ಉತ್ತಮ ಸಮಾಜಕ್ಕಾಗಿ

ಬೆಳಗಾವಿ : ಮಧ್ಯಾಹ್ನ ಉಳಿದ ಅನ್ನ ರಾತ್ರಿ ತಿನ್ನಬೇಕು – ಹಾಸ್ಟೆಲ್ ವಿಧ್ಯಾರ್ಥಿಗಳ ಪ್ರತಿಭಟನೆ

0

ಬೆಳಗಾವಿ : ಮಧ್ಯಾಹ್ನ ಉಳಿದ ಅನ್ನ ರಾತ್ರಿ ತಿನ್ನಬೇಕು – ಹಾಸ್ಟೆಲ್ ವಿಧ್ಯಾರ್ಥಿಗಳ ಪ್ರತಿಭಟನೆ

ಬೆಳಗಾವಿ: ಊಟ ಸರಿಯಾಗಿ ಕೊಡುತ್ತಿಲ್ಲ ಎಂದು ಅಹೋರಾತ್ರಿ  ಹಾಸ್ಟೆಲ್ ಮುಂಭಾಗದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ‌ ನಡೆಸಿದ್ದಾರೆ.

ಬೆಳಗಾವಿಯ ಅಜಮನಗರದ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಳಿದ ಅನ್ನ ರಾತ್ರಿ ಊಟಕ್ಕೆ ಬೆರಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು.ಮಧ್ಯಾಹ್ನ ಉಳಿದ ಅನ್ನವನ್ನು ರಾತ್ರಿ ಊಟಕ್ಕೆ ಅಡುಗೆಯಲ್ಲಿ  ಬೇರೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಷ ಆಹಾರ ಸೇವಿಸಿ ವಿದ್ಯಾರ್ಥಿಗಳು ಕಾಯಿಲೆ ಬಿಳುತ್ತಾ ಇದ್ದಾರೆ. ಇದು‌ ಒಂದು ಬಾರಿ ಈ ರೀತಿ ಆಗಿಲ್ಲಾ ಯಾವಾಗಲೂ ಇದೇ ರೀತಿ‌ ಹಾಸ್ಟೇಲ್ ನಲ್ಲಿ  ನಡೆದಿದೆ. ಆದರೆ ವಿದ್ಯಾರ್ಥಿಗಳು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲಾ ಎಂದು ವಿದ್ಯಾರ್ಥಿಗಳು ಈ ಸಮಯದಲ್ಲಿ‌ ಆರೋಪಿಸಿದರು.

ರಾತ್ರಿಯಲ್ಲಾ ವಿದ್ಯಾರ್ಥಿಗಳು ಊಟ ಮಾಡದೇ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿದ್ದಾರೆ.

ಸ್ಥಳಕ್ಕೆ    ಸಮಾಜ ಕಲ್ಯಾಣ ಇಲಾಖೆ  ಜೆಡಿ  ಉಮಾ‌ ಸಾಲಿಗೌಡರ,ಸಹಾಯಕ‌‌ ನಿರ್ದೇಶಕರಾದ ಗೋಪಾಲಕೃಷ್ಣ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. ////

The post ಬೆಳಗಾವಿ : ಮಧ್ಯಾಹ್ನ ಉಳಿದ ಅನ್ನ ರಾತ್ರಿ ತಿನ್ನಬೇಕು – ಹಾಸ್ಟೆಲ್ ವಿಧ್ಯಾರ್ಥಿಗಳ ಪ್ರತಿಭಟನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.