ಉತ್ತಮ ಸಮಾಜಕ್ಕಾಗಿ

ಬೈಲಹೊಂಗಲ ತಾಲೂಕಾ ಮಟ್ಟದ ಯುವಜನಮೇಳ

0

ಬೆಳಗಾವಿ, ಜನವರಿ 20): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ತಾಲೂಕು ಪಂಚಾಯತ ಬೈಲಹೊಂಗಲ, ಗ್ರಾಮ ಪಂಚಾಯತ ನೇಸರಗಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ ಯುವ ಕಲಾವಿದರ ಗ್ರಾಮೀಣ ಸೇವಾ ಸಂಘ, ನೇಸರಗಿ ಮತ್ತು ಮೃತ್ಯುಂಜಯ ಜಾನಪದ ಕಲಾವಿದರ ಸಂಘ, ನಾಗನೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ 2016-17ನೇ ಸಾಲಿನ ಬೈಲಹೊಂಗಲ ತಾಲೂಕಾ ಮಟ್ಟದ ಯುವಜನಮೇಳವು ಜನವರಿ 24 ರಂದು ಸಾಯಂಕಾಲ 4 ಗಂಟೆಗೆ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಶ್ರೀ ಚನ್ನವೃಷಬೇಂದ್ರ ದೇವಸ್ಥಾನದ ಆವರಣದಲ್ಲಿ ಜರುಗಲಿದೆ.

ಈ ಕಾರ್ಯಕ್ರಮವು 15 ರಿಂದ 35 ವರ್ಷದೊಳಗಿನ ಯುವಕ/ ಯುವತಿಯರಿಗಾಗಿ ಮಾತ್ರ ನಡೆಯಲಿದ್ದು ಇದರಲ್ಲಿ ಭಾವಗೀತೆ, ಗೀಗಿಪದ, ಲಾವಣಿ, ಕೋಲಾಟ, ವೀರಗಾಸೆ ನೃತ್ಯ, ಡೊಳ್ಳು ಕುಣಿತ, ರಂಗಗೀತೆ, ಜಾನಪದ ನೃತ್ಯ, ಬೀಸುವ ಪದ, ಸೋಬಾನ ಪದ, ಭಜನೆ, ಜಾನಪದ ಗೀತೆ, ದೊಡ್ಡಾಟ, ಮೂಡಲ ಪಾಯ, ಸಣ್ಣಾಟ, ಯಕ್ಷಗಾನ, ಚರ್ಮವಾಧ್ಯ, ಏಕಪಾತ್ರಾಭಿನಯ ಮೊದಲಾದ ಸ್ಪರ್ಧೆಗಳನ್ನು ನಡೆಸಲಾಗುವುದು.
ಬೈಲಹೊಂಗಲ ತಾಲೂಕಿನ ವ್ಯಾಪ್ತಿಗೆ ಒಳಪಡುವ ಎಲ್ಲ ಸಂಘ ಸಂಸ್ಥೆಗಳು/ ಭಜನಾ ಮಂಡಳಗಳು/ ಶಾಲಾ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು/ಯುವಕ, ಯುವತಿಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿರುತ್ತದೆ. ಭಾಗವಹಿಸಲಿಚ್ಛಿಸುವವರು ಜನವರಿ 24ರಂದು ಮದ್ಯಾಹ್ನ 1 ಗಂಟೆಯೊಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9686074239 ಅಥವಾ 9845179967ನ್ನು ಸಂಪರ್ಕಿಸಬಹುದು.

Leave A Reply

 Click this button or press Ctrl+G to toggle between Kannada and English

Your email address will not be published.