Very good news keep it up sir

Leave A Reply

 Click this button or press Ctrl+G to toggle between Kannada and English

Your email address will not be published.