ಉತ್ತಮ ಸಮಾಜಕ್ಕಾಗಿ

ಭೀಕರ ಅಪಘಾತ ಶಾಲಾ ಶಿಕ್ಷಕ ಸಾವು

0

ಭೀಕರ ಅಪಘಾತ ಶಾಲಾ ಶಿಕ್ಷಕ ಸಾವು

ರಸ್ತೆ ಅಪಘಾತ ಹೈಸ್ಕೂಲ್ ಟೀಚರ್ ಸ್ಥಳದಲ್ಲೆ ಮೃತ ಪಟ್ಟ ಧಾರುಣ ಘಟನೆ ಚಾಮರಾಜನಗರ ಪಟ್ಟಣದಲ್ಲಿ ನಡೆದಿದೆ.

ಚಾಮರಾಜನಗರ : ಶನಿವಾರ ಬೆಳಗಿನ ತರಗತಿಗೆ ಮನೆಯಿಂದ ಬೈಕ್‌ನಲ್ಲಿ ಶಾಲೆ ಕಡೆಗೆ ಹೊರಟ್ಟಿದ್ದ ಶಿಕ್ಷಕ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಚಾಮರಾಜನಗರ ಪಟ್ಟಣದಲ್ಲಿ ನಡೆದಿದೆ.

ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದಲ್ಲಿರುವ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದ ಸೋಮವಾರಪೇಟೆ ಬಡಾವಣೆಯ ಭಿಮೇಶ್ ರವರು ನೆನ್ನೆ ಶನಿವಾರವಾಗಿದ್ದರಿಂದ ಬೆಳಗಿನ ತರಗತಿಗಾಗಿ ಬೈಕ್ ಹತ್ತಿ ಶಾಲೆ ಕಡೆಗೆ ಹೊರಟವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಚಾಮರಾಜನಗರ ಸಮೀಪದ ಸೋಮವಾರ ಪೇಟೆ ಬಳಿ ಶಿಕ್ಷರ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವದಿಂದ ಸ್ಥಳದಲ್ಲೆ ಶಿಕ್ಷಕ ಭೀಮೇಶ್ ಮೃತಪಟ್ಟರು.

ಕೂಡಲೇ ಸಂಚಾರಿ ಪೊಲೀಸರು ಆಗಮಿಸಿ, ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಅಪಘಾತ ನಡೆಸಿದ ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಶಿಕ್ಷಕ ಭಿಮೇಶ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ರಜೆ ನೀಡಿ, ಜಿಲ್ಲಾಸ್ಪತ್ರೆಗೆ ಶಾಲೆಯ ಇನ್ನಿತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಗಮಿಸಿ ನೆಚ್ಚಿನ ಶಿಕ್ಷಕನ ಅಗಲಿಕೆ ಬಗ್ಗೆ ಮರಗಿದರು.

ಶಿಕ್ಷಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಶವಗಾರದಲ್ಲಿ ಮೃತ ದೇಹವನ್ನು ವೀಕ್ಷಿಸಿದರು. //// ವರದಿ : ರವಿಶ್ರೀ ಚಾಮರಾಜನಗರ

Kannada Crime News

The post ಭೀಕರ ಅಪಘಾತ ಶಾಲಾ ಶಿಕ್ಷಕ ಸಾವು appeared first on News Belgaum.

Source link

ಭೀಕರ ಅಪಘಾತ ಶಾಲಾ ಶಿಕ್ಷಕ ಸಾವು

Leave A Reply

 Click this button or press Ctrl+G to toggle between Kannada and English

Your email address will not be published.