ಉತ್ತಮ ಸಮಾಜಕ್ಕಾಗಿ

ಬೇಜಬ್ಧಾರಿ ಹೇಳಿಕೆ ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ,ಸಿಎಂ ಗೆ ಬಿ.ಎಸ್.ವೈ ಸಲಹೆ

0

BSY advises CM to do development without leaving the statement

ಬೇಜಬ್ಧಾರಿ ಹೇಳಿಕೆ ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ,ಸಿಎಂ ಗೆ ಬಿ.ಎಸ್.ವೈ ಸಲಹೆ

ಅರಸೀಕೆರೆ: ಜೂಜಾಟದಲ್ಲಿ ಇರುವವರು ಹಣಕಾಸಿನ ಅಗತ್ಯತೆ ನೀಡುತ್ತಿದ್ದಾರೆ ಈ ಬಗ್ಗೆ ಸೂಕ್ತ ತನಿಖೆ ಮಾಡಲಿ ಎಂದು ಬೇಜವಬ್ಧಾರಿ ಹೇಳಿಕೆ ಬಿಟ್ಟು ರಾಜ್ಯದ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಒತ್ತು ಕೊಡಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಲಹೆ ನೀಡಿದರು.

ಅರಸೀಕೆರೆ ನಗರದ ಜಲಜಾಕ್ಷಿ ಕಲ್ಯಾಣ ಮಂಟಪದ ಹತ್ತಿರ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ದೃಶ್ಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಾವು ನೂರಾ ನಾಲ್ಕು ಜನ ಶಾಸಕರು ಪ್ರತಿಪಕ್ಷದಲ್ಲಿದ್ದು, ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗಬೇಕೆಂದಿದ್ದೇವೆ.

ಕಾಂಗ್ರೆಸ್ ಪಕ್ಷದ ಒಳ ಜಗಳಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಅನಗತ್ಯವಾಗಿ ನಮ್ಮನ್ನು ಎಳೆಯುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದವರು ಜೂಜಾಟ ಮಾಡುವವರು ಹಣಕಾಸಿನ ಅಗತ್ಯವನ್ನು ನೀಡುತ್ತಿದ್ದಾರೆಂದು ಹೇಳುತ್ತಿದ್ದು, ಈ ಬಗ್ಗೆ ತನಿಖೆ ಮಾಡಬೇಕು ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಇದು ಅವರ ದೌರ್ಬಲ್ಯವನ್ನು ತೋರಿಸುತ್ತದೆ ಈ ರೀತಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡದೆ ಪ್ರಾಮಾಣಿಕವಾಗಿ ಒಂದಿಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಲ್ಲಿದೆ ಅಭಿವೃದ್ಧಿ ಕಾರ್ಯ ?

ನೀರಾವರಿ ಯೋಜನೆ ಪಿಡಬ್ಲುಡಿ ಕೆಲಸಗಳು ನಿಂತು ಹೋಗಿವೆ ಬರಗಾಲದಿಂದ ಜನ ತತ್ತರಿಸಿ ಹೋಗಿದ್ದಾರೆ. ಅಭಿವೃದ್ಧಿ ಕೆಲಸ ಮಾಡದೆ ಕೇವಲ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ನಿಂತು ಹೋಗಿರುವ ಕೆಲಸಗಳನ್ನು ಬೇರೆ ಕಡೆಗೆ ಗಮನ ಸೆಳೆಯುವ ರೀತಿ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ದೂರಿದರು.

ಅದರ ಬದಲು ಗೌರವಿತವಾಗಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಲಿ ನಾವು ಆಪರೇಷನ್ ಕಮಲಕ್ಕೆ ಕೈಹಾಕುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಏನು ನಡೆಯುತ್ತಿದೆಯೋ ನಮಗೆ ಗೊತ್ತಿಲ್ಲ ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬ ಪ್ರಶ್ನೆಗೆ ಜೆಡಿಎಸ್ ನವರು ಸತ್ಯ ಹೇಳುತ್ತಾರೆ ಎಂದು ನಿಮಗೆ ಅರ್ಥವಾಗುತ್ತಿದೆಯೇ ಇನ್ನು ಕೆಲವು ದಿನಗಳಲ್ಲಿ ನಿಮಗೆ ಗೊತ್ತಾಗುತ್ತದೆ.

ಜೆಡಿಎಸ್ ರಾಜ್ಯಾಧ್ಯಕ್ಷರು ಬಿಜೆಪಿಯವರು ಸರ್ಕಾರವನ್ನು ಪತನಗೊಳಿಸಲು ಜಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ನಾವು ಸರ್ಕಾರದ ಪತನದ ಬಗ್ಗೆ ಜಪ ಮಾಡುತ್ತಿಲ್ಲ ಜೆಡಿಎಸ್ ನವರು ಅವರ ಪಕ್ಷವನ್ನು ಉಳಿಸಿಕೊಂಡು ಒಗ್ಗಟ್ಟಾಗಿದ್ದು ಒಳ್ಳೆಯ ಆಡಳಿತ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ////

The post ಬೇಜಬ್ಧಾರಿ ಹೇಳಿಕೆ ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ,ಸಿಎಂ ಗೆ ಬಿ.ಎಸ್.ವೈ ಸಲಹೆ appeared first on Prajaa News.

Source link

ಬೇಜಬ್ಧಾರಿ ಹೇಳಿಕೆ ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ,ಸಿಎಂ ಗೆ ಬಿ.ಎಸ್.ವೈ ಸಲಹೆ

Leave A Reply

 Click this button or press Ctrl+G to toggle between Kannada and English

Your email address will not be published.