ಉತ್ತಮ ಸಮಾಜಕ್ಕಾಗಿ

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಮೂವರಿಗೆ ತೀವ್ರ ಪೆಟ್ಟು

0

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಮೂವರಿಗೆ ತೀವ್ರ ಪೆಟ್ಟು

ಹನೂರು : ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಾಸ್ಸಾಗುತ್ತಿದ್ದ ವೇಳೆ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಹನೂರು ಸಮೀಪದ ಹುಲುಸುಗುಡ್ಡೆಯ ಬಳಿ ನಡೆದಿದೆ.

Hanur News Kannada

ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ಪ್ರಕಾಶಪ್ಪ ಅವರ ಮಗ ಸುರೇಶ್ (೫೨), ಪುತ್ರ ಪವನ್ (೧೦) ಮಾವ ಶಿವಕುಮಾರ್ (೫೮) ಎಂಬವರೇ ಗಾಯಗೊಂಡವರು.

ಈ ಮೂವರು ಶುಕ್ರವಾರ ಬೆಳಗ್ಗೆ ಗ್ರಾಮದಿಂದ ಬೈಕ್‌ನಲ್ಲಿ ಮಲೆಮಹದೇಶ್ವರ ತೆರಳಿ ಪೂಜೆ ಸಲ್ಲಿಸಿ ಸಂಜೆ ೫ರ ವೇಳೆಯಲ್ಲಿ ವಾಪಾಸ್ಸಾಗುತ್ತಿದ್ದರು. ಈ ವೇಳೆ ಹನೂರು ಸಮೀಪದ ಹುಲುಸುಗುಡ್ಡೆಯ ಬಳಿ ಎದುರು ಬಂದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.

ಪರಿಣಾಮ ಸುರೇಶ್ ಎಂಬವರ ತಲೆಗೆ ತೀವ್ರ ಪೆಟ್ಟಾಗಿದ್ದರೆ ಪವನ್ ಹಾಗೂ ಶಿವಕುಮಾರ್ ಗಾಯಗೊಂಡರು.

ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಈ ಬಗ್ಗೆ ಪೋಲಿಸರ ಗಮನಕ್ಕೆ ತಂದು 108 ವಾಹನದ ಮೂಲಕ ಸಮೀಪದ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದರು.

ತೀವ್ರ ಗಾಯಗೊಂಡ ಸುರೇಶ್ ಎಂಬವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನೆ ಮಾಡಿದ್ದಾರೆ. ಈ ಸಂಬಂಧ ಹನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ////

WebTitle : ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಮೂವರಿಗೆ ತೀವ್ರ ಪೆಟ್ಟು – Bike hit the Bike and three were severely injured

>>> ಕನ್ನಡ ನ್ಯೂಸ್ ಗಾಗಿ ಕ್ಲಿಕ್ಕಿಸಿ : Chamarajanagar News Kannada | Chamarajanagar News Online | Kannada Crime News | Karnataka Crime News

Kannada Crime News

The post ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಮೂವರಿಗೆ ತೀವ್ರ ಪೆಟ್ಟು appeared first on News Belgaum.

Source link

ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಮೂವರಿಗೆ ತೀವ್ರ ಪೆಟ್ಟು

Leave A Reply

 Click this button or press Ctrl+G to toggle between Kannada and English

Your email address will not be published.