ಉತ್ತಮ ಸಮಾಜಕ್ಕಾಗಿ

ಬೆಳಗಾವಿ : ರಾಜಕೀಯ ಸೇಡಿಗೆ ಜಿಲ್ಲಾಧಿಕಾರಿ ವರ್ಗಾವಣೆ – ಖಂಡಿಸಿ ಪ್ರತಿಭಟನೆ

0

ಬೆಳಗಾವಿ : ರಾಜಕೀಯ ಸೇಡಿಗೆ ಜಿಲ್ಲಾಧಿಕಾರಿ ವರ್ಗಾವಣೆ – ಖಂಡಿಸಿ ಪ್ರತಿಭಟನೆ

ಜಿಲ್ಲಾಧಿಕಾರಿ ಜಿಯಾವುಲ್ಲಾರವರನ್ನು ವರ್ಗ ಮಾಡಿದರೆ ತೀವ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ರೈತಸಂಘಟನೆಗಳು ಖಡಕ್ ಎಚ್ಚರಿಕೆ ನೀಡಿವೆ.
ಬೆಳಗಾವಿ : ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ರವರನ್ನು ವರ್ಗಾಯಿಸಿದರೆ ತೀವ್ರ ತರನಾದ ಹೋರಾಟ ಹಾಗೂ ಪ್ರತಿಭಟನೆ ಮಾಡಲಾಗುವುದು ಎಚ್ಚರ ಎಂದು ರೈತ ಸಂಘಟನೆಗಳು ಆಗ್ರಹಿಸಿದ್ದು, ಇಂದು ಪ್ರತಿಭಟನೆ ನಡೆಸಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದ ಶ್ರೀ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಕಬ್ಬಿನ ಬಾಕಿ ಬಿಲ್ ರೈತರಿಗೆ ಕೊಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದ ಜಿಲ್ಲಾಧಿಕಾರಿಯನ್ನು ರಾಜಕೀಯ ಸೇಡಿಗೆ ವರ್ಗಾವಣೆ ಮಾಡಿಸಲಾಗುತ್ತಿರುವ ವಿಷಯ ಖೇದಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಧ್ವನಿಗೆ ಕಿವಿಗೊಡುತ್ತಿರುವ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರನ್ನು ಕುಮಾರಸ್ವಾಮಿ ನೇತೃತ್ವದ ಸರಕಾರ ಯಾವುದೇ ಕಾರಣಕ್ಕೂ ಬೆಳಗಾವಿಯಿಂದ ವರ್ಗ ಮಾಡಬಾರದು ಎಂದು ರೈತ ಸಂಘಟನೆಗಳು ಆಗ್ರಹಿಸಿದವು.

ಅಷ್ಟೇ ಅಲ್ಲದೆ ರೈತಪರ ಜಿಲ್ಲಾಧಿಕಾರಿ ಜಿಯಾವುಲ್ಲಾ ಬೇಕೆ ಬೇಕು…! ಎಂದು ಘೋಷಣೆಗಳನ್ನು ಕೂಗಲಾಯಿತು.

ಚೂನಪ್ಪ ಪೂಜಾರಿ, ಅಶೋಕ ಯಮಕನಮರಡಿ, ಜಯಶ್ರೀ ಗುರನ್ನವರ, ಮಹಾದೇವ ಮಡಿವಾಳ, ಪ್ರಕಾಶ ನಾಯಕ, ಮಲ್ಲಿಕಾರ್ಜುನ ರಾಮದುರ್ಗ, ಈರಣ್ ಸಸಾಲಟ್ಟಿ,  ಶಿವಾನಂದ ದೊಡ್ಡವಾಡ ಇತರರು ಭಾಗವಹಿಸಿದರು. ರೈತರ ಧರಣಿಯಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು. ////

The post ಬೆಳಗಾವಿ : ರಾಜಕೀಯ ಸೇಡಿಗೆ ಜಿಲ್ಲಾಧಿಕಾರಿ ವರ್ಗಾವಣೆ – ಖಂಡಿಸಿ ಪ್ರತಿಭಟನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.